Advertisement
ಜಿಲ್ಲೆಯಲ್ಲಿ ಹಲವು ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಮಂದಿಗೆ ಅದುವೇ ಜೀವನಾಧಾರ. ಜಾನುವಾರುಗಳ ಆಹಾರ ಪದಾರ್ಥಗಳಾದ ಬೂಸಾ, ಹಿಂಡಿ, ಹೊಟ್ಟು, ಮೇವಿನ ದರ ಹೆಚ್ಚಾಗಿರುವ ಕಾರಣ ಹಸುಗಳ ಸಾಕಣೆ ಕಷ್ಟವಾಗಿರುವಾಗ ಮತ್ತು ಕೊರೊನಾ ಸಂಕಷ್ಟ ಕಾಲದಲ್ಲಿ ಹಾಲಿನ ದರವನ್ನು ಕಡಿಮೆ ಮಾಡಿ ರುವುದರಿಂದ ಹೈನುಗಾರರು ಆತಂಕಗೊಂಡಿದ್ದಾರೆ.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಹಾಲು ಶೇಖರಣೆ ಏರಿಕೆಯಾಗಿ ಈಗ ದಿನಕ್ಕೆ 5 ಲಕ್ಷ ಲೀ.ಗೂ ಅಧಿಕ ಸಂಗ್ರಹವಾಗುತ್ತಿದೆ. ಈಗಿನ ಕನಿಷ್ಠ ಹಾಲಿನ ದರ ಪ್ರತಿ ಲೀ.ಗೆ 28.67 ರೂ. ಇದೆ. ಬೇಡಿಕೆ ಕಡಿಮೆ; ರೈತರಿಗೆ ಹೊಡೆತ
ಕಳೆದ ಮೂರು ತಿಂಗಳಿನಿಂದ ಸರಕಾರ ಪ್ರೋತ್ಸಾಹ ಧನ ನೀಡಿಲ್ಲ. ಕೋವಿಡ್ ಸೋಂಕು, ಲಾಕ್‌ಡೌನ್ ಕಾರಣದಿಂದ ರಾಜ್ಯದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಒಕ್ಕೂಟಗಳಲ್ಲಿ ಸಂಗ್ರಹವಾದ ಹಾಲು ಉಳಿಕೆಯಾಗುತ್ತಿದೆ. ಅದರಿಂದ
ಹಾಲಿನ ಪುಡಿ ತಯಾರಿಸಲಾಗುತ್ತಿದ್ದರೂ ಹಾಲಿನ ಪುಡಿಯ ಬೇಡಿಕೆಯೂ ಕುಸಿದಿದೆ. ನಷ್ಟ ಸರಿದೂಗಿಸಲು ಖರೀದಿಸುವ ಹಾಲಿನ ದರವನ್ನು ಕಡಿಮೆ ಮಾಡಲು ಒಕ್ಕೂಟ ನಿರ್ಧರಿಸಿದ್ದು, ಅದರ ನೇರ ಹೊಡೆತ ಹೈನುಗಾರರನ್ನು ತಟ್ಟಿದೆ.
Related Articles
– ರವಿರಾಜ ಹೆಗ್ಡೆ, ಅಧ್ಯಕ್ಷರು, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ
Advertisement
ಹಸುಗಳ ಸಾಕಣೆಯೇ ಕಷ್ಟ ಎಂಬ ಸ್ಥಿತಿಯಲ್ಲಿರುವಾಗ ಹಾಲಿನ ಖರೀದಿ ದರ ಕಡಿತ ಮಾಡಿದರೆ ಹೈನುಗಾರಿಕೆಯನ್ನು ಮುಂದುವರಿಸುವುದಾದರೂ ಹೇಗೆ? ಇದರಿಂದಾಗಿ ಹೈನುಗಾರರಿಗೆ ತುಂಬ ಕಷ್ಟವಾಗಿದೆ.– ಬಸವರಾಜು, ಹೈನೋದ್ಯಮಿ