Advertisement

ಕೋವಿಡ್‌ ಪರೀಕ್ಷೆ ಹೆಚ್ಚಿಸಲು ನಿರ್ಧಾರ

11:32 PM Dec 29, 2022 | Team Udayavani |

ಬೆಂಗಳೂರು: ರಾಜಧಾನಿ ಹೊರತುಪಡಿಸಿ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ದೈನಂದಿನ ಕೋವಿಡ್‌ ಪರೀಕ್ಷೆಗಳನ್ನು 3,500ದಿಂದ 10 ಸಾವಿರಕ್ಕೆ, ಬೆಂಗಳೂರಿನಲ್ಲಿ  ಈಗಿರುವ 1,500 ರಿಂದ 5 ಸಾವಿರಕ್ಕೆ ಏರಿಸಲು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ರವಿವಾರ ನಡೆಸಿದ 189ನೇ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ.

Advertisement

ಸಮಿತಿಯ ಸೂಚನೆ ಹಿನ್ನೆಲೆಯಲ್ಲಿ ಬುಧವಾರ 19,618, ಗುರುವಾರ 13,892 ಪರೀಕ್ಷೆ ನಡೆಸಲಾಗಿತ್ತು. ಆ ಪೈಕಿ ಕ್ರಮವಾಗಿ 39 ಹಾಗೂ 56 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್‌ ಬಿಎಫ್7 ತಳಿ ಆತಂಕದ ಬೆನ್ನಲ್ಲೇ ರಾಜ್ಯದಲ್ಲಿ ಪರೀಕ್ಷೆಗಳ ಪ್ರಮಾಣವನ್ನು ಏರಿಸಲಾಗಿದೆ. ಹೊಸ ಅಲೆಯನ್ನು ನಿಯಂತ್ರಿಸುವ ಸಲುವಾಗಿ ಆರೋಗ್ಯ ಇಲಾಖೆಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next