Advertisement
ಸ್ಕಾಟ್ಲೆಂಡ್‌ನ ಗ್ಲಾಸ್ಗೋ ನಲ್ಲಿ ರವಿವಾರದಿಂದ ಆರಂಭವಾದ ಎರಡು ದಿನಗಳ ವಿಶ್ವಸಂಸ್ಥೆಯ 26ನೇ ಜಾಗತಿಕ ಪರಿಸರ ಸಂರಕ್ಷಣ ಸಮ್ಮೇಳನದಲ್ಲಿ (26ನೇ ಕಾನ್ಫರೆನ್ಸ್‌ಆಫ್ ಪಾರ್ಟೀಸ್- ಕಾಪ್ 26) ಮಾತನಾಡಿದ ಅವರು, “ಪಂಚಮೃತ ಸೂತ್ರದ ಅಡಿಯಲ್ಲಿ, ಜೈವಿಕವಲ್ಲದ ಇಂಧನಗಳ (ನಾನ್- ಫಾಸಿಲ್ ಫ್ಯೂಯೆಲ್ಸ್) ಬಳಕೆಯ ಪ್ರಮಾಣವನ್ನು 500 ಗಿಗಾ ವ್ಯಾಟ್‌ಗಳಿಗೆ ಹೆಚ್ಚಿಸುವುದು. ನವೀಕರಿಸಬಹುದಾದ ಇಂಧನಗಳನ್ನು ಈಗಿರುವ ಪ್ರಮಾಣಕ್ಕಿಂತ ಶೇ.50ರಷ್ಟು ಹೆಚ್ಚಿಸುವುದು. ಇಂಗಾಲದ ಹೊರಸೂಸುವಿಕೆಯ ಪ್ರಮಾಣವನ್ನು 1 ಬಿಲಿಯನ್ ಟನ್‌ನಷ್ಟು ಇಳಿಸುವುದು. ದೇಶದ ವಾಯುಮಂಡಲಕ್ಕೆ ನಾನಾ ಮಾರ್ಗಗಳಿಂದ ಸೇರುವ ಇಂಗಾಲದ ಪ್ರಮಾಣವನ್ನು ಶೇ.40ಕ್ಕೆ ಇಳಿಸುವುದು ಹಾಗೂ 2070ರ ಹೊತ್ತಿಗೆದೇಶದ ಇಂಗಾಲ ಹೊರಸೂಸುವಿಕೆಯನ್ನು ಶೇ. 100ರಷ್ಟು ಮುಕ್ತವಾಗಿಸುವ ಗುರಿಯನ್ನು ಹೊಂದಲಾಗಿದೆ’ಎಂದು ತಿಳಿಸಿದ್ದಾರೆ.
Related Articles
Advertisement
ಭಾರತೀಯ ರೈತರಿಗೆ ತೊಂದರೆ: ತಾಪಮಾನ ಹೆಚ್ಚಳದ ದುಷ್ಪರಿಣಾಮದಿಂದಾಗಿ ಆಗುತ್ತಿರುವ ಹವಾಮಾನ ವೈಪ ರೀತ್ಯಗಳು ಭಾರತದ ರೈತರ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ ಅವರು, ಅವರ ಬಿತ್ತನೆ ಹಾಗೂ ಫಸಲು ಅವಧಿಗಳನ್ನು ಏರುಪೇರಾಗಿಸಿದೆ ಎಂದಿದ್ದಾರೆ.
