Advertisement
ಸಾಲಮನ್ನಾ ಹಣ ಬಿಡುಗಡೆಗೊಂಡರೂ ಉಳಿತಾಯ ಖಾತೆಗೆ ಬಾರದೆ ಉಭಯ ಜಿಲ್ಲೆಯ 22,687 ಫಲಾನುಭವಿಗಳಿಗೆ ತೊಂದರೆಯಾಗಿತ್ತು. ಮೊದಲ ಹಂತದಲ್ಲಿ ಬ್ಯಾಂಕ್ ಖಾತೆ ಸರಿಪಡಿಸುವ ನಿಟ್ಟಿನಲ್ಲಿ ಸುಧಾರಿತ ಸಾಫ್ಟ್ವೇರ್ ತೆರೆದು ಸಮರ್ಪಕ ಮಾಹಿತಿ ದಾಖಲಾತಿಗೆ ಸರಕಾರ ಅವಕಾಶ ನೀಡಿತ್ತು.
ಫಲಾನುಭವಿಗಳಿಗೆ ಸಂಬಂಧಿಸಿ 18 ಪಟ್ಟಿ ರಚಿಸಲಾಗಿತ್ತು. ಆ ಪೈಕಿ 14 ಪಟ್ಟಿಗಳ ಫಲಾನುಭವಿಗಳದ್ದು ಮಾತ್ರ ಅಪ್‌ಡೇಟ್ ಅವಕಾಶ ದೊರೆಯಿತು. ಉಳಿದ 4 ಪಟ್ಟಿಗಳ ಫಲಾನುಭವಿಗಳ ಉಳಿತಾಯ ಖಾತೆ ಅಪ್‌ಡೇಟ್ ಮಾಡಲು ಅವಕಾಶ ಸಿಕ್ಕಿಲ್ಲ. 14 ಪಟ್ಟಿಯಲ್ಲಿ ಕೇವಲ ಶೇ. 30ರಷ್ಟು ಮಾತ್ರ ಫಲಾನುಭವಿಗಳಿದ್ದು, ಉಳಿದ ಶೇ.70ರಷ್ಟು ಫಲಾನುಭವಿಗಳ ಕೊನೆಯ ನಾಲ್ಕು ಪಟ್ಟಿಯೊಳಗಿದ್ದಾರೆ. ಹೀಗಾಗಿ ಅಪ್‌ಡೇಟ್‌ನಲ್ಲಿ ಅವಕಾಶ ವಂಚಿತರ ಪಟ್ಟಿಯೇ ಗರಿಷ್ಠ ಮಟ್ಟದಲ್ಲಿದ್ದು, ಆ್ಯಪ್ಶನ್ ತೆರೆದರೂ ಪ್ರಯೋಜನ ಇಲ್ಲವಾಗಿದೆ. ಮೂರು ದಿನವಷ್ಟೇ ಕಾಲಾವಕಾಶ
ಆಯಾ ಸಹಕಾರ ಬ್ಯಾಂಕ್ ವ್ಯಾಪ್ತಿಯ ಡಿಸಿಸಿ ಬ್ಯಾಂಕ್ ಶಾಖೆಗಳಲ್ಲಿ ಅ. 23ರಿಂದ ಅ. 25ರ ತನಕ ಅಪ್‌ಡೇಟ್‌ಗೆ ಅವಕಾಶ ನೀಡಲಾಗಿತ್ತು. ಬ್ಯಾಂಕಿನಿಂದ ನಿಗದಿಪಡಿಸಿದ ನಿಯೋಜಿತ ಅಧಿಕಾರಿ, ಸಹಕಾರ ಅಭಿವೃದ್ಧಿ ಅಧಿಕಾರಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಸಹಕಾರ ಸಂಘದ ಸಿಬಂದಿಗಳು ಡಿಸಿಸಿ ಬ್ಯಾಂಕ್ ಶಾಖೆಗಳಲ್ಲಿ ರೈತರ ಕೆಸಿಸಿ ಉಳಿತಾಯ ಖಾತೆಯ ವಿವರವನ್ನು ಅಪ್‌ಲೋಡ್ ಮಾಡಿ ದೃಢೀಕರಿಸುವಂತೆ ತಿಳಿಸಲಾಗಿತ್ತು.
