ಬೀದರ: ಜಿಲ್ಲೆಯನ್ನು ಆನೆಕಾಲು ರೋಗ ಮುಕ್ತವಾಗಿಸಲು 14ನೇ ಸುತ್ತಿನ ಸಾಮೂಹಿಕ ಔಷಧ ಸೇವನೆ ಕಾರ್ಯಕ್ರಮದಡಿ ಗುರುವಾರ ನಗರದ ಸರಸ್ವತಿ ಪ್ರೌಢಶಾಲೆಯಲ್ಲಿ ಶಿಕ್ಷಕರು ಹಾಗೂ ಮಕ್ಕಳ ಮಾತ್ರೆ ಸೇವನೆ ಕಾರ್ಯಕ್ರಮ ನಡೆಯಿತು. ಡಿಇಸಿ ಮಾತ್ರೆ ಸೇವನೆ ಹಾಗೂ ಜಂತುಹುಳು ನಿವಾರಣೆಗಾಗಿ ಅಲಬೆಂಡಾಜೋಲ್ ಮಾತ್ರೆ ಸೇವಿಸುವ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಎಂ.ಎ.ಜಬ್ಟಾರ ಔಷಧ ಸೇವಿಸುವುದರೊಂದಿಗೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ| ಸಿ.ಆನಂದರಾವ್ ಮಾತನಾಡಿ, ಡಿಇಸಿ ಮತ್ತು ಅಲಬೆಂಡಾಜೋಲ್ ಮಾತ್ರೆಗಳು ಅತ್ಯಂತ ಸುರಕ್ಷಿತವಾಗಿವೆ. ಯಾವುದೇ ರೀತಿಯ ಭಯ ಪಡದೇ ಈ ಔಷಧ ಸೇವನೆ ಮಾಡಬೇಕು ಎಂದು ತಿಳಿಸಿದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ| ಅನೀಲ ಚಿಂತಾಮಣಿ ಮಾತನಾಡಿ, ಔಷಧ ಪೂರೈಕೆ ಮತ್ತು ಔಷಧ ವಿತರಕರ
ನಿಯೋಜನೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ ಎಂದು ತಿಳಿಸಿದರು. ಶಾಲೆಯ ಮುಖ್ಯ ಗುರು ಪ್ರತಿಭಾ ಚಾಮಾ ಅಧ್ಯಕ್ಷತೆ ವಹಿಸಿದ್ದರು. ವೈದ್ಯಾಧಿ ಕಾರಿಗಳಾದ ಸಿ.ಎಸ್. ರಗಟೆ, ರವಿಂದ್ರ ಸಿರ್ಶೇ, ಶಿವಶಂಕರ ಬಿ., ರಾಜಶೇಖರ ಪಾಟೀಲ, ಇಂದುಮತಿ ಪಾಟೀಲ, ಪ್ರವೀಣಕುಮಾರ ಹೂಗಾರ ಸೇರಿದಂತೆ ಆರೋಗ್ಯ ಸಿಬ್ಬಂದಿ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು, ವದ್ಯಾರ್ಥಿಗಳು ಹಾಜರಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುಭಾಷ ಮುದ್ದಾಳೆ ನಿರೂಪಿಸಿದರು.