Advertisement

ದೆಹಲಿಯಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ

06:45 AM Nov 08, 2017 | Team Udayavani |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಜನತೆ ಮಿತಿಮೀರಿದ ವಾಯುಮಾಲಿನ್ಯಕ್ಕೆ ಅಕ್ಷರಶಃ ತತ್ತರಿಸಿದ್ದಾರೆ. ನಗರದ ಬಹುತೇಕ ಪ್ರದೇಶಗಳು ದಟ್ಟ ಧೂಳು, ಹೊಗೆಯಿಂದ ಆವರಿಸಿದ ಪರಿಣಾಮ ಹಗಲಲ್ಲೂ ಮಂಜುಗವಿದಿರುವಂತೆ ಕಾಣಿಸುತ್ತಿದೆ!

Advertisement

ಹೌದು, ದೆಹಲಿಯ ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಗರಿಷ್ಠ 730 ದಾಖಲಾಗಿದ್ದು, ಇದು ಅತ್ಯಂತ ಅಪಾಯಕಾರಿ ಎಂದು ಹೇಳಿರುವ ಭಾರತೀಯ ವೈದ್ಯಕೀಯ ಸಂಘ (ಐಎಂಎ) “ಆರೋಗ್ಯ ತುರ್ತು’ ಪರಿಸ್ಥಿತಿ ಘೋಷಣೆ ಮಾಡಿದೆ. ದೆಹಲಿ ಸರ್ಕಾರ ಪ್ರಾಥ ಮಿಕ ಶಾಲೆಗಳಿಗೆ ಬುಧವಾರ ರಜೆ ಘೋಷಿ ಸಿದ್ದು, ಸಾಧ್ಯವಾದಷ್ಟು ಮನೆಯಿಂದ ಆಚೆ ಬರಬೇಡಿ ಎಂದು ಜನರಿಗೆ ಸೂಚಿಸಿದೆ. ಅನಿವಾ ರ್ಯವಾದಲ್ಲಿ ರಜಾ ಮುಂದು ವರಿಕೆಗೂ ನಿರ್ಧರಿಸಿದೆ. ಮಾಲಿನ್ಯ ಪ್ರಮಾಣ ಉಲ್ಬಣಿಸಿದ ಬೆನ್ನಿಗೇ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ, ಈಗಾಗಲೇ ಜಾರಿಗೆ ತರಲಾಗಿದ್ದ ಸಮ-ಬೆಸ ಯೋಜನೆಯನ್ನು ತಕ್ಷಣ ಮರುಜಾರಿ ಮಾಡುವಂತೆ ದೆಹಲಿ ಸರ್ಕಾರಕ್ಕೆ ಆದೇಶಿಸಿದೆ. ಮೆಟ್ರೋ ದರ ಕಡಿತವನ್ನೂ ಪರಿಶೀಲಿಸುವಂತೆ ಹೇಳಿದೆ. ಅಷ್ಟೇ ಅಲ್ಲ, ವಿಮಾನ ನಿಲ್ದಾಣ, ಮೆಟ್ರೋ ನಿಲ್ದಾಣ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ನಿಯೋಜ ನೆಯಾಗಿರುವ ಸಿಐಎಸ್‌ಎಫ್ ಯೋಧರಿಗೆಂದು 9000 ಫೇಸ್‌ಮಾಸ್ಕ್ ವಿತರಿಸಲಾಗಿದೆ.

ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ವಾಯುಮಾಲಿನ್ಯ ಮಿತಿಮೀರಿದ್ದಾಗಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮಾಹಿತಿ ನೀಡಿದ್ದು, ತಕ್ಷಣ ಕ್ರಮಕ್ಕೂ ಸಲಹೆ ನೀಡಿತು. ಇತ್ತೀಚೆಗಿನ ದಿನಗಳಲ್ಲಿ ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚುತ್ತಿದ್ದು, ಈ ಕಾರಣಕ್ಕಾಗಿಯೇ ದೀಪಾವಳಿ ವೇಳೆ ಪಟಾಕಿಗೂ ನಿರ್ಬಂಧ ವಿಧಿಸಲಾಗಿತ್ತು.

ಅಂದಿನ ಸ್ಥಿತಿಯನ್ನೂ ಮೀರಿಸುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ ಎಂದು ಸಿಪಿಸಿಬಿ ಹೇಳಿದೆ. ಸೋಮವಾರ ಮಧ್ಯರಾತ್ರಿಯಿಂದಲೇ ದಟ್ಟ ಮಂಜು, ಹೊಗೆ ಇದ್ದ ಹಿನ್ನೆಲೆಯಲ್ಲಿ ವಿಮಾನ ಹಾರಾಟದಲ್ಲಿಯೂ ವ್ಯತ್ಯಯ ಉಂಟಾಗಿದೆ. 20ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬವಾಗಿದೆ.

ಪಾರ್ಕಿಂಗ್‌ 4 ಪಟ್ಟು ಹೆಚ್ಚಳ
ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀ ರಿದ್ದರಿಂದ ವಾಹನಗಳ ನಿಲುಗಡೆ ಶುಲ್ಕ ವನ್ನು ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಿಸಲಾ ಗಿದೆ. ವಾಯುಮಾಲಿನ್ಯ ನಿಯಂತ್ರಣ ಸಂಬಂಧ ಸುಪ್ರೀಂಕೋರ್ಟ್‌ ನೇಮಕ ಮಾಡಿರುವ ಸಮಿತಿ ಈ ಸೂಚನೆ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next