Advertisement
ಡಿಸೆಂಬರ್ 1, 1988ರಲ್ಲಿ ಪ್ರಥಮ ಬಾರಿಗೆ ವಿಶ್ವ ಆರೋಗ್ಯ ಸಂಸ್ಥೆಯು ಯು.ಎನ್. ಏಡ್ಸ್ ಸಂಯುಕ್ತ ನೇತೃತ್ವದಲ್ಲಿ ಈ ವಿಶ್ವ ಏಡ್ಸ್ ದಿನಾಚರಣೆಯನ್ನು ಆಚರಿಸಲು ಮುಂದಾಯಿತು. ಎಚ್‌ಐವಿ/ಏಡ್ಸ್ ಕಾರ್ಯ ಚಟುವಟಿಕೆಗಳಿಗೆ ಸಂಪನ್ಮೂಲ ಕೂಡಿಸುವುದೊಂದೇ ಅಲ್ಲದೆ ವ್ಯಕ್ತಿಗತ ಮತ್ತು ಸಮುದಾಯದಲ್ಲಿ ಈ ಸೊಂಕಿನಿಂದ ಉಂಟಾಗುತ್ತಿರುವ ಸಮಸ್ಯೆಗಳು ಮತ್ತು ಇದರ ಬಗ್ಗೆ ಜಾಗೃತಿ ಹೆಚ್ಚಿಸುವುದು ಹಾಗೂ ಎಚ್‌ಐವಿ ಸೋಂಕಿತರಾಗಿರುವವರಿಗೆ ಬೆಂಬಲನೀಡುವುದು ಮತ್ತು ಅವರು ಅನುಭವಿಸುತ್ತಿರುವ ಕಳಂಕ ತಾರತಮ್ಯವನ್ನು ಕಡಿಮೆ ಮಾಡುವುದು ವಿಶ್ವದಲ್ಲಿನ ಎಚ್‌ಐವಿ ಏಡ್ಸ್ ಬೆಳವಣಿಗೆಯತ್ತ ದೃಷ್ಟಿ ಬೀರಿ, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳತ್ತ ಪ್ರತಿಯೊಬ್ಬ ರ ಗಮನ ಸೆಳೆಯುವುದೇ ಇದರ ಮುಖ್ಯ ಧ್ಯೇಯವಾಗಿದೆ.
Related Articles
Advertisement
ಎಚ್‌ಐವಿ ಸೋಂಕನ್ನು ಪತ್ತೆ ಮಾಡುವುದಕ್ಕಾಗಿ ರಕ್ತ ಪರೀಕ್ಷೆ ಏಕೈಕ ವಿಧಾನವಾಗಿದೆ. ರಕ್ತ ಪರೀಕ್ಷೆಯನ್ನು ಮೆಡಿಕಲ್ ಕಾಲೇಜು, ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಐಸಿಟಿಸಿ ಕೇಂದ್ರಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ.
ಏಡ್ಸ್ ದಿನಾಚರಣೆಗೆ ನಾವೇನು ಮಾಡಬೇಕು ?1. ಬೇರೆ ರೋಗದಂತೆ ಏಡ್ಸ್ ಕೂಡ ಒಂದು ರೋಗ. ನಮ್ಮಂತೆ ಅವರು ಮನುಷ್ಯರು. ನಮ್ಮೊಂದಿಗೆ ಅವರಿಗೆ ಬದುಕುವ ಅರ್ಹತೆ ಇದೆ ಎಂಬುವುದನ್ನು ಮನಗಾಣಬೇಕು.
2. ಎಚ್‌ಐವಿ ಸೋಂಕಿತರನ್ನು ಅಸ್ಪೃಶ್ಯರಂತೆ ಕಾಣದೆ ಅವರಿಗೆ ಏಡ್ಸ್ ಬಗ್ಗೆ ವೈಜ್ಞಾನಿಕ ಮತ್ತು ವೈದ್ಯಕೀಯ ಮಾಹಿತಿ ನೀಡಬೇಕು.
3. ಏಡ್ಸ್ ಬಂದರೆ ಸಾವೇ ಗತಿ ಎಂಬ ತಿಳಿ ವಳಿಕೆಯನ್ನು ತಲೆಯಿಂದ ತೆಗೆಯಬೇಕು. ಮೊದಲ ಹಂತದಲ್ಲಿಯೇ ಎಚ್‌ಐವಿ ನಿಯಂತ್ರಿಸಬಹುದು ಎಂಬುದನ್ನು ತಿಳಿಸಬೇಕು.
4. ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವಲ್ಲಿ ಇನ್ನೂ ವೈದ್ಯಲೋಕ ಯಶಸ್ವಿ ಆಗಿಲ್ಲ. ಆದರೆ ಇದರ ಬಗ್ಗೆ ಇನ್ನೂ ಅಧ್ಯಯನ ಮುಂದುವರಿದಿದೆ.
5. ಏಡ್ಸ್ ಪೀಡಿತರಿಗೆ ಮಾನಸಿಕ ಸ್ಥೈರ್ಯ ತುಂಬಿ ಕೈಲಾದ ಆರ್ಥಿಕ ಸಹಾಯ ಮಾಡಬೇಕು.
6. ಏಡ್ಸ್ ಸಂಬಂಧಿತ ಸರಕಾರದ ಎಷ್ಟೋ ಯೋಜನೆಗಳು ಉಚಿತ ಸೇವೆಗಳು ತಲುಪಿಸುವಲ್ಲಿ ಕೈ ಜೋಡಿಸಬೇಕು.
7. ಗ್ರಾಮೀಣ ಭಾಗಗಳನ್ನು ತಲುಪಿ ಜನರಿಗೆ ಜಾಗೃತಿ ಮೂಡಿಸಬೇಕು. ಡಿ. 1ರಂದು ಪ್ರತಿ ವರ್ಷ ವಿಶ್ವದಾದ್ಯಂತ ಎಚ್‌ಐವಿ ಪೀಡಿತರಿಗಾಗಿ, ಸೋಂಕಿನಿಂದ ಪ್ರಾಣ ತ್ಯಜಿಸಿದವರಿಗಾಗಿ ಆಚರಿಸಲ್ಪಡುವ ದಿನ. ಏಡ್ಸ್ ದಿನಾಚರಣೆ ಇದೊಂದು ಮಾನಸಿಕ ಸ್ಥೈರ್ಯ ತುಂಬುವ, ಜಾಗೃತಿ ಮೂಡಿಸುವ ಮತ್ತು ಜನರ ಮೌಡ್ಯತೆಯನ್ನು ಮಟ್ಟ ಹಾಕುವ ದಿನ. ಒಗ್ಗಟಿನಿಂದ ಬಾಳ್ಳೋಣ. ಏಡ್ಸ್ ರೋಗವನ್ನು ತಡೆಯೋಣ. -ಡಯಾನಾ ಕ್ರಾಸ್ತ
ಐಇಖಇ ವಿಭಾಗ, ಪ್ರಯೋಗ ಶಾಲಾ ತಂತ್ರಜ್ಞರು, ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರ