Advertisement

ಇಳಿಮುಖವಾದ ಕಪಿಲೆಯ ಅಬ್ಬರ

12:15 PM Jul 14, 2018 | |

ನಂಜನಗೂಡು: ಕಬಿನಿ ಜಲಾಶಯದಿಂದ ಬಿಡುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿದ್ದು  ಇದರಿಂದಾಗಿ ಕಪಿಲೆಯ ಅಬ್ಬರ ಸ್ವಲ್ಪ ಇಳಿಮುಖವಾಗುತ್ತಿದೆ. ಗುರುವಾರ ನೀರಿನ ಹರಿವು ಹೆಚ್ಚಿ ತಾಲೂಕಿನ ಜನತೆ ತತ್ತರಿಸುವಂತೆ ಮಾಡಿತ್ತು. 

Advertisement

 ಶುಕ್ರವಾರ ಜಲಾಶಯದ ಒಳ ಹರಿವು ಕಡಿಮೆಯಾದ ಕಾರಣ 5000 ಕ್ಯೂಸೆಕ್‌ ನೀರನ್ನು ಕಡಿಮೆಗೊಳಿಸಿ ಹೊರಕ್ಕೆ ಬಿಡಲಾಗುತ್ತಿದೆ.

ಇದರಿಂದ ಅಪಾಯಂದ ಅಂಚಿನಲ್ಲಿದ್ದ ಕಪಿಲಾ ನದಿ ತೀರದ ತಗ್ಗು ಪ್ರದೇಶಗಳ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಶ್ರೀಕಂಠೇಶ್ವರ ದೇವಾಲಯದ ಗಿರಿಜಾ ಕಲ್ಯಾಣ ಮಂದಿರದಲ್ಲಿ ತೆರೆಯಲು ಉದ್ದೇಶಿಸಿದ್ದ ಸಂತ್ರಸ್ತರ ಕೇಂದ್ರ ಈಗ ಸ್ಥಗಿತಗೊಂಡಿದೆ ಎಂದು ತಾಲೂಕು ಆಡಳಿತ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next