Advertisement

8 ವಲಯಗಳಲ್ಲಿ ಸಿಇಎನ್‌ ಠಾಣೆ ತೆರೆಯಲು ನಿರ್ಧಾರ

11:14 AM Jan 17, 2019 | |

ಬೆಂಗಳೂರು: ನಗರದಲ್ಲಿ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವುಗಳ ನಿಯಂತ್ರಣ ಹಾಗೂ ಸೈಬರ್‌ ಆಪರಾಧ ಕೃತ್ಯ ಎಸಗುವ ಆರೋಪಿಗಳ ಪತ್ತೆ ಕಾರ್ಯವನ್ನು ಚುರುಕುಗೊಳಿಸಲು ಬೆಂಗಳೂರು ನಗರ ಪೊಲೀ ಸರು ಮುಂದಾಗಿದ್ದು, ಎಂಟು ವಲಯಗಳಲ್ಲೂ ಸಿಇಎನ್‌(ಸೈಬರ್‌, ಎಕಾನಿಮಿಕ್‌ ಅಫೆನ್ಸ್‌ ಹಾಗೂ ನಾರ್ಕೋಟಿಕ್‌) ಠಾಣೆ ಸ್ಥಾಪಿಸಲು ಮುಂದಾಗಿದೆ.

Advertisement

ಸೈಬರ್‌ ಅಪರಾಧ ಕೃತ್ಯಗಳನ್ನು ತಡೆಯಲು ನಗರದ ಎಂಟು ಉಪ ಪೊಲೀಸ್‌ ಆಯುಕ್ತರ ವಲಯಗಳಲ್ಲಿ ಸಿಇಎನ್‌(ಸೈಬರ್‌, ಆರ್ಥಿಕ ಅಪ ರಾಧಹಾಗೂ ಮಾದಕ ವಸ್ತು ) ಪೊಲೀಸ್‌ ಠಾಣೆ ತೆರೆ ಯುವ ಸಂಬಂಧ ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಿದೆ.

ಸರ್ಕಾರದ ಮಟ್ಟದಲ್ಲೂ ಸಿಇಎನ್‌- ಠಾಣೆಗಳ ತೆರೆಯುವ ಕುರಿತು ಗಂಭೀರ ಚರ್ಚೆ ನಡೆದಿದೆ. ಹೀಗಾಗಿ, ಸರ್ಕಾರದಿಂದ ಒಪ್ಪಿಗೆ ದೊರೆತರೆ ತತಕ್ಷಣವೇ ತಾತ್ಕಾಲಿಕವಾಗಿ ಆಯಾ ವಲಯಗಳ ಕಾನೂನು ಸುವ್ಯವಸ್ಥೆ ಠಾಣೆಯೊಂದರಲ್ಲಿ ಸಿಇಎನ್‌ ಠಾಣೆಗಳು ಕಾರ್ಯನಿರ್ವಹಿಸಲಿವೆೆ. ರಾಜ್ಯ ಸರ್ಕಾರದಿಂದ ಅಗತ್ಯ ಹಣಕಾಸು ದೊರೆತ ನಂತರ ಪ್ರತ್ಯೇಕ ಸ್ಥಳಗಳಲ್ಲಿ ಠಾಣೆಗಳು ಸ್ಥಾಪನೆಯಾಗಲಿವೆ.

ರಾಜ್ಯದ 30 ಜಿಲ್ಲೆಗಳಲ್ಲಿಯೂ ಪ್ರಸ್ತುತ ಸಿಇಎನ್‌ ಪೊಲೀಸ್‌ ಠಾಣೆಗಳನ್ನು ತೆರೆಯಲಾಗಿದೆ. ಬೆಂಗಳೂರಿನ ಎಂಟು ವಲಯಗಳಲ್ಲೂ ಎಸ್ಪಿ ದರ್ಜೆಯ ಅಧಿಕಾರಿಗಳು ಕಾರ್ಯನಿರ್ವ ಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ವಲಯಗಳಲ್ಲೂ ಒಂದು ಸೆನ್‌ ಪೊಲೀಸ್‌ ಠಾಣೆ ತೆರೆಯಬೇಕಿದ್ದು, ಅಗತ್ಯ ಮೂಲಸೌಕರ್ಯ ಹಾಗೂ ಸಿಬ್ಬಂದಿ ಒದಗಿಸುವವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಜತೆಗೆ, ನಗರದಲ್ಲಿ ಇತ್ತೀಚೆಗೆ ಸೈಬರ್‌ ಮತ್ತು ಆರ್ಥಿಕ ಅಪರಾಧಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ವಂಚನೆ ಪ್ರಕರಣಗಳನ್ನು ಸ್ಥಳೀಯ ಪೊಲೀಸರೇ ತನಿಖೆ ನಡೆಸುತ್ತಿದ್ದರಾದರೂ, ಕಾರ್ಯ ದೊತ್ತಡದಲ್ಲಿ ನಿರೀಕ್ಷಿತ ಫ‌ಲಿತಾಂಶ ದೊರೆಯುತ್ತಿಲ್ಲ. ಅಲ್ಲದೆ, ಮಾದಕ ವಸ್ತು ಜಾಲ ಕೂಡ ನಗರಾದ್ಯಂತ ತನ್ನ ಜಾಲವನ್ನು ವಿಸ್ತರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸೈಬರ್‌, ಆರ್ಥಿಕ ಹಾಗೂ ಮಾದಕ ವಸ್ತು ಪ್ರಕರಣಗಳ ಪತ್ತೆಗೆ ಪ್ರತ್ಯೇಕ ಠಾಣೆಗಳನ್ನು ತೆರೆದರೆ ಸೈಬರ್‌ ಠಾಣೆ ಪೊಲೀಸರ ಹೊರೆಯನ್ನು ಕಡಿಮೆ ಮಾಡಬಹುದು ಎಂದು ಪೊಲೀಸ್‌ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

