Advertisement

ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಅಗತ್ಯ: ಜೈವೀರ್‌ ಶೇರ್ಗಿಲ್‌

02:15 AM Nov 06, 2019 | mahesh |

ಮಂಗಳೂರು: ದೇಶದ ಬಹುತೇಕ ಭಾಗಗಳಲ್ಲಿ ಕೈಗಾರಿಕೆ ಗಳು ಬಂದ್‌, ಉದ್ಯೋಗ ನಷ್ಟ, ಕರಗುತ್ತಿರುವ ಉಳಿತಾಯ, ವ್ಯಾಪಿಸಿ ರುವ ಭ್ರಷ್ಟಾಚಾರದ ನಡುವೆ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಮುಳುಗಡೆಯ ದಾರಿಯಲ್ಲಿದೆ. ಹೀಗಾಗಿ ಕೂಡಲೇ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿ ಪೂರಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಜೈವೀರ್‌ ಶೇರ್ಗಿಲ್‌ ಆಗ್ರಹಿಸಿದರು.

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ಆರ್ಥಿಕ ದುಃಸ್ಥಿತಿಗೆ ಮುಖ್ಯ ಕಾರಣಕರ್ತರಾಗಿರುವ ಕೇಂದ್ರ ವಿತ್ತ ಸಚಿವರು ರಾಜೀನಾಮೆ ಸಲ್ಲಿಸಬೇಕು ಮತ್ತು ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದರು.

ನಿರುದ್ಯೋಗ ಸಮಸ್ಯೆ: ದಾರಿ ತಪ್ಪಿಸುವ ಬಿಜೆಪಿ
ರಾಷ್ಟ್ರೀಯ ಮಾದರಿ ಸಮೀಕ್ಷೆ ಪ್ರಕಾರ ದೇಶದ ನಿರುದ್ಯೋಗ 45 ವರ್ಷಗಳ ಅವಧಿಯಲ್ಲೇ ಗರಿಷ್ಠ ಏರಿಕೆಯಾಗಿದೆ. ನಿರುದ್ಯೋಗ ಮತ್ತು ಆರ್ಥಿಕ ಸಮಸ್ಯೆಗೆ ಜಾಗತಿಕ ಮಟ್ಟದ ಬಿಕ್ಕಟ್ಟು ಕಾರಣ ಎಂದು ಕೇಂದ್ರದ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದ ಕಾರ್ಮಿಕ ಸಂಘಟನೆ ಪ್ರಕಾರ ಜಾಗತಿಕ ಮಟ್ಟದಲ್ಲಿ ನಿರುದ್ಯೋಗ ಸಮಸ್ಯೆ ಶೇ. 4.95 ಇದ್ದರೆ, ಭಾರತದಲ್ಲಿ ಶೇ. 8.5 ಇದೆ. ಅಂದರೆ ಭಾರತದಲ್ಲಿ ಸಮಸ್ಯೆ ದ್ವಿಗುಣಗೊಂಡಿದೆ ಎಂದರು.

ಐದು ವರ್ಷಗಳಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪುತ್ರ ಜಯ ಶಾ ಅವರ ಕಂಪೆನಿಯ ಆದಾಯ ಅಧಿಕಗೊಂಡಿದೆ. 2014ರಲ್ಲಿ 79.60 ಲಕ್ಷ ರೂ. ಆದಾಯ ಹೊಂದಿದ್ದ ಕಂಪೆನಿಯ ಆದಾಯ ಪ್ರಸಕ್ತ ವರ್ಷ 119.61 ಕೋ.ರೂ.ಗೆ ವೃದ್ಧಿಯಾಗಿದೆ ಎಂದು ಆರೋಪಿಸಿದರು.

6 ವರ್ಷಗಳಲ್ಲಿ ದೇಶದ ಜಿಡಿಪಿ ಕನಿಷ್ಠ
ಮಟ್ಟಕ್ಕೆ ಇಳಿದಿದೆ. ಹೊಸ ಖಾಸಗಿ ಹೂಡಿಕೆದಾರರ ಸಂಖ್ಯೆ 16 ವರ್ಷಗಳಷ್ಟು ಹಿಂದಕ್ಕೆ ಕುಸಿದಿದೆ. ಜನರ ಉಳಿತಾಯ ಶಕ್ತಿಯು ಕಳೆದ ವರ್ಷ ಶೇ. 34.6ರಷ್ಟು ಇದ್ದು, ಈ ವರ್ಷ ಶೇ. 30ಕ್ಕೆ ಇಳಿದಿದೆ. ಕೈಗಾರಿಕೆ, ಉತ್ಪಾದನೆ ಪ್ರಮಾಣ ಕೂಡ ಇಳಿಮುಖವಾಗುತ್ತಲೇ ಇದೆ ಎಂದರು.

Advertisement

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಶಾಸಕ ಯು.ಟಿ. ಖಾದರ್‌, ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್‌, ಯುವ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಮಿಥುನ್‌ ರೈ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next