Related Articles
ಸುತ್ತೋಲೆಯಲ್ಲಿ ಮೂರು ದಿನದೊಳಗೆ ಮಾಹಿತಿ ಅಪ್‌ಲೋಡ್ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಆದರೆ ಆ್ಯಪ್ಶನ್‌ನಲ್ಲಿ ಕೊನೆಯ ನಾಲ್ಕು ಪಟ್ಟಿ ನೀಡದ ಕಾರಣ ಪೂರ್ಣ ಅಪ್‌ಲೋಡ್ ಸಾಧ್ಯವಾಗಿಲ್ಲ ಅನ್ನುವುದು ಸಹಕಾರ ಸಂಘಗಳ ಅಧಿಕಾರಿಗಳ ಅಳಲು. ಆದರೆ ಸುತ್ತೋಲೆಯಲ್ಲಿ ಮೂರು ದಿನಗಳಲ್ಲಿ ಪೂರ್ಣಗೊಳ್ಳದೆ ಸಾಫ್ಟ್ವೇರ್ ಲಾಕ್ ಆದಲ್ಲಿ ಆಯಾ ಸಹಕಾರ ಸಂಘಗಳ ಮತ್ತು ಸಂಬಂಧಿಸಿದ ತಾಲೂಕು ಸಹಕಾರ ಇಲಾಖಾಧಿಕಾರಿಗಳ ಮತ್ತು ಎಸ್‌ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರು ಜವಾಬ್ದಾರರಾಗಿದ್ದು, ಸರಕಾರದ ಕಾನೂನು ಕ್ರಮಕ್ಕೆ ಈಡಾಗಬೇಕು ಎಂಬ ಎಚ್ಚರಿಕೆ ನೀಡಲಾಗಿದೆ. ಜತೆಗೆ ಮೂರು ದಿನದಲ್ಲಿ ರಜೆ ಇದ್ದರೆ ಅದನ್ನು ರದ್ದುಗೊಳಿಸಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಲಾಗಿತ್ತು.
Advertisement
161.75 ಕೋ.ರೂ. ಹಣ ವಾಪಸ್!ಉಳಿತಾಯ ಖಾತೆ ಅಪೂರ್ಣ ಕಾರಣದಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 22,687 ಫಲಾನುಭವಿಗಳ 161.75 ಕೋ.ರೂ. ಫಲಾನುಭವಿಗಳ ಖಾತೆಗೆ ಬಾರದೆ ಡಿಸಿಸಿ ಬ್ಯಾಂಕ್‌ನಿಂದ ಪುನಃ ಅಪೆಕ್ಸ್ ಬ್ಯಾಂಕ್‌ಗೆ ವಾಪಸಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 17,744 ಮಂದಿಯ 128.22 ಕೋ.ರೂ., ಉಡುಪಿ ಜಿಲ್ಲೆಯ 4934 ಮಂದಿಯ 33.53 ಕೋ.ರೂ. ಹಣ ವಾಪಾಸಾತಿ ಆಗಿದೆ. ಹೀಗಾಗಿ ಹಣ ಬಿಡುಗಡೆಗೊಂಡರೂ ಹಣ ಖಾತೆಗೆ ಜಮೆ ಆಗದಿರುವ ಬಗ್ಗೆ ಫಲಾನುಭವಿಗಳಿಗೆ ಗೊಂದಲ ಉಂಟಾಗಿತ್ತು. ಸಾಫ್ಟ್ವೇರ್ ಅಪ್‌ಡೇಟ್ ಆಪ್ಶನ್ ಮೂರು ದಿನದಲ್ಲಿ ಸ್ಥಗಿತಗೊಂಡಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸೋಮವಾರ ತಾಲೂಕು ಕಚೇರಿಯಲ್ಲಿ ಸಭೆ ನಡೆದಿದೆ. ಬೆಳೆಗಾರರ ಬೇಡಿಕೆಯಂತೆ ಕೆಲ ನಿರ್ಣಯಗಳನ್ನು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗುವುದು.
– ಕುಂಞಿ ಅಹ್ಮದ್, ಸುಳ್ಯ ತಹಶೀಲ್ದಾರ್