ಬೆಂಗಳೂರು: ರೈತರು, ವಿವಿಧ ಸಂಘಟನೆಗಳ ವಿರೋಧದ ನಡುವೆ ಕೃಷಿ ಸಂಬಂಧಿ ತಿದ್ದುಪಡಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ತೀರ್ಮಾನಿಸಿದೆ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಇದನ್ನೂ ಓದಿ:ಹಿಂಗೇ ಹೋದ್ರೆ ಪಾಂಡವಪುರ ಸಿಗುತ್ತಾ ಎಂದ ವಾಹಿನಿ, ಇಲ್ಲ ಕೈನೋವು ಬರುತ್ತೆ ಎಂದ ಅಭಿಮಾನಿ
ಭುಸುಧಾರಣೆ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಬಿಎಸ್ ವೈ ಸರ್ಕಾರ ತೀರ್ಮಾನಿಸಿದೆ.
ಇವತ್ತಿನ ಸಂಪುಟ ಸಭೆಗೆ ಹಲವು ಸಚಿವರು ಗೈರು ಹಾಜರಾಗಿದ್ದರು. ಜೆ.ಸಿ ಮಾಧುಸ್ವಾಮಿ, ಡಿಸಿಎಂ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಕೆ.ಗೋಪಾಲಯ್ಯ, ಪ್ರಭು ಚೌಹಾಣ್ ಕೋವಿಡ್ ಸೋಂಕಿನ ಕಾರಣದಿಂದ ಗೈರು ಹಾಜರಾಗಿದ್ದರು.
ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಬಸವರಾಜ ಬೊಮ್ಮಾಯಿ, ಆನಂದ್ ಸಿಂಗ್, ಆರ್ ಅಶೋಕ್, ಶ್ರೀಮಂತ ಪಾಟೀಲ್, ಸಿ ಸಿ ಪಾಟೀಲ್ ಕೋವಿಡ್-19 ಇಲ್ಲದಿದ್ದರೂ ಗೈರು ಆಗಿದ್ದರ.