Advertisement

‘ಮೀನು ಲಾರಿಗಳ ತ್ಯಾಜ್ಯ ವಿರುದ್ಧ ಕಠಿನ ಕ್ರಮಕ್ಕೆ ನಿರ್ಧಾರ’

04:20 AM May 04, 2019 | Team Udayavani |

ಮಹಾನಗರ: ರಸ್ತೆಗೆ ತಾಜ್ಯ ನೀರು ಚೆಲ್ಲುತ್ತಾ ಮೀನು ಸಾಗಾಟ ಮಾಡುವ ಲಾರಿಗಳ ವಿರುದ್ಧ ಕ್ರಮ ಜರಗಿಸುವ ಬಗ್ಗೆ ಸೂಕ್ತ ಆದೇಶ ಹೊರಡಿ ಸುವಂತೆ ಕೋರಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ನಗರ ಪೊಲೀಸ್‌ ಇಲಾಖೆ ಕರಡು ಪ್ರಸ್ತಾವನೆ ಕಳುಹಿಸಿದೆ ಎಂದು ಮಂಗಳೂರು ಪೊಲೀಸ್‌ ಕಮಿಷನರೆಟ್‌ನ ಡಿಸಿಪಿ ಲಕ್ಷ್ಮೀ ಗಣೇಶ್‌ ತಿಳಿಸಿದರು. ಶುಕ್ರವಾರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ನಡೆದ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದರು.

Advertisement

ನಾಗರಿಕರೊಬ್ಬರು ಫೋನ್‌ ಮಾಡಿ, ಮಂಗಳಾದೇವಿ- ಮೋರ್ಗನ್ಸ್‌ ಗೇಟ್‌ನಲ್ಲಿ ಮೀನುಸಾಗಾಟ ಲಾರಿಗಳಿಂದ ತ್ಯಾಜ್ಯ ನೀರು ಸೋರುವ ಸಮಸ್ಯೆ ಇನ್ನೂ ನಿಂತಿಲ್ಲ. ಇದರಿಂದಾಗಿ ಜನರಿಗೆ ಮಾತ್ರವಲ್ಲ ವಾಹನ ಸವಾರರಿಗೂ ತೊಂದರೆಯಾಗುತ್ತಿದೆ ಎಂದು ಅಹವಾಲು ಸಲ್ಲಿಸಿದರು.

ಇದಕ್ಕೆ ಉತ್ತರಿಸಿದ ಡಿಸಿಪಿ ಲಕ್ಷ್ಮೀ ಗಣೇಶ್‌, ಮೀನಿನ ಲಾರಿಗಳ ಸಮಸ್ಯೆ ಕುರಿತಂತೆ ಈ ಹಿಂದಿನ ಫೋನ್‌ ಇನ್‌ ಕಾರ್ಯಕ್ರಮದಲ್ಲಿಯೂ ಪ್ರಸ್ತಾವವಾಗಿದ್ದು, ಈ ಬಗ್ಗೆ ಸಂಬಂಧ ಪಟ್ಟವರ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಲಾಗಿತ್ತು. ಅದರ ಪ್ರಕಾರ ಎ. 29ರಂದು ಮೀನು ಸಾಗಾಟ ಲಾರಿ ಮಾಲಕರು, ಸಾರಿಗೆ ಇಲಾಖೆ ಮತ್ತು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳ ಜತೆ ಪೊಲೀಸ್‌ ಕಮಿಷನರ್‌ ಅವರು ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಒಂದು ಟನ್‌ ಮೀನು ಸಾಗಾಟ ಮಾಡುವುದಿದ್ದರೆ, 50 ಲೀಟರ್‌ ಐಸ್‌ ನೀರು (ತ್ಯಾಜ್ಯ) ಸಂಗ್ರಹಕ್ಕೆ ಪ್ರತ್ಯೇಕ ಕ್ಯಾನ್‌ ಅಳವಡಿಸಬೇಕು. ಕಂಪಾರ್ಟ್‌ಮೆಂಟ್ ವ್ಯವಸ್ಥೆಯನ್ನು ಮೀನು ಸಾಗಾಟ ವಾಹನಗಳು ಹೊಂದಿರಬೇಕು. ಕೆಲವು ಲಾರಿಗಳು ಶುಚಿತ್ವವನ್ನು ಹೊಂದಿರುವುದಿಲ್ಲ. ಇದು ಕೂಡ ವಾತಾವರಣ ಕಲುಷಿತ ಗೊಳ್ಳಲು ಕಾರಣವಾಗುತ್ತದೆ. ಇವೆಲ್ಲವನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ. ಇದರ ಹೊರತು ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದರೆ ಪ್ರಥಮ ಬಾರಿಗೆ 5,000 ರೂ. ದಂಡಶುಲ್ಕ, ಅನಂತರವೂ ನಿಯಮ ಉಲ್ಲಂಘನೆ ಕಂಡುಬಂದರೆ ಪರವಾನಿಗೆ ಅಮಾನತು ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಈಗಾಗಲೇ ಲಾರಿ ಮಾಲಕರಿಗೆ ಸೂಚನೆ ನೀಡಲಾಗಿದೆ. ಈ ನಿಯಮಾವಳಿಯ ಕರಡು ತಯಾರಿಸಲಾಗಿದ್ದು, ಅದನ್ನು ಆದೇಶವಾಗಿ ಮಾರ್ಪಡಿಸಿದ ಬಳಿಕ ಅನುಷ್ಠಾನಕ್ಕೆ ತರಲಾಗುವುದು. ಈ ಬಗ್ಗೆ ಕರಡು ಪ್ರಸ್ತಾವವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ ಎಂದರು.

