Advertisement

ಚೋರ್‌ ಯಾರೆಂದು ನೀವೇ ನಿರ್ಧರಿಸಿ ಎಂದ ಮಲ್ಯ

01:23 AM Jul 15, 2019 | Team Udayavani |

ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ವಂಚಿಸಿ ಯು.ಕೆ.ಯಿಂದ ಗಡೀಪಾರು ಭೀತಿಗೆ ಒಳಗಾಗಿರುವ ಉದ್ಯಮಿ ವಿಜಯ ಮಲ್ಯ ಟ್ರೋಲ್‌ಗೆ ಒಳಗಾಗಿದ್ದಾರೆ.

Advertisement

ಕ್ರಿಕೆಟಿಗ ಕ್ರಿಸ್‌ ಗೇಲ್‌ ಮಲ್ಯ ಜತೆಗಿನ ಫೋಟೋ ಟ್ವೀಟ್‌ ಮಾಡಿ “ಬಿಗ್‌ ಬಾಸ್‌ ಜತೆ ಇರು ವುದು ಸಂತಸ ತಂದಿದೆ’ ಎಂದು ಟ್ವೀಟ್‌ ಮಾಡಿದ್ದರು.ಅದನ್ನು ನೋಡಿದ ಟ್ವೀಟಿಗರು ವಿವಿಧ ರೀತಿಯಲ್ಲಿ ಕಾಲೆಳೆದಿದ್ದಾರೆ. ಹಲವು ರೀತಿಯ ಮೀಮ್‌ಗಳು, ತಮಾಷೆಯ ಟ್ವೀಟ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಹರಿದಾಡಿದವು. ಬ್ಯಾಂಕ್‌ಗಳಿಗೆ ವಂಚಿಸಿದ ಚೋರನೀತ ಎಂದು ಹಲವು ರೀತಿಯಲ್ಲಿ ಟೀಕೆಯ ಬರಹಗಳು ಕಂಡು ಬಂದವು.

ಅವುಗಳಿಗೆ ಟ್ವೀಟ್‌ ಮೂಲಕ ಉತ್ತರಿಸಿದ ಮಲ್ಯ “ನಿಜವಾದ ಚೋರ್‌ ಯಾರು ಎನ್ನುವುದನ್ನು ನೀವೇ ಖಚಿತಪಡಿಸಿಕೊಳ್ಳಿ. ಸಾಲವನ್ನು ಶೇ. 100ರಷ್ಟು ತೀರಿಸುತ್ತೇನೆ ಎಂದು ಹೇಳಿದರೂ, ಯಾಕೆ ಅವುಗಳು ಅದನ್ನು ಸ್ವೀಕರಿಸುತ್ತಿಲ್ಲ? ಪ್ರಿಯ ಮಿತ್ರ ಮತ್ತು ಯುನಿವರ್ಸಲ್‌ ಬಾಸ್‌ ಗೇಲ್‌ ಜತೆಗೆ ಇರುವುದು ನನಗೂ ಸಂತಸ ತಂದಿದೆ’ ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next