Advertisement
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಕೋಮು ಭಾವನಾತ್ಮಕತೆ ಇತ್ತೀಚಿನ ದಿನಗಳಲ್ಲಿ ಸೆನ್ಸೆಷನಲ್ ಆಗಿದೆ. ವಾಟ್ಸಾಪ್, ಫೇಸ್ ಬುಕ್ ನಿಯಂತ್ರಣ ಮಾಡಬೇಕು ಎಂದು ಈ ಹಿಂದೆ ಬಹಳ ದೊಡ್ಡ ಚರ್ಚೆ ಆಗಿತ್ತು. ಸಮಾಜದಲ್ಲಿ ಸಂಯಮ ಬಹಳ ಮುಖ್ಯ. ದುಷ್ಕೃತ್ಯ ಯಾರು ಮಾಡಿದರೂ ಅವರನ್ನು ದಂಡಿಸಬೇಕು, ಶಿಕ್ಷಿಸಬೇಕು ಅದನ್ನು ಮಾಡೋಣ.ಈಗಾಗಲೇ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದರು.
Related Articles
Advertisement
ಸಂಘಟನೆ ಬಹಳ ಗಟ್ಟಿ; ಜೋಗ ಅಭಿವೃದ್ಧಿಗೆ ಕ್ರಮ
ಶಿವಮೊಗ್ಗ ಜಿಲ್ಲೆಯಲ್ಲಿ ಸಂಘಟನೆ ಬಹಳ ಗಟ್ಟಿಯಾಗಿದೆ. ಇನ್ನಷ್ಟು ಗಟ್ಟಿಗೊಳಿಸಲು ಸೂಚನೆ ಕೊಟ್ಟಿದ್ದೇವೆ. ಪ್ರಮುಖರ ಜೊತೆಗೆ ಚರ್ಚೆ ಮಾಡಿದ್ದೇವೆ. ಅಭಿವೃದ್ಧಿ ಕುರಿತ ವಿಚಾರದ ಬಗ್ಗೆ ಚರ್ಚೆ ಆಗಿದೆ. ಈಗ ನಡೆಯುತ್ತಿರುವ ಅಭಿವೃದ್ಧಿ ಚುರುಕುಗೊಳಿಸಬೇಕು ಎಂಬ ಚರ್ಚೆ ನಡೆದಿದೆ. ಅರಣ್ಯ ಕುರಿತಾದ ವಿಚಾರಗಳ ಬಗ್ಗೆ ಕಾನೂನಾತ್ಮಕವಾಗಿ ಸಲಹೆ ಪಡೆಯಬೇಕಿದೆ. ಮೇ ಮೊದಲ ವಾರದಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳ ಸಭೆ ಕರೆಯುತ್ತಿದ್ದೇನೆ ಎಂದರು.
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ, ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ಮಾಡುತ್ತೇನೆ. ಜೋಗ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ. ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿ ನಿರ್ಮಾಣ ಮಾಡಬೇಕು ಎಂಬುದು ಹಲವರ ಕನಸಾಗಿದ್ದು, ಆ ಬಗ್ಗೆ ಸಹ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲೆಗೆ ಅತಿ ಹೆಚ್ಚಿನ ಕೈಗಾರಿಕೆಗಳು ಬರುವ ಬಗ್ಗೆ ಕ್ರಮ ವಹಿಸುತ್ತೇವೆ ಎಂದರು.
ಬೆಂಗಳೂರು ಹೊರತುಪಡಿಸಿ ಐಟಿ ಡೆವಲಪ್ ಮೆಂಟ್ ಆಗಬೇಕು.ಶಿವಮೊಗ್ಗದಲ್ಲಿ ಸಹ ಐಟಿ ಅಭಿವೃದ್ಧಿ ಗೆ ಕ್ರಮ ವಹಿಸುತ್ತೇವೆ. ಸಮಗ್ರ ಕರ್ನಾಟಕದ ಅಭಿವೃದ್ಧಿ ಆಗಬೇಕು. ಎಲ್ಲಾ ಕಡೆ ಅಭಿವೃದ್ಧಿ ಮಾಡುವುದು ನಮ್ಮ ಉದ್ದೇಶವಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಚಿವರಾದ ಅರಗ ಜ್ಞಾನೇಂದ್ರ, ಎಂಎಲ್ಸಿ ಅರುಣ್ ಭಾಗಿಯಾಗಿದ್ದರು.