ಸಂಸದೆ ಗೋಸಲ್ ಭೇಟಿಸ್ಕಾಟ್ಲೆಂಡ್ನ ಸಂಸತ್ತಿಗೆ ಚುನಾಯಿತ ರಾಗಿರುವ ಮೊದಲ ಭಾರತ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ರುವ ಪಾಮ್ ಗೋಸಲ್, ಅವರು ಕಾಪ್ 26 ಸಭೆಯಲ್ಲಿ ಪ್ರಧಾನಿ ಮೋದಿ ಯವರನ್ನು ಭೇಟಿ ಮಾಡಿದರು. ಈ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಮೋದಿಯರನ್ನು ಜಗತ್ತಿನ ವಿವಿಧ ದೇಶಗಳ ನಾಯಕರ ಜತೆಗೆ ನೋಡಲು ಖುಷಿಯಾಗುತ್ತದೆ ಎಂದಿದ್ದಾರೆ. ಪಾರಂಪರಿಕ ಕೃಷಿಗೆ ಒತ್ತು
ಇದೇ ವೇಳೆ, ಹಲವಾರು ದೇಶಗಳಲ್ಲಿ ಹಿಂದಿನ ಜನರು ರೂಢಿಯಲ್ಲಿಟ್ಟು ಕೊಂಡಿದ್ದ ಪರಿಸರ ಸ್ನೇಹಿ ಕೃಷಿಯನ್ನು ಪುನಃ ಅವಲಂಬಿಸುವ ಅವಶ್ಯಕತೆ ಈಗ ತುರ್ತಾಗಿ ಆಗಬೇಕಿದೆ ಎಂದು ಮೋದಿ ಕರೆ ನೀಡಿದ್ದಾರೆ. “ಅನೇಕ ಸಾಂಪ್ರದಾಯಿಕ ಸಮುದಾಯಗಳು ಪರಿಸರ ಸ್ನೇಹಿ ಕೃಷಿ ಪದ್ಧತಿ ಹಾಗೂ ಜೀವನ ವಿಧಾನಗಳನ್ನು ಅನುಸರಿಸುತ್ತಿದ್ದವು. ಈಗಲೂ ಹಲವಾರು ಕಡೆ ಅಂಥ ಕೃಷಿ ಪದ್ಧತಿಗಳನ್ನು ಕಾಣು ತ್ತಿದ್ದೇವೆ. ಅವನ್ನು ನಾವು ಪುನಃ ಅಳವಡಿಸಿ ಕೊಳ್ಳಬೇಕಿದೆ. ಅಲ್ಲದೆ, ಆ ಕೃಷಿ ಜ್ಞಾನಗಳು ಅಳಿದು ಹೋಗದಂತೆ ಎಚ್ಚರಿಕೆ ವಹಿ ಸಬೇಕಿದ್ದು, ಆ ಎಲ್ಲಾ ಜ್ಞಾನವನ್ನು ಶಾಲಾ ಪಠ್ಯದ ಮೂಲಕ ವಿದ್ಯಾರ್ಥಿಗಳಿಗೆ ಕಲಿಸಿ ಕೊಡಬೇಕಿದೆ. ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವಂಥ ಜ್ಞಾನವನ್ನೂ ನಾವಿಂದು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕಿದೆ’ ಎಂದು ಅವರು ಕರೆ ನೀಡಿದ್ದಾರೆ. ಜೇಮ್ಸ್‌ಬಾಂಡ್ ರೀತಿ ಕೆಲಸ ಅಗತ್ಯ: ಬೋರಿಸ್
“ಪರಿಸರ ನಾಶದಿಂದಾಗಿ ಜಗತ್ತು ಹಲವಾರು ವಿಪತ್ತುಗಳಿಗೆ ಈಡಾಗಿದೆ. ಈ ಸಂದರ್ಭದಲ್ಲಿ ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ನಾಯಕ ಹೇಗೆ ಕ್ಷಿಪ್ರಗತಿಯಲ್ಲಿ ದುಷ್ಟರ ವಿರುದ್ಧ ಹೋರಾಡಿ ಜಯ ಗಳಿಸುತ್ತಾನೋ ಹಾಗೆಯೇ, ಜಗತ್ತಿನ ಎಲ್ಲಾ ನಾಯಕರೂ ಹೋರಾಟ ನಡೆಸಿ, ಜಗತ್ತನ್ನು ಕಾಪಾಡಬೇಕು’ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಗ್ರಹಿಸಿದ್ದಾರೆ. “ಕಾಪ್ 26’ನಲ್ಲಿ ಮಾತನಾಡಿದ ಅವರು, “ಪರಿಸರ ಸಂರಕ್ಷಣೆ ಗಾಗಿ ಕ್ಷಿಪ್ರಗತಿಯಲ್ಲಿ ನಾವು ಕಾರ್ಯೋನ್ಮುಖ ರಾಗದಿದ್ದರೆ, ದೊಡ್ಡ ಪ್ರಮಾದ ಗಳನ್ನು ಎದುರಿಸ ಬೇಕಾಗುತ್ತದೆ. ಜಾಗತಿಕ ತಾಪಮಾನ ಈಗಿರುವುದಕ್ಕಿಂತ ಕೇವಲ ಎರಡು ಡಿಗ್ರಿಯಷ್ಟು ಹೆಚ್ಚಾದರೂ ಅದು ವಿಶ್ವದ ಆಹಾರ ಸರಬರಾಜು ವ್ಯವಸ್ಥೆ ಯನ್ನು ನಿಷ್ಕ್ರಿಯಗೊಳಿಸುತ್ತದೆ. ಇನ್ನೊಂದು ಡಿಗ್ರಿ ಜಾಸ್ತಿಯಾ ದರೆ ಭೀಕರವಾದ ಕಾಡ್ಗಿಚ್ಚುಗಳು, ಚಂಡಮಾರುತಗಳನ್ನು ಅನು ಭವಿಸಬೇಕಾಗುತ್ತದೆ. ಇದೇ ಉಷ್ಣಾಂಶ ನಾಲ್ಕು ಡಿಗ್ರಿಯಷ್ಟು ಹೆಚ್ಚಾದರೆ ನಾವು ಪರಸ್ಪರ “ಗುಡ್‌ಬೈ’ ಹೇಳಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.