Advertisement
ಆತ್ಮಹತ್ಯೆ ಮಾಡಿಕೊಂಡವರನ್ನು ರೈತ ಶೇಖರಯ್ಯ ಬೀಡನಾಳ (48), ಶೇಖರಯ್ಯನ ಪತ್ನಿ ಜಯಮ್ಮ ಬೀಡನಾಳ (41), ಪುತ್ರಿಯರಾದ ಬಸಮ್ಮ ಬೀಡನಾಳ(23), ಗೌರಮ್ಮ ಬೀಡನಾಳ(22), ಸಾವಿತ್ರಮ್ಮ (20) ಹಾಗೂ ಪಾರ್ವತಿ(15) ಎಂದುಗುರುತಿಸಲಾಗಿದೆ.
Related Articles
Advertisement
ಮೃತ್ಯುಪತ್ರ: ಸಾವಿಗೆ ಹಲವು ಕಾರಣಗಳನ್ನು ತಿಳಿಸಿ ರೈತ ಶೇಖರಯ್ಯ ಬರೆದಿಟ್ಟಿರುವ ಮೃತ್ಯುಪತ್ರವೊಂದು ಪತ್ತೆಯಾಗಿದೆ. ನನಗೆ ನಾಲ್ವರು ಹೆಣ್ಣು ಮಕ್ಕಳಿದ್ದು, ಹಿರಿಯ ಮಗಳು ಬಸಮ್ಮಳನ್ನು ಯಲಬುರ್ಗಾತಾಲೂಕಿನ ದಮ್ಮೂರಿಗೆ ಕಳೆದ ಎರಡು ವರ್ಷದ ಹಿಂದಷ್ಟೆ ಸಾಲ ಮಾಡಿ ಮದುವೆ ಮಾಡಿಕೊಡಲಾಗಿತ್ತು. ಆದರೆ, ಆಕೆಯ ಗಂಡನ ಕಡೆಯವರು ಮಗಳನ್ನು ಕರೆದುಕೊಂಡು ಹೋಗಿರಲಿಲ್ಲ. ಸಂಸಾರ ಸರಿಯಾಗಿರಲಿಲ್ಲ. ಎರಡನೇ ಮಗಳು ಗೌರಮ್ಮಳನ್ನು ಕೆಲವೇ ತಿಂಗಳ ಹಿಂದಷ್ಟೇ ಮದುವೆ ಮಾಡಿಕೊಡಲಾಗಿತ್ತು. ಆಸ್ತಿಗಳ ವಿಂಗಡಣೆ ಆಗಿರಲಿಲ್ಲ. ಅಲ್ಲದೇ ಕಷ್ಟಪಟ್ಟು ಮಕ್ಕಳಿಗೆ ಸಾಲ ಮಾಡಿ ಮದುವೆ ಮಾಡಿದ್ದೆ. ಆದರೆ, ಅವರ ಸಂಸಾರ ಸರಿಯಾಗಿರಲಿಲ್ಲ. ಬೆಳೆ ಸಾಲವನ್ನೂ ಮಾಡಿದ್ದೆ.ಇದೆಲ್ಲದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಶೇಖರಯ್ಯ ಡೆತ್ನೋಟ್ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದೇ ಕುಟುಂಬದಲ್ಲಿ ಆರು ಜನರು ಸಾವಿಗೆ ಶರಣಾಗಿರುವುದು ನಿಜಕ್ಕೂ ದಾರುಣ ಘಟನೆ. ಇಂತಹದುರ್ಘಟನೆ ನಡೆದಿದ್ದು, ನಿಜಕ್ಕೂ ವಿಷಾದನೀಯ. ತನಿಖೆಯಿಂದ ಎಲ್ಲವೂ ಬೆಳಕಿಗೆ ಬರಲಿದೆ.
– ಶಿವಶಂಕರ ರೆಡ್ಡಿ, ಕೃಷಿ ಸಚಿವ. ಡೆತ್‌ನೋಟ್ ಪತ್ತೆಯಾಗಿದೆ.ಅದರಲ್ಲಿ ಕೌಟುಂಬಿಕ ಕಲಹ, ಆಸ್ತಿ ಭಾಗ ಆಗದಿರುವುದು ಸೇರಿ ಸಾಲ ಮಾಡಿ ಕೊಂಡ ಕುರಿತು ಬರೆದಿದ್ದಾರೆ. ನಾಲ್ವರಿಗೆ ಜ್ಯೂಸ್ ಬಾಟಲ್‌ನಲ್ಲಿ ವಿಷ ಮಿಶ್ರಣ ಮಾಡಿ ಕುಡಿಸಿ ನಂತರ ಶೇಖರಯ್ಯ ನೇಣಿಗೆ ಶರಣಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
– ರೇಣುಕಾ ಸುಕುಮಾರ,
ಪೊಲೀಸ್ ವರಿಷ್ಠಾಧಿಕಾರಿ.