Advertisement

ಸಿಐಡಿ ಕೇಂದ್ರ ಕಚೇರಿಯಲ್ಲಿ ತರಬೇತಿ: ಪ್ರತಿ ಸಿಇಎನ್‌- ಠಾಣೆಗೆ ಕನಿಷ್ಠ ಒಬ್ಬರು ಇನ್‌ಸ್ಪೆಕ್ಟರ್‌, ಎರಡರಿಂದ ಮೂವರು ಸಬ್‌ ಇನ್‌ಸ್ಪೆಕ್ಟರ್‌, ಐದಕ್ಕೂ ಹೆಚ್ಚು ಎಎಸ್‌ಐ ಹಾಗೂ 10ಕ್ಕೂ ಹೆಚ್ಚು ಸಿಬ್ಬಂದಿ ಸೇರಿ ಒಟ್ಟು 25 ಸಿಬ್ಬಂದಿ ನಿಯೋಜಿಸುವ ಬಗ್ಗೆ ಚಿಂತಿಸಲಾಗಿದೆ. ಈ ಎಲ್ಲ ಸಿಬ್ಬಂದಿಗೆ ಇನ್ಫೋಸಿಸ್‌ ಫೌಂಡೇಶನ್‌ ಸಹಯೋಗದಲ್ಲಿ ರಾಜ್ಯ ಸರ್ಕಾರ ಸಿಐಡಿ ಕೇಂದ್ರ ಕಚೇರಿಯಲ್ಲಿ ಸ್ಥಾಪಿಸಿರುವ ಸೈಬರ್‌ ಅಪರಾಧಗಳ ಕುರಿತ ತರಬೇತಿ ಕೇಂದ್ರದಲ್ಲಿ ನುರಿತ ತಜ್ಞರಿಂದ ಅಗತ್ಯ ತರಬೇತಿ ಕೊಡಲು ನಿರ್ಧರಿಸಲಾಗಿದೆ.

ಪತ್ತೆ ಕಡಿಮೆ: ಈಗಾಗಲೇ ನಗರ ಪೊಲೀಸ್‌ ಆಯುಕ್ತರ ಕಚೇರಿ ಆವರಣದಲ್ಲಿ ಸೈಬರ್‌ ಪೊಲೀಸ್‌ ಠಾಣೆ ಕಾರ್ಯನಿರ್ವಹಿಸುತ್ತಿದ್ದು, ಪ್ರತಿನಿತ್ಯ ಕನಿಷ್ಠ 25-30 ಪ್ರಕರಣಗಳು ದಾಖಲಾಗುತ್ತಿವೆ. ಕಳೆದ ಎರಡು ವರ್ಷಗಳ ಅಂಕಿ ಅಂಶ ಪ್ರಕಾರ, ವರ್ಷದಿಂದ ವರ್ಷಕ್ಕೆ ಸೈಬರ್‌ ಕ್ರೈಂ ಹೆಚ್ಚಾಗುತ್ತಿದ್ದರೂ ಪತ್ತೆ ಕಾರ್ಯ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ.

ತಾಂತ್ರಿಕ ತೊಡಕುಗಳು ಒಂದೆಡೆಯಾದರೆ, ಮತ್ತೂಂದೆಡೆ ಸಿಬ್ಬಂದಿ ಕೊರತೆ ಇದಕ್ಕೆ ಕಾರಣ. 2017ರಲ್ಲಿ 2.023 ಪ್ರಕರಣಗಳು ದಾಖಲಾದರೆ ಆ ಪೈಕಿ ಕೇವಲ 229 ಪ್ರಕರಣಗಳು ಮಾತ್ರ ಪತ್ತೆಯಾಗಿವೆ. 2018ರಲ್ಲಿ 5.036 ಪ್ರಕರಣಗಳು ದಾಖಲಾಗಿದ್ದು, ಕೇವಲ 215 ಪ್ರಕರಣಗಳು ಮಾತ್ರ ಇತ್ಯರ್ಥವಾಗಿವೆ.

ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next