Advertisement

ಶಿವಾಜಿ ಜಯಂತಿ ಆಚರಣೆಗೆ ನಿರ್ಧಾರ

05:51 PM Feb 18, 2021 | Team Udayavani |

ಭಾಲ್ಕಿ: ಪಟ್ಟಣದಲ್ಲಿ ಫೆ.19 ರಂದು ಸಾರ್ವಜನಿಕ ಜಯಂತಿ ಉತ್ಸವ ಸಮಿತಿ ವತಿಯಿಂದ ಶಿವಾಜಿ ಮಹಾರಾಜರ 399ನೇ ಜಯಂತಿ ಮಹೋತ್ಸವ ಅದ್ಧೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮರಾಠಾ ಸಮಾಜದ ಹಿರಿಯ ಮುಖಂಡ, ಜಯಂತಿ ಉತ್ಸವ ಸಮಿತಿ ಪ್ರಮುಖರು ಆಗಿರುವ ಜನಾರ್ದನ ಬಿರಾದಾರ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯಂತಿ ಆಚರಣೆಗೆ ಸರಕಾರದ ಅನುಮತಿ ಪಡೆಯಲಾಗಿದೆ. ಶಿವಾಜಿ ಮಹಾರಾಜರು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅವರ ಚಿಂತನೆ, ಆದರ್ಶಗಳು ಎಲ್ಲರೂ ಪಾಲನೆ ಮಾಡುತ್ತಾರೆ. ಹಾಗಾಗಿ ಎಲ್ಲ ಸಮಾಜದ ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಜಯಂತಿ ಮಹೋತ್ಸವ ಐತಿಹಾಸಿಕವಾಗಿ ಆಚರಣೆ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಂದು ಬೆಳಗ್ಗೆ 11ಕ್ಕೆ ಭಾಲ್ಕೇಶ್ವರ ಮಂದಿರ ಆವರಣದಿಂದ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ಹೊರಟು, ಪ್ರಮುಖ ರಸ್ತೆ, ಬೀದಿ ಮೂಲಕ ಸಂಚರಿಸಿ ಶಿವಾಜಿ ವೃತ್ತದಲ್ಲಿ ಸಮಾವೇಶಗೊಳ್ಳಲಿದೆ. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಲಂಬಾಣಿ ನೃತ್ಯ ಸೇರಿ ವಿವಿಧ ಕಲಾ ಪ್ರಕಾರಗಳು ಮೆರವಣಿಗೆಯ ಕಳೆ ಹೆಚ್ಚಿಸಲಿವೆ ಎಂದರು.

ಬಳಿಕ ಸಂಜೆ 7ಕ್ಕೆ ಶಿವಾಜಿ ವೃತ್ತದ ರಸ್ತೆಯಲ್ಲಿ ಜಯಂತಿ ನಿಮಿತ್ತ ವೇದಿಕೆ ಸಮಾರಂಭ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಜಯಂತಿ ಸಮಾರಂಭ ಉದ್ಘಾಟಿಸಲಿದ್ದಾರೆ. ಸಂಸದ ಭಗವಂತ ಖೂಬಾ, ಶಾಸಕ ಈಶ್ವರ ಖಂಡ್ರೆ, ಎಂಎಲ್ಸಿ ವಿಜಯಸಿಂಗ್‌, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಮಾರುತಿರಾವ ಮೂಳೆ, ಬಿಜೆಪಿ ಮುಖಂಡ ಡಿ.ಕೆ. ಸಿದ್ರಾಮ, ವಿಧಾನ ಪರಿಷತ್‌ನ ಮಾಜಿ ಉಪಸಭಾಪತಿ ಕೇಶವರಾವ ನಿಟ್ಟೂರಕರ್‌, ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಎಪಿಎಂಸಿ ಅಧ್ಯಕ್ಷ ಬನಸಿಲಾಲ್‌ ಬೋರಾಳೆ, ಹೀರಾಚಂದ ವಾಘಮಾರೆ, ಅಶೋಕರಾವ ಸೋನಜಿ, ದಯಾನಂದ ಸೂರ್ಯವಂಶಿ, ಬಾಬುರಾವ ಕಾರಬಾರಿ, ತಾಪಂ ಅಧ್ಯಕ್ಷೆ ಮೀರಾಬಾಯಿ ಕಣಜೆ, ಪ್ರವೀಣ ಸಾವರೆ, ಪಂಚಶೀಲ ಕಣಜೆ, ಸಂತೋಷ ತಗರಖೇಡ್‌, ಕಿಶನರಾವ ಪಾಟೀಲ್‌ ಇಂಚೂರಕರ್‌, ಯಶವಂತ ಭೋಸ್ಲೆ, ರಾಮರಾವ ವರವಟ್ಟಿಕರ್‌, ಡಿಗಂಬರರಾವ ಮಾನಕಾರಿ, ಅನೀಲಕುಮಾರ ಶಿಂಧೆ, ನಂದಕುಮಾರ ಸಾಳೊಂ ಕೆ, ಯಾದವರಾವ ಕಣಜೆ, ನಾಮದೇವರಾವ ಪವಾರ್‌, ಡಾ.ರಾಜೇಂದ್ರ ಜಾಧವ, ರಾಹುಸಾಹೇಬ ತಗರಖೇಡೆ, ಶೇಷರಾವ ಕಣಜಿಕರ್‌, ವಿಜಯಕುಮಾರ ಪಾಟೀಲ್‌, ಬಾಬುರಾವ ಹುಣಸನಾಳೆ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಜಯಂತಿ ಮಹೋತ್ಸವ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ. ಜಯಂತಿ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಕಿಶನರಾವ ಪಾಟೀಲ್‌ ಇಂಚೂರಕರ್‌, ಸಮಿತಿ ಉಪಾಧ್ಯಕ್ಷ ದಯಾನಂದ ಸೂರ್ಯವಂಶಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗೋವಿಂದರಾವ ಬಿರಾದಾರ್‌, ಪಾಂಡುರಂಗ ಕನಸೆ, ಕೇಶವ ಸೂರ್ಯವಂಶಿ, ಶರದ ದುರ್ಗಾಳೆ, ಆಶೀಶ ತಗರಖೇಡೆ, ಯಶವಂತ ಭೋಸ್ಲೆ, ದತ್ತು ಜಾಧವ, ಸಂತೋಷ ತಗರಖೇಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next