Advertisement

ವೈನ್‌ಶಾಪ್‌ಗೆ ಬೀಗ ಜಡಿಯಲು ನಿರ್ಣಯ

03:30 PM Nov 01, 2017 | Team Udayavani |

ಸುಳ್ಯ: ನಗರದ ಓಡಬಾಯಿ ಸಮೀಪ ಜೂಜಾಟ ಕ್ಲಬ್‌ ಹಾಗೂ 2 ಕ್ಲಬ್‌ ವೈನ್‌ಶಾಪ್‌ ಸಹಿತ ನಗರದ ಖಾಸಗಿ ಬಸ್‌ ನಿಲ್ದಾಣದ ನ.ಪಂ. ಕಟ್ಟಡಗಳ ಏಲಂ ಕುರಿತಾಗಿ ಸುಳ್ಯ ನ.ಪಂ. ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ ನಡೆಯಿತು. ನಿಯಮ ಉಲ್ಲಂಸಿದ ಈ ಮೂರು ಕಟ್ಟಡಗಳಿಗೆ ಬೀಗ ಜಡಿಯಲು ನಿರ್ಣಯ ಕೈಗೊಳ್ಳಲಾಯಿತು.

Advertisement

ಮಂಗಳವಾರ ನ.ಪಂ.ಅಧ್ಯಕ್ಷೆ ಶೀಲಾವತಿ ಮಾಧವ ಅವರ ಅಧ್ಯಕ್ಷತೆಯಲ್ಲಿ ಸಭೆ ಜರಗಿತು. ನ.ಪಂ. ಮಾಜಿ ಅಧ್ಯಕ್ಷ ಪ್ರಕಾಶ್‌ ಹೆಗ್ಡೆ ಅವರು ಖಾಸಗಿ ಕಟ್ಟಡದಲ್ಲಿ ಜೂಜಾಟ ಕ್ಲಬ್‌ ಬಗ್ಗೆ ಪ್ರಸ್ತಾಪಿಸಿ, ನ.ಪಂ. ಮುಖ್ಯಾಧಿಕಾರಿಗಳು ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಕಾನೂನು ತಿಳಿದಿರುವ ನೀವು ಕ್ರಮಕೈಗೊಂಡಿಲ್ಲ, ನೀವೂ ಶಾಮೀಲಾ
ಗಿದ್ದೀರಾ ಎಂದು ಪ್ರಶ್ನಿಸಿದರು. ಅಧಿಕಾರಿ, ನೋಟಿಸ್‌ ಜಾರಿ ಮಾಡಿದ್ದೇನೆ. ಕ್ರಮ ಕೈಗೊಳ್ಳಲು ನಿರ್ಣಯವಾಗಬೇಕಾಗಿದೆ ಎಂದರು. ಇದಕ್ಕೆ ಪ್ರಕಾಶ್‌ ಹೆಗ್ಡೆ, ನಿಮ್ಮ ಅಧಿಕಾರದ ವ್ಯಾಪ್ತಿ ನಿಮಗೆ ಅರಿವಿಲ್ಲವೇ? ನಿರ್ಣಯ ಪುಸ್ತಕವನ್ನು ಓದಿ ಎಂದರು.

ಕೊಠಡಿ ಏಲಂ
ಖಾಸಗಿ ಬಸ್‌ ನಿಲ್ದಾಣದ ನ.ಪಂ. ಕಟ್ಟಡದ 6 ಕೋಣೆಗಳಿಗೆ ಏಲಂ ಕುರಿತ ಪತ್ರಿಕಾ ಪ್ರಕಟನೆ ನಡೆದಿದ್ದರೂ ಪೂರ್ಣಗೊಳ್ಳದ ಬಗ್ಗೆ ಚರ್ಚೆಯಾಯಿತು. ಈ ಬಗ್ಗೆ ಆಡಳಿತ ಪಕ್ಷದ ಪ್ರಕಾಶ್‌ ಹೆಗ್ಡೆ ಮತ್ತು ರಮಾನಂದ ರೈ ಪ್ರಶ್ನಿಸಿದರು. ಲಿಖೀತ ಮನವಿ ಇದೆ ಹೊರತು ಕೋರ್ಟ್‌ ತಡೆಯಾಜ್ಞೆ ಇಲ್ಲ ಎಂದು ಮುಖ್ಯಾಧಿಕಾರಿಗಳು ಉತ್ತರಿಸಿದರು.

ವಿಪಕ್ಷ ಕಾಂಗ್ರೆಸ್‌ ಸದಸ್ಯರ ಪೈಕಿ ಕೆಲವು ಮಂದಿ ಒಂದು ಅಂಗಡಿ ಕೊಠಡಿಯಲ್ಲಿ ಪತ್ರಿಕೆ ಕಚೇರಿಯೊಂದು ಅನೇಕ ವರ್ಷಗಳಿಂದಿದೆ. ಹೀಗಾಗಿ ಅವರಿಗೇ ನೀಡುವುದು ಒಳಿತು ಎಂದು ಪ್ರತಿಪಾದಿಸಿದರು. ಆ ರೀತಿ ಮಾಡಲು ಕಾನೂನು ಪ್ರಕಾರ ಸಾಧ್ಯವಿಲ್ಲ ಎಂದು ಅಧ್ಯಕ್ಷೆ ಶೀಲಾವತಿ ಹೇಳಿದರು.ಪ್ರಕಾಶ್‌ ಹೆಗ್ಡೆ ಪೂರಕವಾಗಿ ಮಾತನಾಡಿ, ಈ ರೀತಿಯಾದರೆ ತಪ್ಪು ಸಂದೇಶ ಹೋಗುತ್ತದೆ ಎಂದರು. ಉಳಿದ ಕೊಠಡಿಗಳಿಗೆ ನಿಗದಿಪಡಿಸಿದಷ್ಟೇ ಬಾಡಿಗೆ ವಿಧಿಸಿ ಅದೇ ಸಂಸ್ಥೆಗೆ ನೀಡುವಂತೆ ಸದಸ್ಯೆ ಪ್ರೇಮಾ ಟೀಚರ್‌ ಸಲಹೆಯಿತ್ತರು.

