Advertisement

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ತೀರ್ಮಾನ

08:18 PM Mar 29, 2021 | Team Udayavani |

ಕಲಬುರಗಿ: ಶತಮಾನ ಪೂರೈಸಿದರೂ ಇದೂವರೆಗೂ ಮಹಿಳಾ ಸಾಹಿತಿಯೊಬ್ಬರು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗದಿರುವ ವಿಷಯ ಈಗ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದ್ದು, ಕಸಾಪಕ್ಕೆ ಮಹಿಳಾ ಸಾರಥ್ಯ ವಹಿಸಲಿ ಎಂದು ಸಾಹಿತಿಗಳು, ಬರಹಗಾರರು, ಸಾಹಿತ್ಯಾಸಕ್ತರು ಒಕ್ಕೊರಲಿನಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್‌ಗೆ ಮಹಿಳಾ ಸಾಹಿತಿಯೊಬ್ಬರು ಅಧ್ಯಕ್ಷರಾಗಬೇಕೆಂಬ ಅಪೇಕ್ಷೆ ಅನೇಕರದ್ದು. ಆರು ತಿಂಗಳ ಹಿಂದೆಯೇ ಮಹಿಳಾ ಅಧ್ಯಕ್ಷರಾಗಲಿ ಎನ್ನುವ ಕೂಗು ಎದ್ದಿತ್ತು. ನಾಡಿನ ಹಲವಾರು ಜಿಲ್ಲೆಗಳ ಹಿರಿಯ ಸಾಹಿತಿಗಳು ಈ ಬಾರಿ ಮಹಿಳೆ ಅಧ್ಯಕ್ಷರಾಗುವ ಹಿನ್ನೆಲೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಿರಿಯ ಲೇಖಕಿ, 30ಕ್ಕೂ ಹೆಚ್ಚು ಕೃತಿಗಳನ್ನು ಬರೆದಿರುವ ಡಾ| ಸರಸ್ವತಿ ಚಿಮ್ಮಲಗಿ ಅವರು ರಾಷ್ಟ್ರ, ರಾಜ್ಯ ಮಟ್ಟದ 29 ಪ್ರಶಸ್ತಿ ಪಡೆದಿದ್ದು, ಕಸಾಪ ರಾಜ್ಯ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸುವಂತೆ ಕೋರಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ. ಕಲಬುರಗಿ ಜಿಲ್ಲೆಯಲ್ಲಿ ಸುಮಾರು 36 ವರ್ಷ ಕಾಲ ಶಿಕ್ಷಕಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಲ್ಲದೇ, ಸಾಹಿತ್ಯ- ಸಾಂಸ್ಕೃತಿಕ ವಾತಾವರಣ ಸೃಷ್ಟಿಸಿದ್ದಾರೆ. ನೇರ ಮತ್ತು ದಿಟ್ಟ ಲೇಖಕಿ ಆಗಿರುವ ಅವರು, ಅನೇಕ ಹೋರಾಟ ಮಾಡಿದ್ದಾರೆ. ಇವರು ಬರೆದ ಕವಿತೆಗಳು ಕರ್ನಾಟಕ ಮತ್ತು ಮಹಾರಾಷ್ಟ್ರದ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಪಠ್ಯಗಳಾಗಿದ್ದವು. ಇವರು ಬರೆದ ಕೆಲವು ಕವಿತೆಗಳು ಭಾರತೀಯ ಎಲ್ಲ ಭಾಷೆಗಳಲ್ಲಿ ಅನುವಾದವಾಗಿವೆ. ರೇಡಿಯೋ ಮತ್ತು