Advertisement

12ನೇ ತರಗತಿಯ ಫಲಿತಾಂಶಗಳನ್ನು ಜು.31ರೊಳಗೆ ಪ್ರಕಟಿಸಿ: ಸುಪ್ರೀಂ ಕೋರ್ಟ್

12:51 PM Jun 24, 2021 | Team Udayavani |

ಹೊಸದಿಲ್ಲಿ: ರಾಜ್ಯ ಮಂಡಳಿಗಳು 12 ನೇ ತರಗತಿ ಪರೀಕ್ಷೆಗಳಿಗೆ ಆಂತರಿಕ ಮೌಲ್ಯಮಾಪನ ಯೋಜನೆಯನ್ನು ಸಿದ್ಧಪಡಿಸಬೇಕು ಮತ್ತು ಜುಲೈ 31 ರೊಳಗೆ ಮೌಲ್ಯಮಾಪನದ ಆಧಾರದ ಮೇಲೆ ಫಲಿತಾಂಶಗಳನ್ನು ಘೋಷಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.

Advertisement

ಆಂತರಿಕ ಮೌಲ್ಯಮಾಪನವನ್ನು ಹತ್ತು ದಿನಗಳೊಳಗೆ ನಡೆಸಬೇಕು ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ:ನಕಲಿ ಲಸಿಕೆ ಕೇಂದ್ರದಲ್ಲಿ ಕೋವಿಡ್ ಲಸಿಕೆ ಪಡೆದ ನಟಿ, ಸಂಸದೆ ಮಿಮಿ ಚಕ್ರವರ್ತಿ! ಓರ್ವನ ಬಂಧನ

ಈ ತಿಂಗಳ ಆರಂಭದಲ್ಲಿ, ವಿದ್ಯಾರ್ಥಿಗಳ ಮೌಲ್ಯಮಾಪನ ಮಾಡಲು ಪರ್ಯಾಯ ಮೌಲ್ಯಮಾಪನ ಮಾನದಂಡಗಳನ್ನು ರೂಪಿಸಲು ಸುಪ್ರೀಂ ಕೋರ್ಟ್ ಸಿಬಿಎಸ್ಇ ಮತ್ತು ಸಿಐಎಸ್ ಸಿಇ ಮಂಡಳಿಗಳಿಗೆ ಎರಡು ವಾರಗಳ ಸಮಯವನ್ನು ನೀಡಿತ್ತು. ಎರಡೂ ಮಂಡಳಿಗಳು ಕಳೆದ ವಾರ ಮೌಲ್ಯಮಾಪನ ಮಾನದಂಡಗಳನ್ನು ಮಂಡಿಸಿದ್ದವು. ಅದನ್ನು ಅಂಗೀಕರಿಸಿದ ಸುಪ್ರೀಂ ಕೋರ್ಟ್, ಈ ಮಾದರಿ “ನ್ಯಾಯಯುತ ಮತ್ತು ಸಮಂಜಸ” ಎಂದು ಅಭಿಪ್ರಾಯಪಟ್ಟಿದೆ.

ರಾಜ್ಯ ಮಂಡಳಿಗಳಂತೆ, ಸಿಬಿಎಸ್‌ಇ ಮತ್ತು ಸಿಐಎಸ್‌ ಸಿಇ ನಡೆಸುವ ಮುಖ್ಯ ಪರೀಕ್ಷೆಗಳ ಫಲಿತಾಂಶಗಳನ್ನು ಜುಲೈ 31 ರೊಳಗೆ ಘೋಷಿಸಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next