Advertisement
ಇದಕ್ಕೂ ಮುನ್ನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮಾಡಿ, ಹನುಮಂತರಾಯಪ್ಪ ಹಾಗೂ ರಂಗಪ್ಪ ಸೇರಿದಂತೆ ಇಬ್ಬರು ಸಾವನ್ನಪ್ಪಿರುವುದಾಗಿ ಖಚಿತಪಡಿಸಿದ್ದರು.
ಇದೀಗ ಬಂದ ಸುದ್ದಿ ಪ್ರಕಾರ, ಕೊಲಂಬೋಕ್ಕೆ ಪ್ರವಾಸಕ್ಕೆ ತೆರಳಿದ್ದ 7 ಮಂದಿ ಜೆಡಿಎಸ್ ಮುಖಂಡರಲ್ಲಿ, ಬೆಂಗಳೂರಿನ 8ನೇ ಮೈಲಿ ನಿವಾಸಿ ಹನುಮಂತರಾಯಪ್ಪ, ವಿದ್ಯಾರಣ್ಯಪುರ ನಿವಾಸಿ ರಂಗಪ್ಪ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ಇಬ್ಬರ ಸಾವು ಮಾತ್ರ ಅಧಿಕೃತ ಎಂದು ಗೃಹಸಚಿವ ಎಂಬಿ ಪಾಟೀಲ್ ಹೇಳಿದ್ದು, ಉಳಿದವರ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ವಿದೇಶಾಂಗ ಇಲಾಖೆಯಿಂದ ಬರಬೇಕಾಗಿದೆ ಎಂದು ತಿಳಿಸಿದ್ದಾರೆ.
Related Articles
Advertisement
ಬೆಂಗಳೂರಿನಿಂದ ತೆರಳಿದ್ದ ಜೆಡಿಎಸ್ ಮುಖಂಡರು ಕೊಲಂಬೋದ ಶಾಂಗ್ರೀಲಾ ಹೋಟೆಲ್ ನಲ್ಲಿ ಉಳಿದುಕೊಂಡಿದ್ದರು ಎಂದು ವರದಿ ತಿಳಿಸಿದೆ. ಸುರತ್ಕಲ್ ಮೂಲದ ಮಹಿಳೆ ರಝೀನಾ(58ವರ್ಷ) ಸೇರಿದಂತೆ ಒಟ್ಟು 5 ಮಂದಿ ಕನ್ನಡಿಗರು ಸಾವನ್ನಪ್ಪಿದ್ದಾರೆ.
ಶ್ರೀಲಂಕಾದಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 290ಕ್ಕೆ ಏರಿದ್ದು, ಸುಮಾರು 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಲಂಕಾ ಕನ್ನಡಿಗರ ಸಾವಿನ ಕುರಿತು ಗೃಹಸಚಿವ ಎಂಬಿ ಪಾಟೀಲ್:
ಶ್ರೀಲಂಕಾ ಸರಣಿ ಬಾಂಬ್ ಸ್ಫೋಟದಲ್ಲಿ ಇಬ್ಬರು ಕನ್ನಡಿಗರು ಸಾವನ್ನಪ್ಪಿರುವ ಬಗ್ಗೆ ಖಚಿತವಾಗಿದೆ. ಉಳಿದವರ ಬಗ್ಗೆ ಇನ್ನೂ ವಿದೇಶಾಂಗ ಇಲಾಖೆಯಿಂದ ಮಾಹಿತಿ ಬಂದಿಲ್ಲ ಎಂದು ಗೃಹಸಚಿವ ಎಂಬಿ ಪಾಟೀಲ್ ವಿಜಯಪುರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದ್ದರು.