ಮುಂಬಯಿ: ಸಚಿವ ಸ್ಥಾನ ನೀಡದ ಕಾರಣ ಅಸಮಾಧಾನ ವ್ಯಕ್ಯಪಡಿಸಿದ್ದ ಶಿವಸೇನೆ ಸಂಸದೆ ಭಾವನಾ ಗಾವ್ಲಿ ಅವರು ಈ ಅಸಮಾಧಾ ನವನ್ನು ಶಿವಸೇನೆ ವತಿಯಿಂದ ದೂರು ಮಾಡುವ ಸಾಧ್ಯತೆ ಹೆಚ್ಚಾಗಿದೆ.
ನಿರಂತರ 5 ಬಾರಿ ಲೋಕಸಭೆ ಚುನಾವಣೆಯ ಗೆಲುವಿನ ಅನಂತರವೂ ಸಚಿವ ಸ್ಥಾನದ ಅವಕಾಶ ನೀಡಲಿಲ್ಲ ಎಂದು ಭಾವನಾ ಗಾವ್ಲಿ ಅಸಮಾಧಾನಗೊಂಡಿದ್ದರು.ಆದರೆ ಅವರಿಗೆ ಡೆಪ್ಯುಟಿ ಸ್ಪೀಕರ್ ಸ್ಥಾನ ನೀಡಿ ಅಸಮಾ ಧಾನವನ್ನು ದೂರ ಮಾಡುವ ಪ್ರಯತ್ನ ಆರಂಭವಾಗಿದೆ ಎಂದು ತಿಳಿದುಬಂದಿದೆ.
ಗಾವ್ಲಿ ಅವರಿಗೆ ಘಟಕದ ನಾಯಕ ಸ್ಥಾನ ನೀಡುವ ಯೋಜನೆ ಇತ್ತು. ಆದರೆ ಅವರು, ಇದಕ್ಕೂ ನಿರಾಕರಿಸಿ ದ್ದರು. ಆದರೆ ಶಿವಸೇನೆಯ ವತಿಯಿಂದ ಲೋಕಸಭೆಯ ಉಪಾಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ, ಅನೇಕ ವರ್ಷಗಳಿಂದ ನಮ್ಮ ಬೇಡಿಕೆ ಇದಾಗಿದೆ. ಇದರಿಂದಾಗಿ ಇನ್ನು ಮುಂದೆಯಾದರೂ ನಮಗೆ ಲೋಕಸಭೆಯಲ್ಲಿ ಉಪಾಧ್ಯಕ್ಷ ಸ್ಥಾನ ದೊರೆಯಬೇಕು ಎಂದು ಸೇನೆ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಭಾವನಾ ಗಾವ್ಲಿ ಅವರು, ಲೋಕಸಭೆ ಚುನಾವಣೆಯಲ್ಲಿ ಶಿವಸೇನೆಯ ಪ್ರಮುಖ ಸಂಸದರಾಗಿದ್ದಾರೆ. ನಿರಂತರ 5 ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವು ಪಡೆದಿದ್ದರು. ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಯವತ್ಮಾಲ್ – ವಾಶಿಂ ಕ್ಷೇತ್ರದಿಂದ ಸ್ಪರ್ಧಿಸಿದ ಅವರು ಕಾಂಗ್ರೆಸ್ ಅಭ್ಯರ್ಥಿ ಮಾಣಿಕ್‌ರಾವ್ ಠಾಕ್ರೆ ಅವರನ್ನು ಸೋಲಿಸಿದ ಅವರಿಗೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಸಚಿವ ಸ್ಥಾನ ಸಿಗದಿದ್ದರಿಂದ ಅವರು ಪಕ್ಷದ ಜತೆ ಅಸಮಾಧಾನ ಗೊಂಡಿದ್ದರು.