Advertisement

ಕನಕ ಜಯಂತಿ ಸರಳ ಆಚರಣೆ ನಿರ್ಧಾರ

03:40 PM Nov 30, 2020 | Suhan S |

ಯಾದಗಿರಿ: ಕೋವಿಡ್‌ ಸೋಂಕು ಹಿನ್ನೆಲೆ ಜಿಲ್ಲಾಡಳಿತದ ವತಿಯಿಂದಬರುವ ಡಿ.3ರಂದು ಸಂತ ಶ್ರೇಷ್ಠ ಕನಕದಾಸರ ಜಯಂತಿಯನ್ನು ನಗರದ ಜಿಲ್ಲಾಡಳಿತದ ಆಡಿಟೋರಿಯಂನಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಜಿಲ್ಲಾ ಧಿಕಾರಿ ಡಾ| ರಾಗಪ್ರಿಯ ಆರ್‌ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿಯ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದ ಮುಖಂಡರು, ಗಣ್ಯರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ತಿಳಿಸಿದರು. ಅಂದು ಬೆಳಿಗ್ಗೆ 11ಗಂಟೆಗೆ ಆಡಿಟೋರಿಯಂನಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚನೆ ನೆರವೇರಿಸಲಾಗುವುದು. ಅದರಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿಕನಕದಾಸರ ಜಯಂತಿ ಸರಳವಾಗಿ ಆಚರಿ ಸುವಂತೆ ನಿರ್ದೇಶನ ನೀಡಿದರು.

ಜಿಪಂ ಸಿಇಒ ಶಿಲ್ಪಾ ಶರ್ಮ, ಅಪರ ಜಿಲ್ಲಾಧಿಕಾರಿ ಪ್ರಕಾಶ್‌ ರಜಪೂತ್‌, ಸಹಾಯಕ ಆಯುಕ್ತ ಶಂಕರ ಸೋಮನಾಳ್‌ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ, ತಾಲೂಕು ಅಧ್ಯಕ್ಷ ಹೊನ್ನಪ್ಪ ಮುಷ್ಟೂರು ಸೇರಿದಂತೆ ಸಮಾಜದ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

ಕೇಂದ್ರದ ಔಷಧ  ನೀತಿಗೆ ಖಂಡನೆ :

ಶಹಾಪುರ: ಕೇಂದ್ರ ಸರ್ಕಾರದ ಜನ ವಿರೋಧಿ ಔಷಧ ನೀತಿ ಖಂಡಿಸಿಇಲ್ಲಿನ ಕರ್ನಾಟಕ ರಾಜ್ಯ ಮೆಡಿಕಲ್‌ ಔಷಧ ಮಾರಾಟಗಾರರ ಪ್ರತಿನಿಧಿ ಗಳ ಸಂಘದಿಂದ ತಹಶೀಲ್ದಾರ್‌ ಮಹಿಬೂಬಿ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.

Advertisement

ಭಾರತ ಔಷಧ ಕಂಪನಿಗಳನ್ನು ಬಹುರಾಷ್ಟ್ರೀಯ ಕಂಪನಿಗಳು ಖರೀದಿಸುವುದನ್ನು ತಡೆಗಟ್ಟುವುದು ಮತ್ತು ಸಾರ್ವಜನಿಕ ಔಷಧ ವಲಯ ಜೀರ್ಣೋದ್ಧಾರಗೊಳಿಸುವುದು ಹಾಗೂ ಅಗತ್ಯ ಔಷಧಗಳ ಮೇಲೆ

ತೆರಿಗೆ ಹೇರಬಾರದು, ಅಲ್ಲದೆ ಪ್ರಸ್ತುತ ಮಾರುಕಟ್ಟೆ ಆಧಾರದ ಮೇಲೆ ಬೆಲೆ ನಿಗದಿ ಪಡಿಸುವ ವ್ಯವಸ್ಥೆ ಕಾನೂನು ಬದ್ಧಗೊಳಿಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಇದರಿಂದ ಭಾರತದ ಔಷಧ ಕಂಪನಿಗಳ ಮೇಲೆ ಮತ್ತು ಕಂಪನಿಯಲ್ಲಿ ಕೆಲಸ ಮಾಡುತ್ತಿರುವಸಾವಿರಾರು ಕಾರ್ಮಿಕರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕಾರಣ ಕೂಡಲೇ ನೂತನ ಔಷಧ  ನೀತಿ ಅನುಸರಿಸುವುದು ಸರಿಯಲ್ಲ.ಈ ಕೂಡಲೇ ನೂತನ ಔಷಧ ನೀತಿ ಕೈಬಿಡಬೇಕೆಂದು ಮನವಿ ಮಾಡಿದರು. ತಹಶೀಲ್ದಾರ್‌ ಮಹಿಬೂಬಿ ಮನವಿ ಸ್ವೀಕರಿಸಿ ಈ ಕುರಿತು ಸಂಬಂಧಿಸಿದ ಮೇಲಧಿ ಕಾರಿಗಳಿಗೆ ವರದಿ ಕಳುಹಿಸುವುದಾಗಿ ತಿಳಿಸಿದರು.

ಈ ವೇಳೆ ಕಲಬುರ್ಗಿ ಸಂಘದ ವಿಭಾಗೀಯ ಜಂಟಿ ಕಾರ್ಯದರ್ಶಿ ವೀರಭದ್ರಯ್ಯಸ್ವಾಮಿ ಹಯ್ನಾಳ, ಪ್ರಕಾಶ ಪದಕಿ, ರತನ್‌, ರಾಲೂಮಲ್ಹಾರ ಶೆಟ್ಟಿ, ಗಂಗಣ್ಣ ಸಂಡೂರ, ಮಹೇಶ, ವಿನೋದ್‌ ಕಲಾಲ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next