ಮಾಜಿ ಅಧ್ಯಕ್ಷ ಎನ್‌.ಎ. ರಾಮಚಂದ್ರ ಅವರು ಅಭಿಪ್ರಾಯ ನೀಡುವಂತೆ ವಿಪಕ್ಷ ಸದಸ್ಯರು ಆಗ್ರಹಿಸಿದಾಗ, ಸರಕಾರದ ನೀತಿಯ ವಿರುದ್ಧ ನಡೆಯುವುದು ಸರಿಯಲ್ಲ, ಏಲಂ ಮಾಡಲೇಬೇಕು. 

Advertisement

ಏಲಂನಲ್ಲಿ ಪಾಲ್ಗೊಳ್ಳುವ ವೇಳೆಗೆ ಬೇಕಿದ್ದರೆ ಅವರೇ ಮನವರಿಕೆ ಪ್ರಯತ್ನ ಮಾಡಲಿ ಎಂದರು. ಅಂತಿಮವಾಗಿ
ಒಂದು ಕೊಠಡಿಯನ್ನು ಮಾಧ್ಯಮಕ್ಕೆ ಮತ್ತೂಂದು ಬಸ್‌ ನವರಿಗೆ ಮೀಸಲಿಟ್ಟು ಏಲಂ ನಡೆಸುವಂತೆ ನಿರ್ಣಯ
ನಡೆಯಿತು.

ಅಯ್ಯಪ್ಪ ದೀಪೋತ್ಸವ, ಸುಳ್ಯ ಹಬ್ಬ ಹತ್ತಿರುವಾಗುತ್ತಿದ್ದು ಅಂಬೆಟಡ್ಕ ಬಳಿ ರಸ್ತೆ ಚರಂಡಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಗಿರೀಶ್‌ ಕಲ್ಲಗದ್ದೆ ಎಚ್ಚರಿಸಿದರು.

ನ.ಪಂ.ನಿಂದ ಕೊಠಡಿ ಬಾಡಿಗೆ ಪಡೆದು ಒಳಬಾಡಿಗೆ ಪಡೆಯುವ ಬಗ್ಗೆ ಸದಸ್ಯ ಶಿವಕುಮಾರ್‌ ಪ್ರಸ್ತಾಪಿಸಿದರು. ಈ
ಬಗ್ಗೆ ಸರ್ವೆ ಮಾಡಿ ನಿಗದಿಗೊಳಿಸುವಂತೆ ಮತ್ತು ಮುಂದಿನ ಸಭೆಯಲ್ಲಿ ತಿಳಿಸುವಂತೆ ಒತ್ತಾಯಿಸಿದರು.ಆಶ್ರಯ ಮನೆ
ಬಗ್ಗೆ ಫಲಾನುಭವಿಗಳನ್ನು ಸೂಚಿಸಿದರೂ ಬದಲಿಸಿದ್ದರ ಬಗ್ಗೆ ಸದಸ್ಯೆ ಸುನೀತಾ ಮೊಂತೆರೋ ದೂರಿದರು. ಒಳಾಂಗಣ
ಕ್ರೀಡಾಂಗಣ ಕಾಮಗಾರಿ ಬಗ್ಗೆ ಚರ್ಚೆ ನಡೆದು ಡಿಸೆಂಬರ್‌ ಒಳಗಾಗಿ ಉದ್ಘಾಟನೆ ನಡೆಸುವ ಬಗ್ಗೆ ನಿರ್ಧರಿಸಲಾಯಿತು.
ವಾಹನ ಶುಲ್ಕ ವಸೂಲಿ, ಒಳಚರಂಡಿ ಕಾಮಗಾರಿ ಅವ್ಯವಸ್ಥೆ ಬಗ್ಗೆ ಚರ್ಚೆ ನಡೆಯಿತು.

ಏಕೆ ಕ್ರಮ ಕೈಗೊಂಡಿಲ್ಲ?
ದುಗ್ಗಲಡ್ಕ ವಾರ್ಡ್‌ ಸದಸ್ಯ ಶಿವಕುಮಾರ್‌, ದುಗ್ಗಲಡ್ಕದಲ್ಲಿ ವೈನ್‌ ಶಾಪ್‌ ಆಗಿದೆ. ಆ ಕಟ್ಟಡಕ್ಕೆ ಅನುಮತಿ ಇಲ್ಲ . ಅದು ಅಕ್ರಮ ಕಟ್ಟಡ. ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ಓಡಬಾಯಿ ಸಮೀಪ ಪಂ.ಅನುಮತಿ ಯಿಲ್ಲದೆ ವ್ಯಾಪಾರ ನಡೆಯುತ್ತಿದೆ. 24 ಗಂಟೆಗೊಳಗಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪೊಲೀಸ್‌ ರಕ್ಷಣೆಯಲ್ಲಿ ವೈನ್‌ಶಾಪ್‌ಗೆ ಬೀಗ ಜಡಿಯುವಂತೆ ಸದಸ್ಯ ಉಮ್ಮರ್‌ ಸಲಹೆ ನೀಡಿದರು. ಚರ್ಚೆಯಲ್ಲಿ ನ.ಪಂ. ಸದಸ್ಯ ಗೋಕುಲ್‌ ದಾಸ್‌ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next