Advertisement
ನಗರದ ಮಹಾನಗರ ಪಾಲಿಕೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,ಜಿಲ್ಲೆಯ ಕೊರೊನಾ ಹಾಟ್‌ಸ್ಪಾಟ್ ಆಗಿರುವತುಮಕೂರು ನಗರದಲ್ಲಿ ಕೋವಿಡ್ ಸೋಂಕನ್ನು ಇಳಿಮುಖ ವಾಗಿಸಲು ಪಾಲಿಕೆಹಲವು ಕ್ರಮ ಕೈಗೊಳ್ಳುತ್ತಿದೆ. ನಗರದಲ್ಲಿ440,0 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲೆಯಲ್ಲಿ ಅಧಿಕ ಸೋಂಕಿತರ ಪ್ರದೇಶವಾಗಿಮಾರ್ಪಟ್ಟಿದೆ. ನಗರದ ಸೋಂಕಿನ ಸರಪಳಿ ಕಳಚಲು ಪಾಲಿಕೆ, ಆರೋಗ್ಯ ಇಲಾಖೆ, ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿಸ್ವಯಂಸೇವಕರು, ಪಾಲಿಕೆ ಸಿಬ್ಬಂದಿ ಮೂಲಕಹೆಚ್ಚು ಗಂಟಲು ದ್ರವ ಪರೀಕ್ಷೆ, ವ್ಯಾಕ್ಸಿನೇಷನ್,ಸೋಂಕಿತರ ಮನೆ ಮನೆಗೆ ತೆರಳಿ ಆಕ್ಸಿಜನ್ ಪಲ್ಸ್ ರೇಟ್ ಪರಿಶೀಲನೆ ಕಾರ್ಯ ಮಾಡುತ್ತಿದ್ದು, 1,463 ಮಂದಿ ಸದ್ಯಕ್ಕೆ ಸೋಂಕಿತರಾಗಿ ಹೋಂ ಐಸೋಲೇಷನ್ ನಲ್ಲಿದ್ದಾರೆ. ಅವರಲ್ಲಿ ಅರ್ಹರಿಗೆ ಆಹಾರ, ಮೆಡಿಕಲ್ ಕಿಟ್ ಪೂರೈಸುವ ಕಾರ್ಯ ಮಾಡುತ್ತಿದೆ ಎಂದರು.
Related Articles
Advertisement
ಸೋಂಕಿತರ ಮನೆ ಡೀಸಿ ಭೇಟಿ: ನಗರದಲ್ಲಿ ಕೋವಿಡ್ ಸೋಂಕಿತರಾಗಿಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿ ಇದ್ದು, ಚಿಕಿತ್ಸೆ ಪಡೆಯುವ ಸೋಂಕಿತರ ಮನೆಗಳಿಗೆ ಸೋಮವಾರ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಪಾಲಿಕೆ ಆಯುಕ್ತೆ ರೇಣುಕಾ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಸೋಂಕಿತರ ಕುಟುಂಬದವರಿಂದ ಮಾಹಿತಿ ಪಡೆದು ಸೋಂಕಿತರಿಗೆ ಧೈರ್ಯ ತುಂಬಿದರು.
ಸೋಂಕಿತರಿಗೆ ನೆರವು ನೀಡಲು ನಮ್ಮಲ್ಲಿ ಆಶಾ, ಆರೋಗ್ಯಕಾರ್ಯಕರ್ತೆಯರು ಹೆಚ್ಚುಇಲ್ಲದ ಕಾರಣ ಸ್ವಯಂ ಸೇವಕರನ್ನುನೇಮಕ ಮಾಡಿದ್ದು,ಸ್ವಯಂಸೇವಕರು ಉತ್ತಮ ಕೆಲಸಮಾಡುತ್ತಿದ್ದಾರೆ. ಇವರಿಂದಸೋಂಕಿತರಿಗೆ ಹೆಚ್ಚು ನೆರವು ದೊರೆಯುತ್ತಿದೆ. ಸೋಂಕಿತರಲ್ಲಿನಮ್ಮನ್ನು ವಿಚಾರಿಸುವವರು ಇದ್ದಾರೆ ಎನ್ನುವ ಆತ್ಮವಿಶ್ವಾಸ ಮೂಡಿದೆ.-ರೇಣುಕಾ ಆಯುಕ್ತೆ