Advertisement

ಸಗಟು ಮಾರುಕಟ್ಟೆ ಆಧಾರಿತ ಹಣದುಬ್ಬರ ಪ್ರಮಾಣ ಇಳಿಕೆ

08:26 PM Jan 14, 2022 | Team Udayavani |

ನವದೆಹಲಿ: ಸಗಟು ಮಾರುಕಟ್ಟೆ ಆಧಾರಿತ ಹಣದುಬ್ಬರ ಪ್ರಮಾಣ 2021ರ ಡಿಸೆಂಬರ್‌ನಲ್ಲಿ ಶೇ.13.56ಕ್ಕೆ ಇಳಿಕೆಯಾಗಿದೆ.

Advertisement

ಈ ಬಗ್ಗೆ ಆರ್‌ಬಿಐ ದತ್ತಾಂಶಗಳಲ್ಲಿ ಉಲ್ಲೇಖವಾಗಿದೆ.ಆಹಾರ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ, ತೈಲ, ವಿದ್ಯುತ್‌ ದರ ಇಳಿಕೆಯಿಂದಾಗಿ ಹಣದುಬ್ಬರ ಪ್ರಮಾಣ ಇಳಿಕೆಯಾಗಿದೆ ಎನ್ನುವುದು ಗಮನಾರ್ಹ.

ಇದೇ ಕಾರಣವನ್ನು ಮುಂದಿಟ್ಟುಕೊಂಡು ಮುಂದಿನ ತಿಂಗಳು ನಡೆಯಲಿರುವ ಆರ್‌ಬಿಐನ ತ್ತೈಮಾಸಿಕ ಸಾಲನೀತಿ ಪರಿಶೀಲನಾ ಸಭೆಯಲ್ಲಿ ಬಡ್ಡಿದರದಲ್ಲಿ ಯಥಾ ಸ್ಥಿತಿಯನ್ನೇ ಕಾಯ್ದುಕೊಳ್ಳುವ ಸಾಧ್ಯತೆಗಳೂ ಇದೆ. 2021ರ ಏಪ್ರಿಲ್‌ನಿ ಬಳಿಕ ಸಗಟು ಮಾರುಕಟ್ಟೆ ಆಧಾರಿತ ಹಣದುಬ್ಬರ ಎರಡಂಕಿಗೆ ಏರಿಕೆಯಾಗಿ, ಸತತ 9 ತಿಂಗಳ ಕಾಲ ಅದೇ ಏರಿಕೆಯನ್ನು ಕಾಯ್ದುಕೊಂಡು ಬಂದಿತ್ತು.

ಇದನ್ನೂ ಓದಿ:ರಾಜ್ಯದಲ್ಲಿಂದು ದಾಖಲೆಯ ಕೋವಿಡ್ ಪರೀಕ್ಷೆ : 28,723 ಕೇಸ್, 14 ಸಾವು

ರಫ್ತು ಪ್ರಮಾಣ ಏರಿಕೆ:
ಮತ್ತೊಂದು ಧನಾತ್ಮಕ ಬೆಳವಣಿಗೆಯೊಂದರಲ್ಲಿ ರಫ್ತು ಪ್ರಮಾಣ ಶೇ.38.91ಕ್ಕೆ ಏರಿಕೆಯಾಗಿದೆ. ನಗದು ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ ಡಿಸೆಂಬರ್‌ ಅಂತ್ಯಕ್ಕೆ 37.81 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ.

Advertisement

ಎಂಜಿನಿಯರಿಂಗ್‌, ಜವಳಿ ಮತ್ತು ರಾಸಾಯನಿಕ ಕ್ಷೇತ್ರಗಳಲ್ಲಿನ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಇತರ ದೇಶಗಳಿಗೆ ರವಾನೆಯಾಗಿವೆ. ಅದೇ ರೀತಿ, ಆಮದು ಪ್ರಮಾಣವೂ ಶೇ.38.55ರಷ್ಟು ಹೆಚ್ಚಳವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next