ಹೊಸದಿಲ್ಲಿ: ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳಿಂದ ಕೇಂದ್ರ ಸರಕಾರ ಹೊಂದಿರುವ ಬಂಡವಾಳ ಪ್ರಮಾಣವನ್ನು ಹಾಲಿ ಶೇ.51ರಿಂದ ಶೇ.26ಕ್ಕೆ ಇಳಿಕೆ ಮಾಡುವ ಅಂಶ ಈಗಾಗಲೇ ಕೇಂದ್ರ ಸರಕಾರದ ಪರಿಶೀಲನೆಯಲ್ಲಿದೆ.
ಇಂಥ ಕಠಿನ ನಿರ್ಧಾರವನ್ನು ಕೈಗೊಳ್ಳಬೇಕೇ ಬೇಡವೇ ಎಂಬ ಬಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳನ್ನುಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿ ದೆ.ದೇಶದ ಅರ್ಥ ವ್ಯವಸ್ಥೆಗೆ ಹೇರಳವಾಗಿ ಹೂಡಿಕೆ ಬರುವಂತೆ ಮಾಡುವುದೇ ಕೇಂದ್ರ ಸರಕಾರದ ಆಶಯವಾಗಿದೆ.
ಈ ಹಿನ್ನೆಲೆಯಲ್ಲಿ ಅದರ ಸಾಧಕ-ಬಾಧಕಗಳ ಬಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವವರೇ ಪರಿಶೀಲನೆ ನಡೆಸುತ್ತಿದ್ದಾರೆ. ಕೇಂದ್ರ ಸರಕಾರದ ಪ್ರಸ್ತಾವನೆ ಪ್ರಕಾರ ಶೇ.26 ಬಂಡವಾಳ ಹೊಂದುವ ಮೂಲಕ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸಿ ದರೂ ಅವುಗಳ ಮೇಲಿನ ಆಂಶಿಕ ನಿಯಂತ್ರಣ ವನ್ನು ಕೇಂದ್ರವೇ ಹೊಂದಿರಲಿದೆ.
ಇದರ ಜತೆಗೆ ವಿದೇಶದ ಹೂಡಿಕೆದಾರರಿಗೆ ಕೂಡ ಈ ಪ್ರಕ್ರಿಯೆ ಯಲ್ಲಿ ಭಾಗವಹಿಸಲೂ ಕೂಡ ಅನುಮತಿ ನೀಡುವ ಇರಾದೆಯನ್ನೂ ಹೊಂದಲಾಗಿದೆ.
ಇದನ್ನೂ ಓದಿ:ಬಿಎಡ್ ಪ್ರವೇಶಕ್ಕೆ ಅವಧಿ ವಿಸ್ತರಣೆ ಇಲ್ಲ: ಅಶ್ವತ್ಥ ನಾರಾಯಣ