ದೂರದರ್ಶನ ಕೇಂದ್ರದಲ್ಲಿ ಪ್ರಸಾರವಾದ 100ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ಹೀಗಾಗಿ ಇವರು ಕನ್ನಡ ಸಾಹಿತ್ಯ ಪರಿಷತ್‌ ನೇತೃತ್ವ ಹಿಡಿಯಬೇಕೆಂದು ಎಲ್ಲರ ಒಕ್ಕೊರಲಿನ ಒತ್ತಾಸೆಯಾಗಿದೆ. ನಾಡಿನ ಹಿರಿಯ ಲೇಖಕಿಯರು ಮತ್ತು ಮಾಜಿ ಸಚಿವರಾದ ಲೀಲಾದೇವಿ ಆರ್‌. ಪ್ರಸಾದ್‌, ಬಿ.ಟಿ.ಲಲಿತಾನಾಯಕ, ಹಂಪಿ ಕನ್ನಡ ವಿವಿ ಮಾಜಿ ಕುಲಪತಿ ಡಾ| ಮಲ್ಲಿಕಾ ಘಂಟಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ ಬೆಂಗಳೂರು, ಜನವಾದಿ ಮಹಿಳಾ ಸಂಘಟನೆಯ ಕೆ. ನೀಲಾ ಕಲಬುರಗಿ, ಮಂಡ್ಯ ಜಿಲ್ಲೆಯ ಭಾರತೀಯ ಮಹಿಳಾ ಕಲೆ ಮತ್ತು ಸಾಹಿತ್ಯ ಟ್ರಸ್ಟ್‌ ಅಧ್ಯಕ್ಷೆ ವಿದೂಷಿ ಶಾರದಾ ನಿಂಗೇಗೌಡ, ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವೀಣಾ ಸಂಕಣ್ಣವರ, ಅಖೀಲ ಭಾರತೀಯ ಕವಿಯಿತ್ರಿಯರ ಸಂಘದ ಅಧ್ಯಕ್ಷೆ ಡಾ| ವಿಜಯಲಕ್ಷ್ಮಿ ಕೋಸಗಿ, ರಾಯಚೂರು ಜಿಲ್ಲೆಯ ಭಗೀರಥ ವಿದ್ಯಾನಿಕೇತನ ಟ್ರಸ್ಟ್‌ ಅಧ್ಯಕ್ಷೆ ಸುಜಾತಾ ಶ್ರೀಕಾಂತರಾವ್‌, ಸಾಹಿತಿಗಳಾದ ಇಂದಿರಾ ಪಾಟೀಲ ಮೈಸೂರು, ನೀಲಗಂಗಾ ಚರಂತಿ ಮಠ ಬೆಳಗಾವಿ, ಕೆ.ಸುನಂದಾ ವಿಜಯಪುರ, ಲೇಖಕಿ ವಿದ್ಯಾವತಿ ಅಂಕಲಗಿ, ಸಾಹಿತಿ ಜ್ಯೋತಿ ಬದಾಮಿ ಬೆಳಗಾವಿ, ಟಿ.ಸಿ. ಮಂಜುಳಾ ತುಮಕೂರು, ಸಾಹಿತಿಗಳಾದ ಕಮಲಾ ಸುದರ್ಶನ ಬೆಂಗಳೂರು, ಮಂಜುಳಾ ಶಿವಾನಂದನ್‌ ಬೆಂಗಳೂರು, ಹಿರಿಯ ಸಾಹಿತಿಗಳಾದ ಹೇಮಾ ಪಟ್ಟಣಶೆಟ್ಟಿ ಧಾರವಾಡ, ಶಶಿಕಲಾ ವಸ್ತ್ರದ ಬೀದರ್‌, ಪುಷ್ಪಾ ಅಯ್ಯಂಗಾರ ಮೈಸೂರು, ಡಾ| ಗೀತಾಂಜಲಿ ಮೈಸೂರು, ಪ್ರೇಮಾಮಣಿ ಮೈಸೂರು, ರಂಗಕರ್ಮಿ ಶೋಭಾ ರಂಜೋಳಕರ್‌, ಕಲಬುರಗಿ ಕಸಾಪ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ, ಸಿ.ಎನ್‌.ಬಾಬಳಗಾಂವ ಕಲಬುರಗಿ, ಸೂರ್ಯಕಾಂತ ಪಾಟೀಲ ಆಳಂದ, ಕಲಬುರಗಿ ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ವಿಜಯಕುಮಾರ ತೇಗಲತಿಪ್ಪಿ ಹಾಗೂ ಮತ್ತಿತರರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next