ಯಲ್ಲಾಪುರ: ಪಟ್ಟಣದ ತಾಪಂ ಸಭಾಭವನದಲ್ಲಿ ಉಪಾಧ್ಯಕ್ಷೆ ಸುಜಾತ ಸಿದ್ದಿ ಅಧ್ಯಕ್ಷತೆಯಲ್ಲಿ ನಡೆಯಿತು.
ರೇಶನ್ ಕಾರ್ಡ್ ಸರಿ ಎನ್ನುವ ಕಾರಣಕ್ಕಾಗಿ ಹಲವರು ಸಾಲಮನ್ನಾದಂತಹ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಅದು ಹಾಗಾಗ ಕೂಡದು. ಸಾಲಮನ್ನಾ ಎಲ್ಲಾ ರೈತರಿಗೂ ಸಿಗಬೇಕು ಎಂದು ಸದಸ್ಯ ನಾಗರಾಜ ಕವಡಿಕೇರಿ ಆಗ್ರಹಿಸಿದರು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ತಾಲೂಕಿನಲ್ಲಿ ಒಟ್ಟು 7497 ಅರ್ಜಿಗಳು ಎಂಟ್ರಿಯಾಗಿವೆ. ಇದನ್ನು ಎಲ್ಲಾ ರೈತರಿಗೂ ವಿಸ್ತರಿಸಿದ್ದು, ಇನ್ನೂ ಒಂದೂವರೆ ಸಾವಿರದಷ್ಟು ರೈತರು ಎಂಟ್ರಿ ಮಾಡಿಸಿಕೊಳ್ಳಬೇಕಾಗಿದೆ. ನೋಂದಣಿ ದಿನಾಂಕವನ್ನು ಜು.10 ರವರೆಗೆ ವಿಸ್ತರಿಸಿದ್ದು, ಎಲ್ಲಾ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಹಾಯಕ ಕೃಷಿ ನಿರ್ದೇಶಕ ವಿ.ಜಿ. ಹೆಗಡೆ ಮನವಿ ಮಾಡಿದರು.
ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಕೊಡಲಾಗುವ ತಾಡಪಾಲ್ ವಿತರಣೆಯಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ತಾ.ಪಂ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವ ಬಗ್ಗೆ ಸದಸ್ಯ ನಟರಾಜ ಗೌಡರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ತಾ.ಪಂ ಸದಸ್ಯರು ನೀಡಿದ ಯಾದಿ ಬಿಟ್ಟು, ಶಾಸಕರು ನೀಡಿದ ಯಾದಿ ಪುರಸ್ಕರಿಸುವುದಾದರೆ ಸದಸ್ಯರಿಗೆ ಏನು ಬೆಲೆ ಎಂದು ಕೆಲವು ಸದಸ್ಯರು ಪ್ರಶ್ನಿಸಿದರು.
ಬಳಗಾರಕ್ಕೆ ಸರಿಯಾದ ಬಸ್ ಬಿಡದೇ ಇರುವ ಬಗ್ಗೆ ಗ್ರಾಮಸ್ಥರ ಪರವಾಗಿ ಕೃಷ್ಣ ಭಟ್ಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಳಗಾರಕ್ಕೆ ಮಿನಿಬಸ್ ಬಿಡಲಾಗುತ್ತಿದೆ. ಪದೇ ಪದೇ ಅದು ಕೆಟ್ಟು ನಿಲ್ಲುತ್ತಿದೆ. ಹಾಗಾಗಿ ಮೊದಲಿನಂತೆ ಸರಿಯಾದ ಬಸ್ ಓಡಾಟ ನಡೆಸುವಂತಾಗದಿದ್ದರೆ ಜು.8 ರಂದು ಡಿಪೊ ಬಳಿ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು. ಅಧ್ಯಕ್ಷೆ ಆದಿಯಾಗಿ ಬಹುತೇಕ ಸದಸ್ಯರು ಕೆಲ ಇಲಾಖೆಗಳ ಅದಿಕಾರಿಗಳ ಗೈರು ಸಭೆಯಲ್ಲಿ ಎದ್ದು ಕಂಡಿತು.