ಶಿಮ್ಲಾ: ಉತ್ತರ ಭಾರತದಲ್ಲಿ ವಿಶೇಷವಾಗಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಮಳೆಯಿಂದ ಉಂಟಾಗಿರುವ ಅನಾಹುತಗಳು ನಿಧಾನಕ್ಕೆ ಅನಾ ವರಣವಾಗುತ್ತ ಹೋಗುತ್ತಿವೆ. ಹಿಮಾಚಲ ಪ್ರದೇಶದ ಶಿಮ್ಲಾದ ಸಮ್ಮರ್ ಹಿಲ್‌ನಲ್ಲಿ ಇರುವ ಶಿವ ದೇಗುಲದ ಮೇಲೆ ಭೂಕುಸಿತ ಉಂಟಾದ ಸ್ಥಳದಿಂದ ಇದುವರೆಗೆ 13 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಅಲ್ಲಿ ಇನ್ನೂ ಹತ್ತು ಮಂದಿಯ ಮೃತದೇಹ ಇದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಗಿರಿಧಾಮಗಳ ರಾಜ್ಯದಲ್ಲಿ ಮಳೆಯಿಂದಾಗಿ ಅಸುನೀಗಿದವರ ಒಟ್ಟು ಸಂಖ್ಯೆ 66ಕ್ಕೆ ಏರಿದೆ. ಫಗ್ಲಿ ಎಂಬಲ್ಲಿಂದ ಐದು, ಕೃಷ್ಣ ನಗರ ಎಂಬಲ್ಲಿಂದ 2 ಮೃತದೇಹಗಳನ್ನು ಮಣ್ಣಿನ ಅಡಿಯಿಂದ ಹೊರತೆಗೆಯಲಾಗಿದೆ.
ಭಾರತೀಯ ಹವಾಮಾನ ಇಲಾಖೆ ನೀಡಿದ ಮುನ್ನೆ ಚ್ಚರಿಕೆ ಪ್ರಕಾರ, ಇನ್ನೂ ಎರಡು ದಿನಗಳ ಕಾಲ ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆ ಯಾಗ ಲಿದೆ. ಈ ಹಿನ್ನೆಲೆಯಲ್ಲಿ ಮತ್ತಷ್ಟು ಭೂಕುಸಿತ, ಪ್ರವಾಹ ಉಂಟಾಗುವ ಸಾಧ್ಯತೆ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.
800 ಮಂದಿ ಪಾರು: ಒಂದು ವಾರದಿಂದ ಮಳೆ ಯಿಂದ ಉಂಟಾದ ಹಾನಿಯಲ್ಲಿ ಸರಿ ಸಮಾರು 800 ಮಂದಿಯನ್ನು ರಕ್ಷಿಸಲಾಗಿದೆ ಎಂದು ಹಿಮಾಚಲ ಪ್ರದೇಶ ಸಿಎಂ ಸುಖ್ವೀಂದರ್ ಸಿಂಗ್ ಸುಖು ಹೇಳಿ ದ್ದಾರೆ. ಅವರು ಕಾಂಗ್ರಾ ಜಿಲ್ಲೆಯಲ್ಲಿ ಮಳೆ-ಪ್ರವಾಹ ದಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದರು. ರಭಸದಿಂದ ಸುರಿದ ಮಳೆ ಯಿಂದಾಗಿ ಶಿಮ್ಲಾ ಸುತ್ತಮುತ್ತಲಿನ ಪ್ರದೇಶವೊಂದ ರಲ್ಲಿಯೇ 500ಕ್ಕೂ ಅಧಿಕ ಮರಗಳು ಬುಡಸಮೇತ ಬಿದ್ದಿವೆ. ಕೃಷ್ಣ ನಗರ ಎಂಬಲ್ಲಿ ಮಂಗಳವಾರ ಭೂಕುಸಿತ ಉಂಟಾಗುವುದಕ್ಕೆ ಮೊದಲು 15 ಮನೆ ಗಳಲ್ಲಿ ಇದ್ದವರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು.
ರೈತರಿಗೆ ಸಂಕಷ್ಟ: ಮಳೆ, ಮೇಘಸ್ಫೋಟ, ಪ್ರವಾಹ ದಿಂದಾಗಿ ರೈತಾಪಿ ವರ್ಗದವರಿಗೆ ಕೂಡ ಸಂಕಷ್ಟ ವಾಗಿದೆ. ಕೃಷಿ ಜಮೀನು ನೀರಿನಲ್ಲಿ ಕೊಚ್ಚಿ ಹೋಗು ವುದರ ಜತೆಗೆ ಜಮೀನು ಇರುವವರಿಗೆ ಮತ್ತೂಂದು ರೀತಿಯ ಸಂಕಷ್ಟ ಉಂಟಾಗಿದೆ. ಇರುವ ಕೃಷಿ ಜಮೀನಿಗೆ ಕಲ್ಲು, ಮರಳು ಪ್ರವಾಹದಲ್ಲಿ ಹರಿದು ಬಂದದ್ದು ಬೆಳೆ ಬೆಳೆಯಲು ಕಷ್ಟಕರವಾಗಿರುವ ಸ್ಥಿತಿ ತಂದೊಡ್ಡಿದೆ.
ಉತ್ತರಾಖಂಡದಲ್ಲಿಯೂ ಮಳೆಯಿಂದಾಗಿ ಹಲ ವೆಡೆ ಭೂಕುಸಿತ ಉಂಟಾಗಿದೆ. ಹವಾಮಾನ ಇಲಾಖೆ ನೀಡಿದ ಮುನ್ಸೂಚನೆಯಂತೆ ಆ.19ರವರೆಗೆ ರಾಜ್ಯ ದಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಗಳಿವೆ. ಜೋಶಿಮಠ ಮತ್ತು ಇತರ ಸ್ಥಳಗಳಲ್ಲಿ ಮನೆಗಳು ಕುಸಿದು ಹೋಗಿವೆ.