ಅವೈಜ್ಞಾನಿಕ ಚರಂಡಿ ಕಾಮಗಾರಿ ಆರೋಪ
ಲಾಲ್ಬಾಗ್‌ ಬಳಿ ಪಾಲಿಕೆಯಿಂದ ಚರಂಡಿ ಕಾಮಗಾರಿ ನಡೆಯುತ್ತಿದೆ. ಲೇಡಿಹಿಲ್ ಕಡೆಯಿಂದ ಲಾಲ್ಬಾಗ್‌ ಜಂಕ್ಷನ್‌ನಲ್ಲಿ ಮುಕ್ತವಾಗಿ ಕೆಎಸ್ಸಾರ್ಟಿಸಿ ನಿಲ್ದಾಣ ಕಡೆಗೆ ತಿರುಗುವಲ್ಲಿ ಎಡಭಾಗ ದಲ್ಲಿ ಚರಂಡಿ ಕಾಮಗಾರಿಯನ್ನು ಅವೈಜ್ಞಾನಿ ಕವಾಗಿ ನಡೆಸಲಾಗುತ್ತಿದೆ. ಇಲ್ಲಿ ಮೊದಲೇ ಇಕ್ಕಟ್ಟು ರಸ್ತೆ ಇದೆ. ಈಗ ಕಾಂಕ್ರಿಟ್ ಆದ ಬಳಿಕ ಚರಂಡಿಯನ್ನು ಕಾಂಪೌಂಡ್‌ ಬಳಿ ನಿರ್ಮಿಸುವ ಬದಲು ರಸ್ತೆಯ ಅಂಚಿನಲ್ಲಿಯೇ ಮಾಡ‌ಲಾಗುತ್ತಿದೆ.

ಮೂಡುಬಿದಿರೆಯ ಹುಡ್ಕೋ ಕಾಲನಿಯಲ್ಲಿ ಇತ್ತೀಚೆಗೆ ಬೆಂಕಿ ಬಿದ್ದಾಗ ಅಗ್ನಿಶಾಮಕ ಕಚೇರಿಗೆ ಕರೆ ಮಾಡಿದ್ದು, ಆಗ ಅಲ್ಲಿದ್ದವರು ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಬಳಿಕ ಸ್ಥಳೀಯ ಜನರೇ ಸೇರಿ ಬೆಂಕಿ ನಂದಿಸಿದ್ದಾರೆ. ಆಸ್ತಿಪಾಸ್ತಿ ರಕ್ಷಣೆಯ ಜವಾಬ್ದಾರಿ ಹೊಂದಿರುವ ಅಗ್ನಿಶಾಮಕ ಇಲಾಖೆಯವರೇ ಹೀಗೆ ಹೇಳಿದರೆ, ನಾಗರಿಕರು ಏನು ಮಾಡಬೇಕು ಎಂದು ನಾಗರಿಕರೊಬ್ಬರು ಪ್ರಶ್ನಿಸಿದರು. ಈ ವಿಷಯವನ್ನು ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಡಿಸಿಪಿ ಹನುಮಂತರಾಯ ತಿಳಿಸಿದರು.

