Advertisement
ಇಲ್ಲಿನ ಗಾಂಧಿ ಮೈದಾನದಲ್ಲಿ ಸೋಮವಾರ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 36 ಯೋಜನೆಗಳ 490.97 ಕೋ. ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ತತ್‌ಕ್ಷಣ ಅಚ್ಛೇ ದಿನ್ ಆಯೇಗಾ ಎಂದು ಹೇಳಿದ್ದರೂ ಬಡವರು, ರೈತರು, ಮೀನುಗಾರರಿಗೆ ಅಚ್ಛೇ ದಿನ್ ಬಂದಿದೆಯೇ? ಕಪ್ಪುಹಣ ತಂದು ಎಲ್ಲರ ಬ್ಯಾಂಕ್ ಖಾತೆಗೂ 15 ಲ.ರೂ. ಜಮಾಯಿಸುವುದಾಗಿ ಘೋಷಿಸಿ ದರೂ ಯಾರಿಗೂ 15 ಪೈಸೆ ಕೂಡ ಬಂದಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಸುವುದಾಗಿ ಹೇಳಿದ್ದರು, ವರ್ಷಕ್ಕೆ 2 ಲಕ್ಷ ಮಂದಿಗೆ ಉದ್ಯೋಗ ನೀಡಲಾಗಿಲ್ಲ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂಬ ಭರವಸೆ ಹುಸಿ ಯಾಗಿದೆ. ಅಚ್ಛೇ ದಿನ್ ರಾಮದೇವ್, ಅಂಬಾನಿ, ಅದಾನಿಗಳಂಥ ಬಂಡವಾಳ ಶಾಹಿಗಳಿಗೆ ಬಂದಿದೆ ಎಂದು ಸಿಎಂ ಕುಟುಕಿದರು.
ರಾಜ್ಯ ಸರಕಾರ ಮಂಜೂರು ಮಾಡಿದ ಕಾಮಗಾರಿಗಳು ಕೇಂದ್ರದ್ದೆಂದು ಹೇಳಿಕೊಂಡು ಬ್ಯಾನರ್ ಹಾಕಿಕೊಳ್ಳುವುದು ಬಿಜೆಪಿಯ ಚಾಳಿ. ಅವರು ಕೆಲಸ ಮಾಡುವುದು ಕಮ್ಮಿ, ಪ್ರಚಾರ ಜಾಸ್ತಿ. ಯಾರು ಎಷ್ಟು ಅನುದಾನ ನೀಡಿದ್ದಾರೆ, ಮಂಜೂರು ಮಾಡಿಸಿದ್ದಾರೆ ಎಂದು ಜನರಿಗೆ ಗೊತ್ತಿದೆ. ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಕೊಟ್ಟದ್ದು ಸೈಕಲ್ ಮತ್ತು ಸೀರೆ ಎರಡೇ. ಸಿಎಂ ಆದಿಯಾಗಿ ಹೆಚ್ಚಿನವರು ಜೈಲಿಗೆ ಹೋದ ಇತಿಹಾಸ ಅವರದು ಎಂದ ಸಿದ್ದರಾಮಯ್ಯ, ಸಿಎಂ ಆಗಿದ್ದಾಗ ಸಾಲ ಮನ್ನಾ ಕೇಳಿದರೆ “ಸರಕಾರ ನೋಟು ಪ್ರಿಂಟ್ ಮಾಡುವುದಿಲ್ಲ’ ಎಂದಿದ್ದ ಬಿಎಸ್‌ವೈ ಈಗ ಸಾಲ ಮನ್ನಾಕ್ಕೆ ಆಗ್ರಹಿಸುತ್ತಿದ್ದಾರೆ ಎಂದರು. ಸಚಿವರಾಗುವ ಅರ್ಹತೆಯಿದೆ
ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಕ್ಕಿಲ್ಲ ಎನ್ನುವ ಅಸಮಾಧಾನವಿದ್ದರೂ ಮುಂದಿನ ದಿನಗಳಲ್ಲಿ ಆ ಅವಕಾಶ ಖಂಡಿತ ಲಭಿಸುತ್ತದೆ, ಆ ಅರ್ಹತೆ ಅವರಿಗಿದೆ ಎಂದು ಸಿಎಂ ಹೇಳಿದರು.
Related Articles
ಉಡುಪಿ ಜಿಲ್ಲೆಯ 66 ಸಾವಿರ ಮಂದಿಗೆ ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ಮೀನು ಗಾರಿಕೆ ಸಚಿವನಾಗಿದ್ದರೂ ನನ್ನ ಕ್ಷೇತ್ರದ ಮೀನು ಗಾರಿಕೆ ಅಭಿವೃದ್ಧಿಗೆ ಕೇವಲ 50 ಕೋ.ರೂ. ಅನುದಾನ ತಂದರೆ, ಗೋಪಾಲ ಪೂಜಾರಿ ಅವರು 350 ಕೋ.ರೂ. ಅನುದಾನ ತಂದಿದ್ದಾರೆ ಎಂದು ಪ್ರಮೋದ್ ಮಧ್ವರಾಜ್ ಶ್ಲಾಘಿಸಿದರು.
