ವಿಜಯಪುರ: ಪಾಕಿಸ್ತಾನದ ಬಾವುಟ ಪ್ರದರ್ಶನ ಮಾಡಿ ಪಾಕ್‌ಪರ ಘೋಷಣೆ ಕೂಗಿದ ಕಿಡಿಗೇಡಿಗಳನ್ನು ಬಂಧಿಸಲು ಆಗ್ರಹಿಸಿ ವಿಜಯಪುರ ಠಾಣಾ ಮುಂಭಾಗ ಭಜರಂಗ ದಳ, ಹಿಂದೂ ಜಾಗರಣಾ ವೇದಿಕೆ, ಆರ್‌ಎಸ್ ಎಸ್ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾ ಕಾರರೊಂದಿಗೆ ತೀವ್ರ ವಾಗ್ವಾದ ನಡೆಯಿತು.
ಆಗಿದ್ದೇನು?: ಪಟ್ಟಣದಲ್ಲಿ ಮಂಗಳವಾರ ತಡ ರಾತ್ರಿ ಮೊಹರಂ ಪ್ರಯುಕ್ತ ಮೆರವಣಿಗೆ ನಡೆಸಿದ ವೇಳೆ ಕೆಲ ಕಿಡಿಗೇಡಿಗಳು ಪಾಕಿಸ್ತಾನ ಬಾವುಟ ಪ್ರದರ್ಶನ ಮಾಡಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆಂದು 2 ಕೋಮುಗಳ
ನಡುವೆ ಗಲಾಟೆ ನಡೆಯಿತು. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಇದರಿಂದಾಗಿ ಬುಧವಾರ ವಿಜಯಪುರ ಠಾಣಾ ಮುಂಭಾಗ ಭಜರಂಗದಳ, ಹಿಂದೂ ಜಾಗರಣಾ ವೇದಿಕೆ, ಆರ್‌ಎಸ್‌ಎಸ್ ಮತ್ತು ವಿವಿಧಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಗೊಂದಲ ಸೃಷ್ಟಿ: ಹಿಂದೂಜಾಗರಣಾ ವೇದಿಕೆ ಸಂಚಾಲಕ ಮುನೀಂದ್ರ ಮಾತನಾಡಿ, ಕೆಲ ಕಿಡಿಗೇಡಿಗಳು ಗಣೇಶ ಪ್ರತಿಷ್ಠಾಪಿಸಿದ್ದ ಸ್ಥಳಗಳಲ್ಲಿ ಗೊಂದಲ ಸೃಷ್ಟಿ ಮಾಡಲು ಪಾಕಿಸ್ತಾನ್ ಜಿಂದಾಬಾದ್, ಹಿಂದೂಸ್ತಾನ್ ಮುರ್ದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಲು ಹಿಂದೇಟು ಹಾಕುತ್ತೀರಿ. ಗಣೇಶನ
ಕಾರ್ಯಕ್ರಮಕ್ಕೆ ಸಂಜೆ 6 ಗಂಟೆವರೆಗೆ ಸಮಯ ನಿಗದಿ ಮಾಡುತ್ತೀರಿ. ಆದರೆ, ರಾತ್ರಿ 12ಗಂಟೆಯಾದರೂ ಕ್ರಮ ಜರುಗಿಸುವುದಿಲ್ಲ.
ಪೊಲೀಸರೇ ಕುಮ್ಮಕ್ಕು ನೀಡುತ್ತಿದ್ದಾರೆಂದು ದೂರಿದರು. ಕರವೇ ಶಿವಕುಮಾರ್ ಮಾತನಾಡಿ, ಪಟ್ಟಣದಲ್ಲಿ ಇಲ್ಲಿಯತನಕ ಯಾವತ್ತೂ ಹಿಂದೂ- ಮುಸ್ಲಿಮರ ನಡುವೆ ಗಲಾಟೆ ನಡೆದಿರಲಿಲ್ಲ. ಶಾಂತಿ ಕದಡಲು ಅನ್ಯರು ಪ್ರಯತ್ನಿಸು ತ್ತಿದ್ದಾರೆ. ಇದರ ವಿರುದ್ಧ ಪೊಲೀಸರು ಕ್ರಮ ಕೈಗೊಂಡು ದೇಶದ್ರೋಹಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಪಟ್ಟಣ ಬಂದ್ ಮಾಡ ಲಾಗುವುದು ಎಂದು ಎಚ್ಚರಿಸಿದರು. ಪ್ರತಿಕ್ರಿಯಿಸಿದ ವೃತ್ತ ನಿರೀಕ್ಷಕ ಮಂಜುನಾಥ, ಘಟನೆ ಕುರಿತಂತೆ ಕೂಡಲೇ ತನಿಖೆ ಕೈಗೊಂಡು ತಪ್ಪಿತಸ್ಥರನ್ನು ಬಂಧಿಸುವುದಾಗಿ ಭರವಸೆ ನೀಡಿದರು.