Advertisement

ನಮ್ಮ ಮನೆ ಎದುರಿನ ರಸ್ತೆಯಲ್ಲಿ ಮಕ್ಕಳು ಆಟವಾಡುತ್ತಿರುತ್ತಾರೆ. ಇದರಿಂದ ನಮಗೆ ತೊಂದರೆ ಆಗುತ್ತಿದೆ. ಮಕ್ಕಳಲ್ಲಿ ಆಕ್ಷೇಪಿಸಿದ್ದಕ್ಕೆ ಅವರ ಹೆತ್ತವರು ಸೇರಿ ನಮ್ಮ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಾರೆ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್‌ ಠಾಣೆಗೆ ತಿಳಿಸಿದರೆ ಅವರು ದೂರು ದಾಖಲಿಸಲು ನಿರಾಕರಿಸಿದ್ದಾರೆ. ಸಾರ್ವಜನಿಕ ರಸ್ತೆಯಲ್ಲಿ ಮಕ್ಕಳು ಆಟ ಆಡಬಹುದು ? ಎಂದು ಜಪ್ಪಿನಮೊಗರಿನ ಹಿರಿಯ ನಾಗರಿಕರೊಬ್ಬರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಹನುಮಂತರಾಯ, ಸಾರ್ವಜನಿಕ ರಸ್ತೆಯಲ್ಲಿ ಆಟವಾಡುವುದು ತಪ್ಪು. ರಸ್ತೆ ಇರುವುದು ಸಂಚಾರಕ್ಕಾಗಿಯೇ ಹೊರತು ಅದು ಆಟ ಆಡುವ ಮೈದಾನ ಅಲ್ಲ. ಆದ್ದರಿಂದ ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ಸಮಸ್ಯೆ ಪರಿಹರಿಸಿಕೊಳ್ಳಿ. ಈ ಬಗ್ಗೆ ತಾನು ಕೂಡ ಕಂಕನಾಡಿ ನಗರ ಪೊಲೀಸ್‌ ಠಾಣೆಗೆ ದೂರು ಸ್ವೀಕರಿಸುವಂತೆ ಸೂಚನೆ ಕೊಡುತ್ತೇನೆ ಎಂದು ತಿಳಿಸಿದರು.

ಮಕ್ಕಳಿಂದ ರಸ್ತೆಯಲ್ಲಿ ಆಟ

ಅಗ್ನಿಶಮನಕ್ಕೆ ಬಾರದ ಇಲಾಖೆ
ಮೂಡುಬಿದಿರೆಯ ಹುಡ್ಕೋ ಕಾಲನಿಯಲ್ಲಿ ಇತ್ತೀಚೆಗೆ ಬೆಂಕಿ ಬಿದ್ದಾಗ ಅಗ್ನಿಶಾಮಕ ಕಚೇರಿಗೆ ಕರೆ ಮಾಡಿದ್ದು, ಆಗ ಅಲ್ಲಿದ್ದವರು ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಬಳಿಕ ಸ್ಥಳೀಯ ಜನರೇ ಸೇರಿ ಬೆಂಕಿ ನಂದಿಸಿದ್ದಾರೆ. ಆಸ್ತಿಪಾಸ್ತಿ ರಕ್ಷಣೆಯ ಜವಾಬ್ದಾರಿ ಹೊಂದಿರುವ ಅಗ್ನಿಶಾಮಕ ಇಲಾಖೆಯವರೇ ಹೀಗೆ ಹೇಳಿದರೆ, ನಾಗರಿಕರು ಏನು ಮಾಡಬೇಕು ಎಂದು ನಾಗರಿಕರೊಬ್ಬರು ಪ್ರಶ್ನಿಸಿದರು. ಈ ವಿಷಯವನ್ನು ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಡಿಸಿಪಿ ಹನುಮಂತರಾಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next