Advertisement

ಘೋಷಿಸಿದರೆ ಸಾಲದು, ಅನುದಾನ ಬೇಕು: ಖಂಡ್ರೆ

03:52 PM Sep 24, 2021 | Team Udayavani |

ವಿಧಾನಸಭೆ: ಹೈದರಾಬಾದ್‌ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಎಂದು ಘೋಷಿಸಿದರೆ ಸಾಲದು, ಅದಕ್ಕೆ ತಕ್ಕಂತೆ ಅನುದಾನ ಒದಗಿಸಬೇಕೆಂದು ಈಶ್ವರ್‌ ಖಂಡ್ರೆ ಆಗ್ರಹಿಸಿದರು.

Advertisement

ಸಾರ್ವಜನಿಕ ಮಹತ್ವದ ವಿಷಯದಡಿ ಪ್ರಸ್ತಾಪಿಸಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಕಳೆದ ಎರಡು ವರ್ಷಗಳಿಂದ ಅನುದಾನ ಕೊರತೆ, ಸಿಬ್ಬಂದಿ ನೇಮಕಾತಿ ವಿಳಂಬ,ಮಂಡಳಿ ರಚನೆ ಮಾಡದಿರುವುದು ಸೇರಿ ಅಂಕಿ-ಅಂಶಗಳ ಸಮೇತ ಸದನದ ಮುಂದಿಟ್ಟರು.

ಹೈದರಾಬಾದ್‌ ಕರ್ನಾಟಕ ಭಾಗಕ್ಕೆ 371 ಜೆ ಅಡಿ ಸ್ಥಾನಮಾನ ಕೊಡಿಸಿದ ಕಾಂಗ್ರೆಸ್‌ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಏಳು ಜಿಲ್ಲೆಗಳ 41 ಶಾಸಕರನ್ನು ಒಳಗೊಂಡ ಮಂಡಳಿ ರಚನೆ ಮಾಡಿ ವಾರ್ಷಿಕ 1500 ಕೋಟಿ ರೂ. ವರೆಗೆ ಅನುದಾನ ನೀಡಿ ಅಭಿವೃದ್ಧಿಗೆ ಸಂಕಲ್ಪ ತೊಟ್ಟಿತ್ತು. 52 ಸಾವಿರ ಹುದ್ದೆಗಳ ಪೈಕಿ 28 ಸಾವಿರ ಹುದ್ದೆ ತುಂಬಿತ್ತು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದೇ ಒಂದು ಹುದ್ದೆ ತುಂಬಿಲ್ಲ, ಪ್ರಸ್ತುತ ಗ್ರೂಪ್‌ ಡಿ ಹೊರತುಪಡಿಸಿ 20 ಸಾವಿರ ಹುದ್ದೆ ಖಾಲಿ ಇದೆ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ 4 ಸಾವಿರ ಎಂಬಿಬಿಎಸ್‌, 24 ಸಾವಿರ ಎಂಜಿನಿಯರಿಂಗ್‌ ಸೀಟುಗಳು ಆ ಭಾಗದ ವಿದ್ಯಾರ್ಥಿಗಳಿಗೆ ಸಿಗುವಂತೆ ಕ್ರಮ ಕೈಗೊಂಡಿತು. ಈ ಸರ್ಕಾರ ಆ ಭಾಗಕ್ಕೆ ಏನೂ ಮಾಡಿಲ್ಲ ಎಂದು ದೂರಿದರು. 26 ತಿಂಗಳು ಆದರೂ ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನೇ ರಚನೆ ಮಾಡಿಲ್ಲ. ಒಂದೇ ಒಂದು ಸಭೆ ಮಾಡಿಲ್ಲ. ಹೀಗಾದರೆ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಆರ್ ಸಿಬಿ ವಿರುದ್ಧ ಪಂದ್ಯಕ್ಕೂ ಮುನ್ನ ಧೋನಿ ಪಡೆಗೆ ಗಾಯದ ಬರೆ: ಪ್ರಮುಖ ಆಟಗಾರ ತಂಡದಿಂದ ಔಟ್?

Advertisement

ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ಹೆಚ್ಚುವರಿಯಾಗಿ 1500 ಕೋಟಿ ರೂ. ಕೊಡಲಾಗುವುದು. ಆದರೆ, ಬಳಕೆ ಪ್ರಮಾಣ ಪತ್ರ ಕೊಡಿ ಎಂದು ಹೇಳಿದ್ದಾರೆ. ಮಂಡಳಿ ರಚ ನೆಯೇ ಇಲ್ಲದೆ ಆ ಮಂಡಳಿ ಯಲ್ಲಿ ಸಿಬ್ಬಂದಿಯೇ ನೇಮಕವಾಗದಿದ್ದರೆ ವೆಚ್ಚ ಮಾಡುವುದಾದರೂ ಹೇಗೆ ಎಂದರು.

3 ಸಾವಿರಕ್ಕೆ ಹೆಚ್ಚಿಸಿ: ಕಾಂಗ್ರೆಸ್‌ ಡಾ. ಅಜಯ್‌ಧರ್ಮಸಿಂಗ್‌ ಮಾತನಾಡಿ, ಡಾ.ಡಿ.ಎಂ.ನಂಜುಂಡಪ್ಪ ಅವರ ವರದಿ ಯಲ್ಲಿ ಪ್ರಸ್ತಾಪಿಸಿದ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಹೈದರಾಬಾದ್‌ ಕರ್ನಾಟಕದ 7 ಜಿಲ್ಲೆಗಳ ತಾಲೂಕುಗಳೇ ಜಾಸ್ತಿ ಇವೆ. ಆದರೂ ಅನುದಾನ ಸರಿಯಾಗಿ ಸಿಗುತ್ತಿಲ್ಲ ಎಂದು ಹೇಳಿದರು.

2019-20 ನೇ ಸಾಲಿನಲ್ಲಿ 1500 ಕೋಟಿ ರೂ. ಬಜೆಟ್‌ನಲ್ಲಿ ಘೋಷಿಸಿ ನಂತರ ಕೊರೊನಾ ಕಾರಣದಿಂದ 1131 ಕೋಟಿ ರೂ.ಗೆ ಇಳಿಸಿತು. ಪ್ರಸಕ್ತ ವರ್ಷವೂ 1500 ಕೋಟಿ ರೂ. ಪೈಕಿ ಆರು ತಿಂಗಳು ಕಳೆದರೂ 373 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಉಳಿದ ಹಣ ಮುಂದಿನ ಉಳಿದ ಅವಧಿಯಲ್ಲಿ ವೆಚ್ಚ ಸಾಧ್ಯವೆ ಎಂದು ಪ್ರಶ್ನಿಸಿ, ಹಣ ಬಳಕೆ ಆಗದಿದ್ದರೆ ಕ್ಯಾರಿ ಫಾವರ್ಡ್‌ ಮಾಡಬೇಕು ಎಂದು ಒತ್ತಾಯಿಸಿದರು. ವಾರ್ಷಿಕ 3 ಸಾವಿರ ಕೋಟಿ ರೂ. ಆ ಭಾಗದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಮೀಸಲಿಡಬೇಕು ಎಂದು ಆಗ್ರಹಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next