Advertisement
ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಈ ಕ್ಷೇತ್ರದ ಅಭಿವೃದ್ಧಿಗೆ ಈವರೆಗೆ ಒಟ್ಟು 2 ಸಾವಿರ ಕೋ.ರೂ. ಅನು ದಾನವನ್ನು ಸಿಎಂ ನೀಡಿದ್ದಾರೆ. ಆದರೆ ಬಿಜೆಪಿ ಯವರು ರಾಜ್ಯದ ಯೋಜನೆಗಳನ್ನು ಕೇಂದ್ರದ್ದು ಎಂದು ಹೇಳಿ ಬೋರ್ಡ್ ಹಾಕಿ ಕೊಳ್ಳು ತ್ತಿದ್ದಾರೆ. 350 ಕೋ.ರೂ. ವೆಚ್ಚದ ವಾರಾಹಿ ಏತ ನೀರಾವರಿ ಮಂಜೂರು ಮಾಡಿಸಿದ್ದೇನೆ ಎಂದರು.
ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾತನಾಡಿದರು. ಸಚಿವ ಯು.ಟಿ. ಖಾದರ್, ಭಟ್ಕಳ ಶಾಸಕ ಮಾಂಕಾಳ ವೈದ್ಯ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ರಾಜ್ಯ ಸಹಕಾರಿ ಮಹಾಮಂಡಲದ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ರಾಜ್ಯ ಅಲ್ಪಸಂಖ್ಯಾಕ ಘಟಕದ ಅಧ್ಯಕ್ಷ ಎಂ.ಎ. ಗಫೂರ್, ಬ್ಲಾಸಂ ಫೆರ್ನಾಂಡಿಸ್, ರಾಜ್ಯ ಇಂಟಕ್ ಅಧ್ಯಕ್ಷ ರಾಕೇಶ್ ಮಲ್ಲಿ, ಕಾಂಗ್ರೆಸ್ ಮುಖಂಡರಾದ ರಾಜು ಪೂಜಾರಿ, ಮದನ್ ಕುಮಾರ್, ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಜಿ.ಪಂ. ಸಿಇಒ ಶಿವಾನಂದ ಕಾಪಶಿ, ಯೋಜನಾಧಿಕಾರಿ ಶ್ರೀನಿವಾಸ ರಾವ್, ಎಸ್‌ಪಿ ಲಕ್ಷ್ಮಣ ನಿಂಬರ್ಗಿ ಮತ್ತಿತರರು ಉಪಸ್ಥಿತರಿದ್ದರು. ಪತ್ರಕರ್ತ ಕೆ.ಸಿ. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
ಮೀನುಗಾರರನ್ನು ಎಸ್‌ಟಿ ವರ್ಗಕ್ಕೆ ಸೇರಿಸಲು ಶಿಫಾರಸುಮೀನುಗಾರ ಸಮುದಾಯವನ್ನು ಎಸ್‌ಟಿ ವರ್ಗಕ್ಕೆ ಸೇರಿಸಲು ಕೇಂದ್ರಕ್ಕೆ ಈಗಾಗಲೇ 2 ಬಾರಿ ಶಿಫಾರಸು ಮಾಡಿದ್ದರೂ ತಿರ ಸ್ಕರಿಸಿದ್ದು, ಈಗ ಮತ್ತೂಮ್ಮೆ ಶಿಫಾರಸು ಮಾಡ ಲಾಗುವುದು. ರಾಜ್ಯದ ಎಲ್ಲ ಕ್ಷೇತ್ರ ಗಳಿಗೂ ಅನುದಾನ ಮಂಜೂರು ಮಾಡ ಲಾಗಿದ್ದು, ಅಭಿವೃದ್ಧಿಯಲ್ಲಿ ತಾರ ತಮ್ಯ ಮಾಡುವುದಿಲ್ಲ. 22,506 ರೈತರ 8,165 ಕೋ.ರೂ. ಸಾಲ ಮನ್ನಾ ಮಾಡ ಲಾಗಿದೆ; ಅವಧಿಯೊಳಗೆ ಸಾಲ ಮರು ಪಾವತಿ ಸಿದ ಎಲ್ಲ ರೈತರ ಹಣ ಮನ್ನಾ ಮಾಡಿ, ಕರ್ನಾಟಕದ ಸರ್ವತೋಮುಖ ಬೆಳ ವಣಿಗೆಗೆ ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. “ಮನಸ್ಸಿನಲ್ಲಿದೆ ಹಿಂದುತ್ವ’
ಬಿಜೆಪಿ ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನ ಯಾತ್ರೆ ಮಾಡುತ್ತಿದೆ. ಪರಿ ವರ್ತನೆ ಆಗಬೇಕಾಗಿರುವುದು ರಾಜ್ಯ ದಲ್ಲಲ್ಲ; ಕೋಮುವಾದಿಗಳಾದ ಬಿಎಸ್‌ವೈ, ಸದಾನಂದ ಗೌಡ, ಈಶ್ವರಪ್ಪ, ಶೋಭಾ ರಲ್ಲಿ ಪರಿವರ್ತನೆ ಆಗಬೇಕಾಗಿದೆ. ಅವರಿಗೆ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಲ್ಲ ಎಂದ ಸಿದ್ದ ರಾಮಯ್ಯ, ಹಿಂದುತ್ವದ ಬಗ್ಗೆ ಬಿಜೆಪಿಯಿಂದ ಕಲಿಯಬೇಕಾಗಿಲ್ಲ. ಹಿಂದುತ್ವ ಮನಸ್ಸಿನಲ್ಲಿದ್ದರೆ ಸಾಕು. ಅದು ಆಹಾರ, ವ್ಯವಹಾರದಲ್ಲಿ ಅಲ್ಲ ಎಂದರು.