Advertisement

ರೈತರ ಹಿತಕ್ಕಾಗಿ ಸಾಲ ಮನ್ನಾ

12:30 PM Jul 10, 2017 | |

ಸೇಡಂ: ರೈತರ ಹಿತಕ್ಕಾಗಿ ಸಹಕಾರಿ ಸಂಸ್ಥೆಯಲ್ಲಿ 8.5 ಸಾವಿರ ಕೋಟಿ ರೂ. ಬೆಳೆ ಸಾಲ ಮನ್ನಾ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಖಾತೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.

Advertisement

ಪಟ್ಟಣದ ಎಪಿಎಂಸಿ ಉಗ್ರಾಣದಲ್ಲಿ ಈದ್‌ ಮಿಲಾಪ್‌ ಮತ್ತು ಗುರು ಪೂರ್ಣಿಮೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಸದ್ಭಾವನಾ
ಸಭೆಯಲ್ಲಿ ಅವರು ಮಾತನಾಡಿದರು. ರೈತ ವಲಯವನ್ನು ಸದೃಢವಾಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಸರ್ಕಾರ ಅತ್ಯಂತ
ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೇ ಹೆಚ್ಚಿನ ತೊಗರಿಯನ್ನು ಈ ಭಾಗದಲ್ಲಿ ಖರೀದಿಸಲಾಗಿದೆ ಎಂದು
ಹೇಳಿದರು. ಸರ್ವರನ್ನೂ ಒಂದಾಗಿ ಕಾಣುವ ಸದ್ಭಾವನಾ ಪರಂಪರೆಯನ್ನು ಭಾರತ ದೇಶ ಹೊಂದಿದೆ. ಇಲ್ಲಿ ಶಾಂತಿ ನೆಲೆಸಿದಾಗ
ಮಾತ್ರ ಅಭಿವೃದ್ಧಿಯಾಗಲು ಸಾಧ್ಯ. ಸೌಹಾರ್ದಯುತ ವಾತಾವರಣ ಇದ್ದಲ್ಲಿ ಎಲ್ಲ ಕಾರ್ಯಗಳು ಫಲ ನೀಡುತ್ತವೆ ಎಂದು
ಹೇಳಿದರು. 

ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಸದಾಶಿವ ಸ್ವಾಮೀಜಿ, ಬ್ರಹ್ಮಕುಮಾರಿ ಆಶ್ರಮದ ಕಲಾವತಿ ಅಕ್ಕ, ಚರ್ಚ್‌ ಫಾದರ್‌
ಸು ಧೀರ ರವಿಕುಮಾರ, ಮೌಲಾನಾ ಉಮರ್‌ ಫಾರುಕ್‌ ಮಾತನಾಡಿದರು. ಹಾಲಪ್ಪಯ್ಯ ವಿರಕ್ತ ಮಠದ
ಪಂಚಾಕ್ಷರಿ ಸ್ವಾಮೀಜಿ, ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಐನೋಳಿ ಜಿಪಂ ಸದಸ್ಯ ಗೌತಮ ಪಾಟೀಲ, ರಾಮಯ್ಯ
ಪೂಜಾರಿ, ಶ್ರೀನಿವಾಸರಾವ ದೇಶಪಾಂಡೆ, ವೆಂಕಟರಾಮರೆಡ್ಡಿ ಹಯ್ನಾಳ, ವೆಂಕಟರಾಮರೆಡ್ಡಿ ಕಡತಾಲ, ಶಂಭುರೆಡ್ಡಿ
ಮದ್ನಿ, ಸಿದ್ದಣ್ಣಗೌಡ ಪಾಟೀಲ ಕೋಲಕುಂದಾ, ಗಣಪತರಾವ ಚಿಮ್ಮನಚೋಡ್ಕರ್‌, ರಾಜಶ್ರೀ ಕಾರ್ಖಾನೆ ಘಟಕ ಮುಖ್ಯಸ್ಥ ಎಂ.ವಿ.
ರಮಣರಾವ, ಅನೀಲ ಟಿಪ್ಲೆ, ದೇಬಸಿಸ್‌ ಚೌಧರಿ, ಮಲ್ಲಿಕಾರ್ಜುನ ಗುಡ್ಡದ, ನಾಜಿಮೋದ್ದಿನ್‌, ಅಬ್ದುಲ್‌ ಗಫೂರ್‌, ಸಿದ್ದು
ಬಾನಾರ ಇದ್ದರು. 

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ ಸ್ವಾಗತಿಸಿದರು. ಮನೋಹರ ವಿಶ್ವಕರ್ಮ
ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶಶಿಶೇಖರರೆಡ್ಡಿ ನಿರೂಪಿಸಿ ವಂದಿಸಿದರು.

ಕಾರ್ಖಾನೆ ಅಧಿಕಾರಿಗಳ ಕಂಡು ರೈತರು ಗರಂ

Advertisement

ಮಳಖೇಡನ ರಾಜಶ್ರೀ ಸಿಮೆಂಟ್‌ ಕಾರ್ಖಾನೆ ಭೂಮಿ ಖರೀದಿಯಲ್ಲಿ ಅನ್ಯಾಯ ಮಾಡಿದೆ ಎಂದು ಆರೋಪಿಸಿ 780 ದಿನಗಳಿಂದ ಸಹಾಯಕ ಆಯುಕ್ತರ ಕಚೇರಿ ಎದುರು ರೈತರು ಅನಿರ್ದಿಷ್ಟಾವಧಿ  ಧರಣಿ ನಡೆಸುತ್ತಿರುವ ಬೆನ್ನಲ್ಲೇ. ರವಿವಾರ ನಡೆದ ಸದ್ಭಾವನಾ ಸಮಾರಂಭದಲ್ಲಿ ಕಾರ್ಖಾನೆ ಅ ಕಾರಿಗಳು ಸಚಿವರ ಪಕ್ಕದಲ್ಲೇ ಕುಳಿತು ವೇದಿಕೆ ಹಂಚಿಕೊಂಡರು. ಇದರಿಂದ ಕೆಲ ರೈತರು ಅಸಮಾಧಾನದಿಂದಲೇ ಹೊರಹೊಗಿದ್ದು ಕಂಡು ಬಂತು. 

Advertisement

Udayavani is now on Telegram. Click here to join our channel and stay updated with the latest news.

Next