Advertisement

ಸಾಲ ಪಡೆದು ವಂಚನೆ : ನಾಲ್ವರ ವಿರುದ್ಧ ಕೇಸು

06:00 AM Jul 08, 2018 | Team Udayavani |

ಕುಂದಾಪುರ: ಜಾಗವನ್ನು ಅಡವಿಟ್ಟು, ಸಹಕಾರಿ ಸಂಘದಿಂದ ಲಕ್ಷಾಂತರ ರೂ. ಸಾಲ ಪಡೆದು, ಮರುಪಾವತಿಸದೆ ವಂಚಿಸಿದ ಸಂಬಂಧ ಸಂಘದ ಪ್ರಧಾನ ವ್ಯವಸ್ಥಾಪಕರ ಸಹಿತ ನಾಲ್ವರ ವಿರುದ್ಧ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾಗ ಅಡವಿಟ್ಟ ಉಪ್ಪುಂದ ಗ್ರಾಮದ
ಯು. ಸುನೀಲ್‌ ಕುಮಾರ್‌ ಹೊಳ್ಳ, ದೀಪಾ ಹೊಳ್ಳ, ಸಾಲ ನೀಡಿದ  ಸಹಕಾರಿ ಸಂಘದ ಪ್ರಧಾನ  ವ್ಯವಸ್ಥಾಪಕ ಶೀನ ಕೊಠಾರಿ, ಹಾಗೂ ಮಂಗಳೂರಿನ  ಮತ್ತೂಂದು ಸಹಕಾರಿ ಬ್ಯಾಂಕಿನ ನಿವೃತ್ತ ಚೀಫ್‌ ಎಕ್ಸಿಕ್ಯೂಟಿವ್‌ ಅಧಿಕಾರಿ ಸತೀಶ್‌ ಎಸ್‌. ಆರೋಪಿತರು. 

Advertisement

ಪ್ರಕರಣದ ವಿವರ
ಜಾಗ ಅಡವಿಟ್ಟು, 36,23,674 ರೂ. ಸಾಲ ಪಡೆದಿದ್ದು, ವಂಚಿಸುವ ಉದ್ದೇಶದಿಂದಲೇ ಮರು ಪಾವತಿಸಿಲ್ಲ. ಈ ಕುರಿತು ಕುಂದಾಪುರದ ಸಹಾಯಕ ನಿಬಂಧಕರ ನ್ಯಾಯಾಲಯದಲ್ಲಿ  ದಾವೆ  ದಾಖಲಾಗಿದೆ. ವಿಚಾರಣೆಯಲ್ಲಿ ಆಡವಿಟ್ಟ ಜಾಗ ಸಾಲ ಪಡೆದ ಹಣಕ್ಕಿಂತ ಕಡಿಮೆ ಮೌಲ್ಯದ್ದು ಎನ್ನುವುದು  ಸಾಬೀತಾಗಿತ್ತು. ಆ ಬಳಿಕ ಸಾಲ ಪಡೆದ ಇಬ್ಬರು ಆರೋಪಿಗಳಾದ ಯು. ಸುನೀಲ್‌ ಕುಮಾರ್‌ ಹೊಳ್ಳ, ದೀಪಾ ಹೊಳ್ಳ ಅವರು ಹಾಗೂ ಪ್ರಧಾನ ವ್ಯವಸ್ಥಾಪಕ ಶೀನ ಕೊಠಾರಿ ಹಾಗೂ ಸಹ ಕಾರಿ  ಬ್ಯಾಂಕೊಂದರ ನಿವೃತ್ತ ಚೀಫ್‌ ಎಕ್ಸಿಕ್ಯೂಟಿವ್‌ ಅಧಿಕಾರಿ ಸತೀಶ್‌ ಎಸ್‌. ವಾರ್ಷಿಕ ಮಹಾಸಭೆಯ ಒಪ್ಪಿಗೆ ಪಡೆಯದೆ, ಅವರೊಳಗೆ ಒಪ್ಪಂದ ಮಾಡಿಕೊಂಡು, ಕೇವಲ 21 ಲ.ರೂ. ಪಡೆದು, ಸಂಘಕ್ಕೆ ಸುಮಾರು 15 ಲ.ರೂ. ಗೂ ಮಿಕ್ಕಿ ನಷ್ಟ ಉಂಟು ಮಾಡಿರುತ್ತಾರೆ. ಅಲ್ಲದೆ ಅಡವಿಟ್ಟ ಆ ಜಾಗವನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ ಬಂದ ಹಣವನ್ನು ನಾಲ್ವರು ಆರೋಪಿಗಳು ಹಂಚಿಕೊಂಡಿದ್ದಾರೆ. 

ಸಹಕಾರಿ ಸಂಘಕ್ಕೆ ವಂಚಿಸಿ ನಷ್ಟವನ್ನುಂಟು ಮಾಡಿ, ಬ್ಯಾಂಕಿನ ಹಣವನ್ನು ತಮ್ಮ ಅಕ್ರಮ ಲಾಭಕ್ಕೆ ಬಳಸಿಕೊಂಡು ವಂಚನೆ, ವಿಶ್ವಾಸಘಾತಕ ಹಾಗೂ ಕಾನೂನು ಬಾಹಿರವಾಗಿ ಅಕ್ರಮ ಲಾಭವನ್ನು ಪಡೆದಿರುವುದಾಗಿ  ಹಳ್ನಾಡಿನ ಸಾಮಾಜಿಕ  ಕಾರ್ಯಕರ್ತ ಬಸವ ಹರಿಜನ ಅವರು ನೀಡಿದ ದೂರಿನಂತೆ ಕೇಸು ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next