Advertisement

ಕೋವಿಡ್ ಸೋಂಕು ಇಳಿಕೆ: ನಿರ್ಲಕ್ಷ್ಯ ಬೇಡ

01:49 PM Nov 30, 2020 | Suhan S |

ಮಂಡ್ಯ: ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಕೋವಿಡ್ ಸೋಂಕಿನ ಪ್ರಕರಣಗಳು ಕುಸಿಯುತ್ತಿದ್ದು, ನಿಯಂತ್ರಣಕ್ಕೆ ಬಂದಿದೆ. ಆದರೂ, ನಿರ್ಲಕ್ಷ್ಯ ವಹಿಸದೆ ಜನರು ಜಾಗ್ರತೆಯಿಂದ ಮಾಸ್ಕ್, ಸ್ಯಾನಿಟೈಸರ್‌ ಕಡ್ಡಾಯವಾಗಿ ಬಳಸುವ ಮೂಲಕ ಸಂಪೂರ್ಣವಾಗಿ ಸೋಂಕು ನಿರ್ಮೂಲನೆಗೆಕೈಜೋಡಿಸಬೇಕಾಗಿದೆ.

Advertisement

18363 ಸೋಂಕು ಪ್ರಕರಣಗಳು: ಜಿಲ್ಲೆಯಲ್ಲಿ 18363 ಸೋಂಕಿನ ಪ್ರಕರಣಗಳುದಾಖಲಾಗಿವೆ. ಅದರಲ್ಲೂ ಮಂಡ್ಯ ತಾಲೂಕಿನಲ್ಲೇ ಅತಿ ಹೆಚ್ಚು. 6024 ಪ್ರಕರಣಗಳು ದಾಖಲಾಗಿದ್ದರೆ, ಮೊದಲು ಸೋಂಕು ಕಾಣಿಸಿಕೊಂಡ ಮಳವಳ್ಳಿಯಲ್ಲಿ ಅತಿ ಕಡಿಮೆ 1605 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಮದ್ದೂರು 2045, ಪಾಂಡವಪುರ 2007, ಶ್ರೀರಂಗಪಟ್ಟಣ 1878, ಕೆ.ಆರ್‌.ಪೇಟೆ 2771, ನಾಗಮಂಗಲ 1856 ಹಾಗೂ ಹೊರ ಜಿಲ್ಲೆಯ 177 ಮಂದಿ ಚಿಕಿತ್ಸೆ ಪಡೆದಿದ್ದಾರೆ.

17903 ಮಂದಿ ಗುಣಮುಖ: ಜಿಲ್ಲೆಯಲ್ಲಿ ಇದುವರೆಗೂ 17903 ಮಂದಿ ಕೋವಿಡ್ ಸೋಂಕಿನಿಂದ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮಂಡ್ಯ 5852, ಮದ್ದೂರು 1972, ಮಳವಳ್ಳಿ 1571, ಪಾಂಡವಪುರ 1942, ಶ್ರೀರಂಗಪಟ್ಟಣ 1846, ಕೆ.ಆರ್‌.ಪೇಟೆ 2736, ನಾಗಮಂಗಲ 1821 ಹಾಗೂ ಹೊರ ಜಿಲ್ಲೆಯ 163 ಮಂದಿ ಚೇತರಿಸಿಕೊಂಡಿದ್ದಾರೆ.

313 ಸಕ್ರಿಯ ಪ್ರಕರಣ: ಸೋಂಕು ಕಾಣಿಸಿಕೊಂಡ ದಿನದಿಂದಲೂ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಕೈಗೊಂಡ ಕ್ರಮಗಳಿಂದ ಮೂರು ಸಾವಿರದಲ್ಲೇ ಸಕ್ರಿಯಪ್ರಕರಣಗಳಿದ್ದವು. ಗುಣಮುಖ ರಾದವರ ಸಂಖ್ಯೆ ದಿನದಿಂದ ದಿನಕ್ಕೆಹೆಚ್ಚಾಗುತ್ತಿದ್ದರಿಂದ ಸಕ್ರಿಯ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡಿತು. ಕಳೆದ ವಾರದಿಂದ ಸಾವಿರ ಮೇಲಿದ್ದ ಪ್ರಕರಣಗಳು ಭಾನುವಾರಕ್ಕೆ313ಕ್ಕೆ ಇಳಿದಿತ್ತು.

