Advertisement

ಗ್ರಾಮೀಣ ಪ್ರದೇಶ ಮಕ್ಕಳ ಕಲಿಕಾ ಸಾಮರ್ಥ್ಯ ಕುಸಿತ

10:04 AM Jan 20, 2020 | mahesh |

ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಸ್ಪರ್ಧೆ ಹಿಂದೆಂದೂ ಇಲ್ಲದಷ್ಟೂ ಬಿರುಸಾಗಿದೆ. ಇಂತಹ ಹೊತ್ತಿನಲ್ಲಿ ಹಳ್ಳಿಗಾಡಿನ ಮಕ್ಕಳು ಕಲಿಕಾ ಸಾಮರ್ಥ್ಯ ಕುಸಿತಗೊಂಡಿದ್ದು, ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಣ ಅಂತರವನ್ನು ಇನ್ನಷ್ಟು ಹಿಗ್ಗಿಸಿದಂತಾಗಿದೆ. ಈ ಕುರಿತಂತೆ ವಾರ್ಷಿಕ ಶಿಕ್ಷಣ ವರದಿಯಲ್ಲಿ (ಎಎಸ್‌ಇಆರ್‌) ಉಲ್ಲೇಖೀಸಲಾಗಿದ್ದು, ಅವುಗಳನ್ನು ಇಲ್ಲಿ ನೀಡಲಾಗಿದೆ.

Advertisement

ಶೇ. 12ರಷ್ಟು ಕುಸಿತ
ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಸಂಗ ಮಾಡುತ್ತಿರುವ 8ನೇ ತರಗತಿಯ ಮಕ್ಕಳ ಕಲಿಕೆಯ ಸಾಮರ್ಥ್ಯ ಗಣನೀಯವಾಗಿ ಕುಸಿತ ಕಂಡಿದೆ.

ಕನಿಷ್ಠ ಮಟ್ಟಕ್ಕೆ ಇಳಿಕೆ
2008ರಲ್ಲಿ ಶೇ.85ರಷ್ಟು ಮಕ್ಕಳು ಕನಿಷ್ಠ ಮೂಲ ಪಠ್ಯವನ್ನು ಓದುತ್ತಿ ದ್ದರು. ಆದರೆ ಆ ಸಂಖ್ಯೆ 2018ರಲ್ಲಿ ಶೇ. 72.8ಕ್ಕೆ ಇಳಿದಿದೆ. ಈ ಮೂಲಕ ದಶಕದಲ್ಲಿ ಕನಿಷ್ಠ ಕುಸಿತ ಕಂಡಿದೆ.

ಶೇ .28.1
3ನೇ ತರಗತಿಯ ಮಕ್ಕಳಲ್ಲಿ ಶೇ. 28.1ರಷ್ಟು ವಿದ್ಯಾರ್ಥಿಗಳು ಮಾತ್ರ ಗಣಿತ ವಿಷಯದಲ್ಲಿ ಕನಿಷ್ಠ ಕೌಶಲವನ್ನು ಹೊಂದಿದ್ದಾರೆ. 2008ರಲ್ಲಿ ಇದರ ಪ್ರಮಾಣ ಶೇ.38.8ರಷ್ಟಿತ್ತು.

ಹತ್ತಾರು ದಶಕಗಳು ಕಳೆದರೂ ಇಂದಿಗೂ ಗಣಿತ ಮಕ್ಕಳಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಗಣಿತ ಕೌಶಲಗಳನ್ನು ಪರೀಕ್ಷಿಸಲು ಸಂಖ್ಯೆಗಳ ಗುರುತಿಸುವಿಕೆ ಮತ್ತು ಕನಿಷ್ಠ ವ್ಯವಕಲನ ವಿಷಯಗಳನ್ನು ನೀಡಲಾಗಿತ್ತು. ಆದರೆ ಹೆಚ್ಚಿನ ಮಕ್ಕಳು ಈ ಪರೀಕ್ಷೆಯಲ್ಲಿ ವಿಫ‌ಲರಾಗಿದ್ದಾರೆ.

Advertisement

ದೇಶಾದ್ಯಂತ 14-16 ವಯಸ್ಸಿನ ಅಂದರೆ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೈಕಿ ಶೇ.50.1 ರಷ್ಟು ಬಾಲಕರು ಮಾತ್ರ ಗಣಿತ ಲೆಕ್ಕಗಳನ್ನು ಬಿಡಿಸುವಲ್ಲಿ ಸಮರ್ಥರಾಗಿದ್ದು, ಶೇ. 44.1ರಷ್ಟು ಬಾಲಕಿಯರು ಗಣಿತ ಜ್ಞಾನವನ್ನು ಹೊಂದಿದ್ದಾರೆ.

ಖಾಸಗಿ ಶಾಲೆಗಳ ದಾಖಲಾತಿ ಹೆಚ್ಚಳ
ಶಾಲಾ ದಾಖಲಾತಿ ವಿಷಯವನ್ನು ಗಮನಿಸಿದರೆ ಕಳೆದ 12 ವರ್ಷಗಳಲ್ಲಿ ದೇಶದ ಗ್ರಾಮೀಣ ಪ್ರದೇಶಗಳಲ್ಲಿನ ಖಾಸಗಿ ಶಾಲೆಗಳಿಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ.

ಶೇ. 30.9ಕ್ಕೆ ಏರಿಕೆ
ದೇಶಾದ್ಯಂತ 2006ರಲ್ಲಿ ಖಾಸಗಿ ಶಾಲೆಗಳಿಗೆ ಶೇ. 18.7ರಷ್ಟು ಗ್ರಾಮೀಣ ವಿದ್ಯಾರ್ಥಿಗಳ ದಾಖಲಾಗಿದ್ದು, 2018ರಲ್ಲಿ ಇದರ ಪ್ರಮಾಣ ಶೇ.30.9ಕ್ಕೆ ಏರಿದೆ. ಇನ್ನು 3 ವರ್ಷ ಒಳಗಿನ ಮಕ್ಕಳ ಪೈಕಿ ಶೇ. 50ಕ್ಕಿಂತ ಹೆಚ್ಚು ಮಕ್ಕಳು ಅಂಗನವಾಡಿಗಳಿಗೆ ಹೋಗುತ್ತಿದ್ದು, ಶೇ. 9.9ರಷ್ಟು ಮಕ್ಕಳು ಶಿಶುವಿಹಾರ (ಕೆಜಿ) ಖಾಸಗಿ ಶಾಲೆಗಳಿಗೆ ದಾಖಲಾಗಿದ್ದಾರೆ.

3ನೇ ತರಗತಿ; ಸುಧಾರಣೆ
3ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಒಟ್ಟು ಕಲಿಕಾ ಸಾಮರ್ಥ್ಯ ಸುಧಾರಣೆ ಕಂಡಿದ್ದು, ಕನಿಷ್ಠ ಪಠ್ಯವನ್ನು ಓದುವ ಸಾಮರ್ಥ್ಯ ಸುಧಾರಿಸಿದೆ. 2008ರಲ್ಲಿ ಶೇ. 22.2ರಷ್ಟು ಮಕ್ಕಳು ಮಾತ್ರ ಕನಿಷ್ಠ ಪಠ್ಯ ವನ್ನು ಓದಲು ಸಮರ್ಥರಾಗಿದ್ದರು. ಆದರೆ 2018ಕ್ಕೆ ಇದರ ಪ್ರಮಾಣ ಶೇ.27ಕ್ಕೆ ಏರಿದೆ.

Advertisement

Udayavani is now on Telegram. Click here to join our channel and stay updated with the latest news.

Next