ತಿ.ನರಸೀಪುರ: ಪರಿವರ್ತಿತ ಪುರಸಭೆಯ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲು ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮೇಲ್ದಜೇìಗೇರಿದ ಪುರಸಭೆಯಲ್ಲಿ ಸೇರ್ಪಡೆಗೊಂಡಿರುವ ಭೈರಾಪುರ ಹಾಗೂ ಆಲಗೂಡು ಗ್ರಾಪಂ ವ್ಯಾಪ್ತಿಯ ಬಡಾವಣೆಗಳ ರಸ್ತೆಗಳ ಅಭಿವೃದ್ಧಿಗೆ ಸರ್ಕಾರದ ವಿಶೇಷ ಅನುದಾನ ಮಂಜೂರು ಮಾಡುವ ಹಿನ್ನೆಲೆ ಎಲ್ಲಾ ರಸ್ತೆಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲು ಮಹತ್ವದ ನಿರ್ಣಯ ತೆಗೆದುಕೊಳ್ಳಲಾಯಿತು.
ಪಶುಪಾಲನೆ ಸಹಾಯಕ ನಿರ್ದೇಶಕರ ಕಚೇರಿ ಹಿಂಭಾಗಕ್ಕೆ ಮಟನ್ ಮಾರುಕಟ್ಟೆ ಸ್ಥಳಾಂತರಕ್ಕೆ ಸಭೆಯಲ್ಲಿ ನಾಮ ನಿರ್ದೇಶಿತ ಸದಸ್ಯ ಎನ್.ಮಹದೇ ವಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಕ್ಕೆ ಸ್ಥಳಾಂತರವನ್ನು ಮುಂದೂಡಲಾಯಿತು. ಶ್ರೀ ಬಣ್ಣಾರಮ್ಮ ದೇವಾಲಯದ ಬಳಿಯಿದ್ದ ಪೆಟ್ಟಿಗೆ ಅಂಗಡಿ ತೆರವು ಗೊಳಿಸಿದ ಸಂಬಂಧ ಸದಸ್ಯ ಬಿ.ಮಲ್ಲೇಶ ಹಾಗೂ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಅವರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.
ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‌ಗಳ ಶುಲ್ಕವನ್ನು 10 ರೂಗಳಿಂದ 20 ರೂಗಳಿಗೆ ಏರಿಕೆ ಮಾಡಿರುವ ಕ್ರಮಕ್ಕೆ ನಾಮ ನಿರ್ದೇಶಿತ ಸದಸ್ಯ ಸಿ.ಮಹದೇವ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಮುಖ್ಯಾಧಿಕಾರಿ ಎಂ.ಸಿ ನಾಗರತ್ನ ಪ್ರತಿಕ್ರಿಯಿಸಿ ಮೂರು ವರ್ಷಗಳಿಗೊಮ್ಮೆ ಶುಲ್ಕ ಏರಿಕೆ ಮಾಡುವಂತೆ ಸರ್ಕಾರದ ಮಾರ್ಗಸೂಚಿಯಲ್ಲಿ ಉಲ್ಲೇಖೀಸಿರುವುದರಿಂದ 20 ರೂಗಳಿಗೆ ಏರಿಕೆ ಮಾಡಲಾಗಿದೆ ಎಂದು ತಿಳಿಸಿದರು.
ಪುರಸಭೆಯಿಂದ ಮನೆ ಕಸ ಸಂಗ್ರಹಕ್ಕೆ 15 ರೂಗಳ ಹೆಚ್ಚುವರಿ ತೆರಿಗೆ ವಸೂಲಿ ಮಾಡುವ ಪ್ರಸ್ತಾಪಕ್ಕೆ ಬಹುತೇಕ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಹೆಚ್ಚುವರಿ ತೆರಿಗೆ ವಿಧಿಸುವುದನ್ನು ಕೈ ಬಿಡಲಾಯಿತು. ವಾಣಿಜ್ಯ ಕಟ್ಟಡದ ಮಳಿಗೆಗಳು, ಹೋಟೆಲ್‌ಗಳು ಹಾಗೂ ಕಲ್ಯಾಣ ಮಂಟಪಗಳಲ್ಲಿ ಕಸ ವಿಲೇವಾರಿಗೆ ಶುಲ್ಕ 200 ರೂಗಳಿಂದ 300 ರೂಗಳಿಗೆ ಏರಿಕೆ ಮಾಡಲು ಮತ್ತು ಕಸ ನಿರ್ವಹಣೆಯ ಬಗ್ಗೆ ಹೋಟೆಲ್ ಹಾಗೂ ಕಲ್ಯಾಣ ಮಂಟಪ ಮಾಲೀಕರ ಸಭೆ ಕರೆದು ಚರ್ಚೆ ನಡೆಸಲು ತೀರ್ಮಾನಿಸಲಾಯಿತು. ಅಲ್ಲದೆ ಭೈರಾಪುರದಲ್ಲಿ ಐದಾರು ಮಂದಿಗೆ ಡೆಂ à ಜ್ವರ ಕಾಣಿಸಿಕೊಂಡಿರುವುದರಿಂದ ಪಟ್ಟಣದೊಳಗಿನ ಹಂದಿ ಸಾಗಾಣಿಕೆ ನಿರ್ಬಂಧಿಸಲು ಹಾಗೂ ಒಂದೂವರೆ ಕಿ.ಮೀ ದೂರಕ್ಕೆ ಸ್ಥಳಾಂತರಿಸಲು ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಅಧ್ಯಕ್ಷೆ ಸುಧಾ ಗುರುಮಲ್ಲಪ್ಪ, ಉಪಾಧ್ಯಕ್ಷೆ ರತ್ನಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ನೈಸ್ ಮಹದೇವಸ್ವಾಮಿ, ಸದಸ್ಯರಾದ ಬಿ.ಮಲ್ಲೇಶ, ಟಿ.ಜಿ.ಪುಟ್ಟಸ್ವಾಮಿ, ರಾಘವೇಂದ್ರ, ಶಶಿಕಲಾ ಪ್ರಕಾಶ್, ಮೀನಾಕ್ಷಿ, ರಾಜಮ್ಮ, ಶೃತಿ ಮಣಿಕಂಠ, ನಾಮ ನಿರ್ದೇಶಿತ ಸದಸ್ಯರಾದ ನಾಗೇಂದ್ರ, ಗುಲ್ಜಾರ್ ಖಾನ್, ಕಿರಿಯ ಎಂಜಿನಿಯರ್ ಕೆ.ಪುರುಷೋತ್ತಮ್, ಯೋಜನಾಧಿಕಾರಿ ಕೆಂಪರಾಜು, ಆರೋಗ್ಯಾಧಿಕಾರಿ ಚೇತನ್‌ಕುಮಾರ್, ಕಂದಾಯ ನಿರೀಕ್ಷರಾದ ರಾಣಿ, ಪುಟ್ಟಸ್ವಾಮಿ, ಸಮುದಾಯ ಸಂಘಟಕ ಮಹದೇವ ಹಾಗೂ ಸಿಬ್ಬಂದಿ ಹಾಜರಿದ್ದರು.