Advertisement

Bill: ಕ್ರಿಮಿನಲ್‌ ಕಾನೂನುಗಳ ತಿದ್ದುಪಡಿ ವಿಧೇಯಕ ಕುರಿತು ಚರ್ಚೆ

10:46 PM Dec 19, 2023 | Team Udayavani |

ನವದೆಹಲಿ: ಪ್ರತಿಪಕ್ಷಗಳ ಮೂರನೇ ಎರಡರಷ್ಟು ಸಂಸದರ ಅನುಪಸ್ಥಿತಿಯಲ್ಲೇ ಮಂಗಳವಾರ ಕ್ರಿಮಿನಲ್‌ ಕಾನೂನುಗಳ ತಿದ್ದುಪಡಿ ವಿಧೇಯಕಗಳ ಕುರಿತ ಚರ್ಚೆ ಲೋಕಸಭೆಯಲ್ಲಿ ಆರಂಭಗೊಂಡಿದೆ.

Advertisement

ಪರಿಷ್ಕೃತ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷತಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ವಿಧೇಯಕಗಳ ಕುರಿತು ಕಳೆದ ಗುರುವಾರವೇ ಚರ್ಚೆ ಆರಂಭವಾಗಬೇಕಿತ್ತು. ಆದರೆ, ಪ್ರತಿಪಕ್ಷಗಳ ಗದ್ದಲದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಮಂಗಳವಾರ ಈ ಮೂರೂ ವಿಧೇಯಕಗಳ ಕುರಿತು ಚರ್ಚೆ ನಡೆದಿದ್ದು, ಕೆಲವು ಸಂಸದರು “ಈ ವಿಧೇಯಕಗಳು ಶಿಕ್ಷೆಯಲ್ಲ, ನ್ಯಾಯವನ್ನು ಕಲ್ಪಿಸಿಕೊಡಲಿದೆ’ ಎಂದು ವಿಧೇಯಕದ ಪರ ಮಾತನಾಡಿದರೆ, ಇನ್ನು ಕೆಲವರು ವಿಧೇಯಕದಲ್ಲಿನ ಲೋಪಗಳ ಬಗ್ಗೆ ಮಾತನಾಡಿದ್ದಾರೆ.

ಭಾರತೀಯ ದಂಡ ಸಂಹಿತೆಯಲ್ಲಿ ದಂಡದತ್ತಲೇ ಗಮನ ಕೇಂದ್ರೀಕರಿಸಲಾಗಿತ್ತು. ಆದರೆ, ಹೊಸ ವಿಧೇಯಕದಲ್ಲಿ ನ್ಯಾಯ ಒದಗಿಸುವತ್ತ ಆದ್ಯತೆ ನೀಡಲಾಗಿದೆ ಎಂದು ಬಿಜೆಪಿ ನಾಯಕ, ಮಾಜಿ ಸಚಿವ ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ. ಚರ್ಚೆಯಲ್ಲಿ ಪಾಲ್ಗೊಂಡು ಮಾತಾಡಿದ ಬಿಜೆಡಿಯ ಭತೃìಹರಿ ಮೆಹ್ತಾಬ್‌ ಅವರು, ಹೊಸ ವಿಧೇಯಕಗಳು ಕಾನೂನು ಜಾರಿ ಸಂಸ್ಥೆಗಳಿಗೆ ಅತಿಯಾದ ಅಧಿಕಾರವನ್ನು ಕೊಡುತ್ತದೆ. ಪ್ರತಿಪಕ್ಷಗಳನ್ನು ಹಣಿಯಲು ರಾಜಕೀಯ ಅಸ್ತ್ರವನ್ನಾಗಿಯೂ ಇದು ಬಳಕೆಯಾಗುವ ಅಪಾಯವಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next