Advertisement

ಇಂಡೋನೇಷ್ಯಾ ರಕ್ಕಸ ಅಲೆಗಳ ಸುನಾಮಿ ಹೊಡೆತ;ಸಾವಿನ ಸಂಖ್ಯೆ 400

02:50 PM Sep 29, 2018 | Sharanya Alva |

ಜಕಾರ್ತಾ:ಇಂಡೋನೇಷ್ಯಾದ ಸುಮಾತ್ರಾದ ಸಮುದ್ರಳಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಎದ್ದಿದ್ದ ಭಾರೀ ಸುನಾಮಿಗೆ ಸಾವನ್ನಪ್ಪಿದವರ ಸಂಖ್ಯೆ 400ಕ್ಕೆ ಏರಿಕೆಯಾಗಿದ್ದು, ನೂರಾರು ಜನರು ನಾಪತ್ತೆಯಾಗಿದ್ದಾರೆಂದು ಮಾಧ್ಯಮದ ವರದಿ ತಿಳಿಸಿದೆ.

Advertisement

ಸುನಾಮಿ ಹೊಡೆತದಿಂದ ಗಾಯಗೊಂಡವರ ಶುಶ್ರೂಷೆಗಾಗಿ ಆಸ್ಪತ್ರೆಗಳಲ್ಲಿಯೂ ತೊಡಕು ಉಂಟಾಗಿದ್ದು, ಸುನಾಮಿ ಅಪ್ಪಳಿಸಿದ ಸ್ಥಳಕ್ಕೆ ತಲುಪಲು ರಕ್ಷಣಾ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ವರದಿ ಹೇಳಿದೆ.

ರಾಷ್ಟ್ರೀಯ ವಿಪತ್ತು ಏಜೆಸ್ಸಿ ಅಧಿಕಾರಿಗಳ ಪ್ರಕಾರ, ಸಾವಿನ ಸಂಖ್ಯೆ 384ಕ್ಕೇರಿದೆ. ಇವರೆಲ್ಲರೂ ಸುನಾಮಿ ಅಪ್ಪಳಿಸಿದ ಪಾಲೂ ನಗರದವರಾಗಿದ್ದಾರೆ. ಆದರೆ ಸಾವಿನ ಸಂಖ್ಯೆ ಹೆಚ್ಚಳವಾಗಲಿದೆ ಎಂದು ತಿಳಿಸಿದೆ.

ನಗರದಲ್ಲಿರುವ ಮನೆಗಳಲ್ಲಿ ಸುಮಾರು 3,50,000 ಜನರಿದ್ದು, ಸುನಾಮಿ ಹೊಡೆತಕ್ಕೆ ಮೃತದೇಹಗಳು ಕಡಲ ಕಿನಾರೆಯಲ್ಲಿ ಬಿದ್ದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಶುಕ್ರವಾರ ಸಮುದ್ರಾಳದಿಂದ ಬರೋಬ್ಬರಿ 18 ಅಡಿ ಎತ್ತರದಲ್ಲಿ ಅಲೆಗಳು ಬಂದು ದಡಕ್ಕೆ ಅಪ್ಪಳಿಸಿದ್ದವು. ಸುಮಾತ್ರಾ ಸಮುದ್ರದ ಆಳದಲ್ಲಿ ಭಾರೀ ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 7.5ರಷ್ಟು ತೀವ್ರತೆ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next