Advertisement

ಕಂದಕಕ್ಕೆ ಬಿದ್ದು ಕಾಡಾನೆ ಸಾವು

12:26 PM May 04, 2018 | Team Udayavani |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ಆಹಾರ ಅರಸುತ್ತಾ ಬಂದಿದ್ದ ಕಾಡಾನೆಯೊಂದು ಇಲಾಖೆ ತೋಡಿದ್ದ ಕಂದಕದಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ದಮ್ಮನಕಟ್ಟೆ ಹಾಡಿಯ ಬಳಿಯಲ್ಲಿ ನಡೆದಿದೆ.

Advertisement

ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಡಿ.ಬಿ.ಕುಪ್ಪೆ ವಲಯಕ್ಕೆ ಸೇರಿದ ದಮ್ಮನಕಟ್ಟೆ ಹಾಡಿಬಳಿಯ ಕಂದಕದಲ್ಲಿ ಆನೆ ಸಿಲುಕಿ ಸಾವನ್ನಪ್ಪಿದೆ. ಸುಮಾರು 60-65 ವರ್ಷದ ಇಳಿ ವಯಸ್ಸಿನ ಆನೆಯು ಕಂದಕ ಇಳಿದು ಕಾಡು ಸೇರಲು ದಾಟುತ್ತಿದ್ದ ವೇಳೆ ಆಯತಪ್ಪಿ ಬಿದ್ದು,

ಉದ್ದನೆ ಎರಡು ದಂತಗಳು ನೆಲಕ್ಕೆ ಹೂತುಕೊಂಡು, ಕಾಲುಗಳು ಸಿಲುಕಿಕೊಂಡಿದ್ದರಿಂದಾಗಿ ಮೇಲೇಳಲಾಗದೆ ಹೃದಯಾಘಾತವಾಗಿ ಮೃತಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಅಪರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಜಗತ್‌ರಾಂ, ಎಸಿಎಫ್ ಪೂವಯ್ಯ ಪರಿಶೀಲಿಸಿದರು. ಆರ್‌ಎಫ್ಒಗಳಾದ ವಿನಯ್‌ ಹಾಗೂ ಸುಬ್ರಹ್ಮಣ್ಯ ಇದ್ದರು.

ಆನೆ ಸಾವನ್ನಪ್ಪಿದ ವಿಷಯ ಹರಡುತ್ತಿದ್ದಂತೆ ಹಾಡಿ ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು. ಜೆಸಿಬಿ ಮೂಲಕ ಆನೆಯನ್ನು ಕಂದಕದಿಂದ ಮೇಲೆತ್ತಲಾಯಿತು. ಗ್ರಾಮಸ್ಥರ ಮನವಿ ಮೇರೆಗೆ ಮಂಜೇಗೌಡರು ಸಲಗಕ್ಕೆ ಸಾಂಪ್ರದಾಯಿಕ ಪೂಜೆ ನೆರವೇರಿಸಿದರು. ಪಶು ವೈದ್ಯ ಡಾ.ಮುಜೀಬ್‌ ರೆಹಮಾನ್‌ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ದೂರದ ಕಾಡಿನೊಳಗೆ ಸುಟ್ಟು ಹಾಕಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next