Advertisement

ಸೂಕ್ತ ಮಾರ್ಗದರ್ಶನ ಬಳಿಕ ಮರಳು ದಿಬ್ಬ ತೆರವು ನಿರ್ಧಾರ

01:30 AM Apr 12, 2024 | Team Udayavani |

ಮಂಗಳೂರು: ಮರಳು ದಿಬ್ಬಗಳಿಂದ ಉತ್ಪತ್ತಿಯಾದ ಮರಳಿನ ವಿಲೇವಾರಿ ಬಗ್ಗೆ ಯಾವುದೇ ಸ್ಪಷ್ಟ ನಿರ್ದೇಶನ ಇಲ್ಲದಿರುವ ಹಿನ್ನೆಲೆಯಲ್ಲಿ ಸೂಕ್ತ ಮಾರ್ಗದರ್ಶನ ನೀಡುವಂತೆ ಬೆಂಗಳೂರಿನಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರನ್ನು ಕೋರಲಾಗಿದೆ. ಸೂಕ್ತ ಮಾರ್ಗದರ್ಶನ ಬಂದ ಅನಂತರ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ವಯ ತಾತ್ಕಾಲಿಕ ಪರವಾನಿಗೆ ನೀಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Advertisement

ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ ಮರಳು ಸಂಗ್ರಹ ಗೊಂಡು ದಿಬ್ಬಗಳಾಗಿ ಮಾರ್ಪಟ್ಟು ದೋಣಿಗಳ ಸಂಚಾರಕ್ಕೆ ತಡೆ ಒಡ್ಡುವ 8 ಮರಳು ದಿಬ್ಬಗಳನ್ನು ತೆರವುಗೊಳಿಸುವ ಸಂಬಂಧ ಕರ್ನಾಟಕ ಕರಾವಳಿ ನಿರ್ವಹಣ ಪ್ರಾ ಧಿಕಾರ, ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯು 2023ರ ಡಿ. 6ರಂದು ಪರಿಸರ ವಿಮೋಚನ ಪತ್ರ ದೊರೆತಿದೆ. ಈ ಕುರಿತು 2024ರ ಜ. 17ರಂದು ನಡೆದ ಜಿಲ್ಲಾ 7 ಸದಸ್ಯರ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದ್ದು, ರಾಜ್ಯ ಕರಾವಳಿ ನಿರ್ವಹಣ ಪ್ರಾ ಧಿಕಾರವು ನೀಡಿರುವ ನಿರಾಕ್ಷೇಪಣ ಪತ್ರದಲ್ಲಿ ಹೆಚ್ಚುವರಿ ಷರತ್ತು ಎಂಬ ಶೀರ್ಷಿಕೆಯಡಿ ರಾಷ್ಟ್ರೀಯ ಹಸಿರು ಪೀಠ ನ್ಯಾಯ ಮಂಡಳಿ ನೀಡಿರುವ ಆದೇಶ ಹಾಗೂ ಸರ್ವೋಚ್ಚ ನ್ಯಾಯಾಲಯದ ಮಧ್ಯಾಂತರ ಆದೇಶವನ್ನು ಪಾಲನೆ ಮಾಡಿ ತೆರವುಗೊಳಿಸಬಹುದಾಗಿದೆ ಎಂದು ತಿಳಿಸಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next