ಮೈಸೂರು: ರಾಷ್ಟ್ರಕವಿ ಕುವೆಂಪು ರಚಿಸಿರುವ ಮೈಸೂರು ಅನಂತಸ್ವಾಮಿ ಸಂಯೋಜನೆಯ ನಾಡಗೀತೆಯನ್ನು ರಾಜ್ಯದ ಅಧಿಕೃತ ನಾಡಗೀತೆ ಯಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಮೈಸೂರು ಆರ್ಟಿಸ್ಟ್ ಅಸೋ ಸಿಯೇಷನ್ ವತಿ ಯಿಂದ ಸಾಮೂಹಿಕ ನಾಡ ಗೀತೆ ಹಾಡುವ ಮೂಲಕ ಒತ್ತಾಯಿಸಲಾಯಿತು.
ಮೈಸೂರು ಅನಂತ ಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ 100ಕ್ಕೂ ಹೆಚ್ಚು ಕಲಾವಿದರು ನಗರದ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಎದುರು ಕನ್ನಡ ಧ್ವಜಗಳನ್ನು ಹಿಡಿದು ನಾಡಗೀತೆ ಹಾಡುವ ಮೂಲಕ ಸರ್ಕಾರದ ಗಮನ ಸೆಳೆದರು. ಮೈಸೂರು ಅನಂತಸ್ವಾಮಿ ಅವರ ಸಂಯೋಜ ನೆಯ ನಾಡಗೀತೆ ಜಯಭಾರತ ಜನನಿಯ ತನುಜಾತೆ ಗೀತೆಯನ್ನು ರಾಜ್ಯದ ನಾಡಗೀತೆಯಾಗಿ ಅಧಿಕೃತವಾಗಿ ಘೋಷಣೆ ಮಾಡಬೇಕು.
ಇದನ್ನೂ ಓದಿ:- ಇನ್ನೂ ತುಂಬಿಲ್ಲ ನಿಡಶೇಸಿ ಕೆರೆಯಂಗಳ
ಈ ಮೂಲಕ ಸುಗಮ ಸಂಗೀತದ ದೊರೆ ಎಂದೇ ಖ್ಯಾತಿ ಹೊಂದಿರುವ ಅನಂತಸ್ವಾಮಿ ಅವರಿಗೆ ಗೌರವ ಸಲ್ಲಿಸಬೇಕು ಎಂದು ಆಗ್ರಹಿಸಿದರು. ಬಳಿಕ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ಕುಮಾರ್ ಅವರಿಗೆ ಮನವಿ ಪತ್ರ ಕಳುಹಿಸಿದರು. ಕುವೆಂಪು ಅವರು ರಚಿಸಿರುವ ಗೀತೆಗೆ ಮೈಸೂರು ಅನಂತಸ್ವಾಮಿ ಅವರ ರಾಗ ಸಂಯೋಜನೆ ನಾಡಿನ ಕೋಟ್ಯಂತರ ಜನರ ಮನಗೆದ್ದಿದೆ.
ಈ ಹಾಡನ್ನು ಕೇಳುವಾಗ ಆಗುವ ಸಂಗೀತ ಇಂಪು, ರಸಮಯವಾಗಲಿದೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಅಧಿಕೃತಗೊಳಿಸಬೇಕು ಎಂದು ಒತ್ತಾಯಿಸಿದರು. ಮೈಸೂರು ಆರ್ಟಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ರಘುನಾಥ್, ಪ್ರಧಾನ ಕಾರ್ಯದರ್ಶಿ ಗುರುದತ್ತ, ನಿತಿನ್ ಜಯರಾಮ್ ಶಾಸಿŒ, ಷಣ್ಮುಖ ಸಜ್ಜ, ಗಣೇಶ್ ಭಟ್, ವಿಶ್ವನಾಥ್, ಜನಾರ್ಧನ್, ಭೀಮಾಶಂಕರ್, ರಾಜೇಶ್ ಒಡೆಯರ್, ರೇಖಾ ವೆಂಕಟೇಶ್, ರಶ್ಮಿ, ಗೌರವ ಮುರಳಿ, ಶುಭ ರಾಘವೇಂದ್ರ, ಸುಮಂತ್ ವಶಿಷ್ಠ, ಅನಂತರಾಮು, ನಿಂಗರಾಜು ಇನ್ನಿತರರು ಪಾಲ್ಗೊಂಡಿದ್ದರು.