3 ಲಕ್ಷ ಕೋವಿಡ್ ಪರೀಕ್ಷೆ: ಇದುವರೆಗೂ ಜಿಲ್ಲೆಯಲ್ಲಿ 3,03,600 ಪರೀಕ್ಷೆಗಳನ್ನು ನಡೆಸಲಾಗಿದೆ. ಮಂಡ್ಯ 79122, ಮದ್ದೂರು 40659, ಮಳವಳ್ಳಿ 38881, ಪಾಂಡವಪುರ 30010, ಶ್ರೀರಂಗಪಟ್ಟಣ 29659, ಕೆ. ಆರ್‌.ಪೇಟೆ 39740, ನಾಗಮಂಗಲ 42935 ಹಾಗೂ ಹೊರ ಜಿಲ್ಲೆಯ 162 ಮಂದಿ ಪರೀಕ್ಷೆಗೊಳಪಟ್ಟಿದ್ದಾರೆ.

Advertisement

ಜಿಲ್ಲೆಯಲ್ಲಿ 147 ಸಾವು: ಇದುವರೆಗೂ ಜಿಲ್ಲೆಯಾದ್ಯಂತ 147 ಮಂದಿ ಸೋಂಕು ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲಿ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರಲ್ಲಿ ಅತಿ ಹೆಚ್ಚು ವಯಸ್ಸಾದವರು. ಅಲ್ಲದೆ, ಮಧುಮೇಹದಂಥ ಗಂಭೀರ ಕಾಯಿಲೆಗಳಿಂದ ಸಾವನ್ನಪ್ಪಿದಾರೆ.

ಚಳಿಗಾಲದಲ್ಲಿ ಸಾಂಕ್ರಾಮಿಕ ರೋಗಗಳ ಹೆಚ್ಚಳ ಸಾಧ್ಯತೆ : ಪ್ರತಿ ವರ್ಷ ಚಳಿಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಕಂಡು ಬರುತ್ತವೆ. ಅದರಂತೆ ಈ ಬಾರಿಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆಕ್ರಮಗಳನ್ನು ಕೈಗೊಳ್ಳುವುದು ಸೂಕ್ತ.ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್‌ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ನೆಗಡಿ,ಕೆಮ್ಮು, ಸೀನು, ಜ್ವರಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

ಚಳಿಗಾಲದಲ್ಲಿ ಎಚ್ಚರಿಕೆ ಅಗತ್ಯ :  ಕೋವಿಡ್ ಸೋಂಕು ನಿಯಂತ್ರಣಕ್ಕೆಬರುತ್ತಿದೆ. ಆದರೂ, ಚಳಿಗಾಲ ಇರುವುದರಿಂದ ಸಾಂಕ್ರಾಮಿಕ ರೋಗಗಳ ಸಂಖ್ಯೆಹೆಚ್ಚಾಗುವ ಸಾಧ್ಯತೆಇದೆ.ಇದರ ಜೊತೆಗೆ ಕೋವಿಡ್ ಸೋಂಕು ಮತ್ತೆಹರಡುವ ಸಾಧ್ಯತೆಇರುವುದರಿಂದ ಸಾರ್ವಜನಿಕರು ಇದುವರೆಗೂ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕಮಾಸ್ಕ್, ಸ್ಯಾನಿಟೈಸರ್‌ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡು ಕೋವಿಡ್ ನಿಯಂತ್ರಿಸಲು ಕೈಜೋಡಿಸಬೇಕು ಎಂದು ಡಿಎಚ್‌ಒಡಾ.ಎಚ್‌.ಪಿ.ಮಂಚೇಗೌಡ ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next