Advertisement
ಅವರು ಇಲ್ಲಿನ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಸಮ್ಮಿಲನದಲ್ಲಿ ಮಾತನಾಡುತ್ತಿದ್ದರು.ರಾಜ್ಯದ ಜನರು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸರಕಾರದ ಆಡಳಿತದ ವೈಖರಿಯಿಂದ ಬೇಸತ್ತು ಹೋಗಿದ್ದು ಸಮಸ್ಯೆಗಳು ಜೀವಂತವಾಗಿವೆ. ಕೋಮುವಾದ ಮತ್ತು ನಕಲಿ ಜಾತ್ಯತೀತತೆಯ ರಾಜಕಾರಣದ ಮಧ್ಯೆ ಎಸ್‌ಡಿಪಿಐ ಮಾತ್ರ ಪರ್ಯಾಯವಾಗಲಿದೆ.
ಈಗಾಗಲೇ ಎರಡು ಹಂತಗಳಲ್ಲಿ ಹತ್ತೊಂಬತ್ತು ಕ್ಷೇತ್ರಗಳ ಅಭ್ಯರ್ಥಿಗಳನ್ನು ರಾಷ್ಟ್ರೀಯ ಅಧ್ಯಕ್ಷರು ಪತ್ರಿಕಾಗೋಷ್ಠಿಗಳ ಮೂಲಕ ಘೋಷಿಸಿದ್ದಾರೆ ಮತ್ತು ಆ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಬಿರುಸಿನಿಂದ ನಡೆಯುತ್ತಿದೆ ಎಂದರು. ಎಸ್‌ಡಿಪಿಐ ಎಲ್ಲರನ್ನೂ ಸಮಾನವಾಗಿ ಕಾಣುವ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಭರವಸೆ ನೀಡುತ್ತದೆ ಎಂದೂ ಹೇಳಿದರು. ಕಾರ್ಯದರ್ಶಿ ಕಾರ್ಯದರ್ಶಿ ಅಶ್ರಫ್ ಮಾಚಾರ್ ಮಾತನಾಡಿ ಭ್ರಷ್ಟಾಚಾರ, ಕೋಮುವಾದ, ಜಾತಿವಾದ ಮತ್ತು ಸಾಮಾಜಿಕ ಅಸಮಾನತೆಗಳು ಇಂದಿಗೂ ತಾಂಡವಾಡುತ್ತಿವೆ. ಇದು ಜನರನ್ನು ನಿತ್ಯ ಕೊಲ್ಲುತ್ತಿವೆ. ಜನರ ತೆರಿಗೆ ಹಣ ನಿರಂತರ ಲೂಟಿಯಾಗುತ್ತಿದೆ. ಜಾತಿ ಬಲ, ಹಣ ಬಲ, ತೋಳ್ಬಲಗಳ ಮೆರೆದಾಟದಲ್ಲಿ ಜನರನ್ನು ಹೆದರಿಸಿ, ಬೆದರಿಸಿ ಆತಂಕದ ಬೆಂಕಿಯಲ್ಲಿ ಬೇಯಿಸಲಾಗುತ್ತಿದೆ. ಇದನ್ನು ತಡೆಯಲು, ಶುದ್ಧ ರಾಜಕಾರಣ ಮಾಡಲು, ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಸಂವಿಧಾನವನ್ನು ನಿಜ ಅರ್ಥದಲ್ಲಿ ಜಾರಿ ಮಾಡಲು, ಎಲ್ಲರಿಗೂ ಸಮಾನ ಅವಕಾಶದ ಜೊತೆಗೆ ಭ್ರಷ್ಟಾಚಾರದಿಂದ ಮುಕ್ತವಾದ ಸಮಾಜವನ್ನು ಕಟ್ಟಲು, ಜನಪರವಾದ ಪ್ರಾಮಾಣಿಕ ಮತ್ತು ನಿಸ್ವಾರ್ಥ ಮನಸ್ಸಿನ ಶಾಸಕರುಗಳನ್ನು ನಾವು ಆಯ್ಕೆ ಮಾಡಬೇಕಾಗಿದೆ ಎಂದರು.
Related Articles
Advertisement