ಬೆಂಗಳೂರು: ರಮೇಶ್ ಕುಮಾರ್ ಹೇಳಿಕೆ ಹಾಗೂ ಭ್ರಷ್ಟಾಚಾರ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಜೆಪಿಗೆ ಚಾಲೆಂಜ್ ಹಾಕಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಓಪನ್ ಡಿಬೇಟ್ ಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಸುಮ್ಮನೆ ರಾಜಕೀಯ ಮಾಡುವುದು ಬೇಡ. ನೇರವಾಗಿ ಡಿಬೇಟ್ ಗೆ ಬನ್ನಿ. ಚರ್ಚೆ ಮಾಡಲು ನಾನು ಸಿದ್ದನಿದ್ದೇನೆ. ಅಪಪ್ರಚಾರ ಬಿಟ್ಟು ಚರ್ಚೆ ಮಾಡಿ ಎಂದು ಸವಾಲು ಹಾಕಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಆರ್.ಅಶೋಕ ಡಿಕೆಶಿ ಓಪನ್ ಡಿಬೆಟ್ ಗೆ ನಾವು ಸಿದ್ದವಿದ್ದೇವೆ. ಮೊದಲು ರಮೇಶ್ ಕುಮಾರ್ ಹೇಳಿಕೆ ಸತ್ಯ ಅಂತಾ ಒಪ್ಪಿಕೊಳ್ಳಲಿ. ರಮೇಶ್ ಕುಮಾರ್ ಹಾಗು ಡಿಕೆಶಿಯೇ ಮೊದಲು ಡಿಬೆಟ್ ಮಾಡಬೇಕು ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಕಾಂಗ್ರೆಸ್ ನವರು ದೇಶವನ್ನು 70 ವರ್ಷ ಲೂಟಿ ಮಾಡಿದ್ದಾರೆ: ಸಚಿವ ಅಶೋಕ್
60 ವರ್ಷಗಳ ಕಾಂಗ್ರೆಸ್ ನ ನಿಜ ಬಣ್ಣವನ್ನ ರಮೇಶ್ ಕುಮಾರ್ ಹೇಳಿದ್ದಾರೆ. ಇಡಿ, ಐಟಿ ವಿಚಾರಕ್ಕೆ ಪೂರಕ ದಾಖಲೆ ನೀಡಿದ್ದಾರೆ. ನಾಲ್ಕು ತಲೆಮಾರಿನ ಆಸ್ತಿ ಮಾಡಿದ್ದಾರೆ ಎಂದ್ರೆ ಶೇ.160 ಮಾಡಿದಿದ್ದಾರೆ. ಶೇ. 40 ಅಂತ ಆರೋಪ ಮಾಡ್ತಿದ್ದರು. ಕಾಂಗ್ರೆಸ್ ನ ಮಾನ ಮರ್ಯಾದೆ ಬೀದಿಗೆ ಬಂದಿದೆ. ಡಿಬೇಟ್ ಮಾಡಬೇಕು ಎಂದರೆ ಶಿವಕುಮಾರ್, ರಮೇಶ್ ಕುಮಾರ್ ಯಾವುದಾದರೂ ಚಾನಲ್ ನಲ್ಲಿ ಕುಳಿತು ಚರ್ಚೆ ಮಾಡಲಿ ಎಂದರು.