Advertisement

ಸ್ವಿಸ್‌ನಿಂದ ಇನ್ನೂ 2 ಕಂಪೆನಿಗಳ ಠೇವಣಿ ವಿವರ ಘೋಷಣೆ

01:03 PM Dec 03, 2018 | Harsha Rao |

ಹೊಸದಿಲ್ಲಿ/ಬರ್ನ್: ಅಕ್ರಮ ಸಂಪತ್ತನ್ನು ಬಚ್ಚಿಡುವವರಿಗೆ ಸ್ವಿಜರ್ಲೆಂಡ್‌ ಸ್ವರ್ಗ ಎಂಬ ಹೆಗ್ಗಳಿಕೆ ನಿಧಾನವಾಗಿ ಕಳೆದುಕೊಳ್ಳುತ್ತಿರುವಂತೆಯೇ, ಅಲ್ಲಿನ ಸರಕಾರ ಭಾರತದ ಇನ್ನೂ ಎರಡು ಸಂಸ್ಥೆಗಳ ಮತ್ತು ಮೂವರು ವ್ಯಕ್ತಿಗಳ ಠೇವಣಿ ವಿವರ ಬಹಿರಂಗಕ್ಕೆ ಮುಂದಾಗಿದೆ. ಎರಡು ಸಂಸ್ಥೆಗಳ ಪೈಕಿ ಒಂದು ಸಾರ್ವಜನಿಕವಾಗಿ ವ್ಯವಹಾರ ನಡೆಸುತ್ತಿದೆ. ಜತೆಗೆ ಮಾರುಕಟ್ಟೆಯಲ್ಲಿನ ನಿಯಮಗಳ ಉಲ್ಲಂಘನೆ ವಿರುದ್ಧ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿಯಿಂದ ಈಗಾಗಲೇ ತರಾಟೆಗೆ ಒಳಗಾಗಿದೆ. ಜತೆಗೆ ತಮಿಳುನಾಡಿನಲ್ಲಿ  ಪ್ರಭಾವಶಾಲಿ ರಾಜಕೀಯ ಸಂಪರ್ಕ ಹೊಂದಿರುವ ಆದಿ ಎಂಟರ್‌ಪ್ರೈಸಸ್‌ ಹೊಂದಿದೆ. 

Advertisement

ಜ್ಯೋದೆಸಿಕ್‌ ಲಿಮಿಟೆಡ್‌ಗೆ ಸೇರಿದ ಪಂಕಜ್‌ ಕುಮಾರ್‌ ಓಂಕಾರ್‌ ಶ್ರೀವಾಸ್ತವ, ಪ್ರಶಾಂತ್‌ ಶರದ್‌ ಮುಲೇಕರ್‌ ಮತ್ತು ಕಿರಣ್‌ ಕುಲಕರ್ಣಿ ಸ್ವಿಸ್‌ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ ಮಾಹಿತಿಯನ್ನು ಪ್ರತ್ಯೇಕವಾಗಿ ಪ್ರಕಟಿಸಿದೆ ಸ್ವಿಜರ್ಲೆಂಡ್‌ ಸರಕಾರ. ಇ.ಡಿ., ಮುಂಬೈನ ಆರ್ಥಿಕ ಅಪರಾಧಗಳ ವಿಭಾಗದಿಂದ ಜ್ಯೋದೆಸಿಕ್‌ ಸಂಸ್ಥೆ ವಿರುದ್ಧ ಪ್ರಕರಣ ದಾಖಲಾಗಿದೆ. ಗಮನಾರ್ಹ ಅಂಶವೆಂದರೆ 2 ಸಂಸ್ಥೆಗಳು ಮತ್ತು ಮೂವರು ವ್ಯಕ್ತಿಗಳು ಎಷ್ಟು ಪ್ರಮಾಣದಲ್ಲಿ ಠೇವಣಿ ಇರಿಸಿದ್ದಾರೆ ಎಂಬ ಕರಾರು ವಾಕ್‌ ಮಾಹಿತಿಯನ್ನು ಸ್ವಿಸ್‌ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next