Advertisement
1.6 ಲಕ್ಷ ಇಳಿಕೆ2017 - 18 ಮತ್ತು 2018-19ನೇ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ವಿದೇಶದಲ್ಲಿ ವ್ಯಾಸಾಂಗ ಮಾಡುವ ಭಾರತೀಯ ಸಂಖ್ಯೆಯಲ್ಲಿ ಶೇ. 21 ಇಳಿಕೆಯಾಗಿದೆ. ಅಂದರೆ ಸುಮಾರು 1.66 ಲಕ್ಷ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ.
ವಿಶೇಷವಾಗಿ ಅಮೆರಿಕಕ್ಕೆ ತೆರಳಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಅಮೆರಿಕದಲ್ಲಿ ಆಡಳಿತಕ್ಕೆ ಬರುವ ನೂತನ ಸರಕಾರಗಳ ಕೆಲವು ನಿರ್ಧಾರಗಳು ಅಲ್ಲಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರ ಮೇಲೆ ಪರಿಣಾಮ ಬೀರುತ್ತದೆ. ಇಲ್ಲಿಯೂ ಅದೇ ಕಾರಣ ಎಂದು ಹೇಳಲಾಗುತ್ತಿದೆ. 2.38 ಲಕ್ಷ ಕಡಿಮೆ
ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಅಮೆರಿಕದಲ್ಲಿ ವ್ಯಾಸಾಂಗ ಮಾಡುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. 2017 - 18ನೇ ಸಾಲಿನಲ್ಲಿ 4,47,836 ವಿದ್ಯಾರ್ಥಿಗಳು ಅಮೆರಿಕದಲ್ಲಿದ್ದರು. ಆದರೆ 2018-19ರ ಶೈಕ್ಷಣಿಕ ವರ್ಷದಲ್ಲಿ 2,09,063 ವಿದ್ಯಾರ್ಥಿಗಳು ಮಾತ್ರ ಉನ್ನತ ವ್ಯಾಸಾಂಗಕ್ಕಾಗಿ ಅಮೆರಿಕ ತೆರಳಿದ್ದಾರೆ.
Related Articles
ವಿಶೇಷವಾಗಿ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ಹೊಸ ಸರಕಾರ ಅಸಿತ್ವಕ್ಕೆ ಬಂದ ಬಳಿಕ ಕಠಿನ ನಿಯಮಗಳನ್ನು ಜಾರಿಗೆ ತರಲಾಗಿದೆ. ಇದು ಪರೋಕ್ಷವಾಗಿ ಅಲ್ಲಿ ಓದುವ ವಿದೇಶಿ ವಿದ್ಯಾರ್ಥಿಗಳ ಮೇಲೆಯೂ ಪರಿಣಾಮ ಬೀರುತ್ತದೆ. ಅಮೆರಿಕ ವಿಸಾ ನಿಯಾಮವಳಿಗಳನ್ನು ಬಿಗಿ ಮಾಡಿದ್ದು ಇದು ಆ ದೇಶದಲ್ಲಿ ಓದುವ ವಿದ್ಯಾರ್ಥಿ ಸಮುದಾಯಕ್ಕೆ ಹೊರೆಯಾಗುತ್ತಿದೆ.
Advertisement
ಬೇರೆ ಕಡೆ ಸಮಸ್ಯೆ ಇಲ್ಲವರದಿಯ ಪ್ರಕಾರ ಅಮೆರಿಕದಲ್ಲಿ ಮಾತ್ರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಉಳಿದ ರಾಷ್ಟ್ರಗಳಲ್ಲಿ ಯಾವುದೇ ತೊಂದರೆಗಳು ಇಲ್ಲ. ಪ್ರಮುಖವಾಗಿ ಆಸ್ಟ್ರೇಲಿಯಾ, ರಷ್ಯಾ, ಕೆನಡ, ಮಲೇಷಿಯಾ, ಇಂಗ್ಲೆಂಡ್, ಚೀನದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿಲ್ಲ. 2017-18ರಲ್ಲಿ 93,832 ಇದ್ದು, 2018-19ರಲ್ಲಿ 1,23,851 ವಿದ್ಯಾರ್ಥಿಗಳು ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಕೆನಡದಲ್ಲಿ 1,67,060 ವಿದ್ಯಾರ್ಥಿಗಳು ಈ ಹಿಂದೆ ಓದುತ್ತಿದ್ದು, 2018- 19ರ ಶೈಕ್ಷಣಿಕ ವರ್ಷದಲ್ಲಿ 1,72,600 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಸಮಸ್ಯೆಗಳು
ಮಾನವ ಸಂಪನ್ಮೂಲ ಸಚಿವಾಲಯ ರಾಜ್ಯಸಭೆಗೆ ನೀಡಿದ ಮಾಹಿತಿ ಪ್ರಕಾರ, ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ಕಿರುಕುಳವನ್ನು ಅನುಭವಿಸುತ್ತಿದ್ದಾರೆ. ಕೆಲವು ಶಿಕ್ಷಣ ಸಂಸ್ಥೆಗಳು ಶುಲ್ಕವನ್ನು ಹೆಚ್ಚಳ ಮಾಡುತ್ತಿದ್ದು ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ. ಕೆಲವು ದೇಶದಲ್ಲಿ ಚುನಾವಣೆ ಬಳಿಕ ಹೊಸ ಸರಕಾರಗಳು ಬಂದಾಗ ಅವರ ಕೆಲವು ನಿಯಮಗಳು ಬದಲಾಗುತ್ತದೆ. ಇಂತಹ ಸಂದರ್ಭ ವಿದ್ಯಾರ್ಥಿಗಳು ಸಮಸ್ಯೆಗೆ ಒಳಗಾಗುತ್ತಾರೆ. ಗ್ರಾಫಿಕ್ಸ್
ದೇಶಗಳು 2017-18 2018-19
ಅಮೆರಿಕ 4,37,836 2,09,063
ಕೆನಡ 1,67,060 1,72,600
ಆಸ್ಟ್ರೇಲಿಯಾ 93,832 1,23,851
ರಷ್ಯಾ 11,250 15,600
ಚೀನ 4,466 4,675
ಮಲೇಷಿಯಾ 1,869 2,263