Advertisement

ಅರಣ್ಯಾಧಿಕಾರಿಯಿಂದ ಮಾರಣಾಂತಿಕ ಹಲ್ಲೆ

02:19 PM Sep 30, 2017 | Team Udayavani |

ಬೆಳ್ತಂಗಡಿ: ಬೀಟೆ ಮರ ಕಳವು ಪ್ರಕರಣಕ್ಕೆ ಸಂಬಂಧಿಸಿ ಅಮಾಯಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಿ ಉಜಿರೆ ವಲಯದ ಉಪ ವಲಯ ಅರಣ್ಯಾಧಿಕಾರಿಯ ಅಮಾನತಿಗೆ ಗುರುವಾರ ಸಾರ್ವಜನಿಕರು ಆಗ್ರಹಿಸಿದರು.

Advertisement

ಇಲ್ಲಿನ ಅರಣ್ಯ ಇಲಾಖೆ ಕಚೇರಿ ಎದುರು ದಿಢೀರ್‌ ಪ್ರತಿಭಟನೆ ನಡೆಸಿದ್ದು ಪಕ್ಷಭೇದ ಮರೆತು ನಾಯಕರು ಹಾಜರಾಗಿ ಪ್ರತಿಭಟನೆಗೆ ಬೆಂಬಲ ಕೊಟ್ಟರು. ಸೆ.26ರಂದು ರಾತ್ರಿ ಉಪ ವಲಯ ಅರಣ್ಯಾಧಿಕಾರಿ ಕೀರ್ತನ್‌ ಶೆಟ್ಟಿ ಅವರು ಪುದುವೆಟ್ಟಿನ ಕಮಲ್‌ದಾಸ್‌  ಅವರನ್ನು ಕೂಡಿ ಹಾಕಿ ದೊಣ್ಣೆಯಿಂದ ಹಿಂಭಾಗಕ್ಕೆ ಹಲ್ಲೆ ನಡೆಸಿದ್ದಾರೆ. ಅನಂತರ ಅವರು ಆರೋಪಿಯಲ್ಲ ಎಂದು ಮರಳಿ ಕಳುಹಿಸಿದ್ದಾರೆ. ಗುರುವಾರ ತೀವ್ರ ಅಸ್ವಸ್ಥರಾದ ಕಮಲ್‌ದಾಸ್‌ ಅವರು ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಪ್ರಮುಖ ಅಂಗಾಂಗಗಳಿಗೆ  ಹಾನಿಯಾಗಿದೆ ಎಂದು ದೂರಲಾಗಿದೆ.

ಗ್ರಾಮಸ್ಥರು, ಸಾರ್ವಜನಿಕರು ಈ ವಿಷಯ ತಿಳಿದು ಅರಣ್ಯ ಇಲಾಖೆ ಕಚೇರಿ ಎದುರು ಜಮಾಯಿಸಿದರು. ಕೀರ್ತನ್‌ ಶೆಟ್ಟಿ ಅವರನ್ನು   ಸಂಜೆಯೊಳಗೆ ಅಮಾನತು ಮಾಡದಿದ್ದರೆ ಕಚೇರಿಗೆ ಬೀಗ ಜಡಿಯುವ ಬೆದರಿಕೆ ಹಾಕಿದರು. ಈ ಸಂದರ್ಭ  ವಲಯ ಅರಣ್ಯಾಧಿಕಾರಿ ಸುಬ್ಬಯ ನಾಯ್ಕ ಜತೆ ಮಾತಿನ ಜಟಾಪಟಿ  ನಡೆಯಿತು. ಸರ್ಕಲ್‌ ಇನ್ಸ್‌ಪೆಕ್ಟರ್‌ ನಾಗೇಶ್‌ ಕದ್ರಿ, ಎಎಸ್‌ಐಗಳಾದ ಕರುಣಾಕರ್‌, ಕಲೈಮಾರ್‌ ಹಾಗೂ ಇತರ ಸಿಬಂದಿಗಳು ಸ್ಥಳಕ್ಕೆ ಆಗಮಿಸಿದರು. ಕೀರ್ತನ್‌ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಇದೇ ಆಧಾರದಲ್ಲಿ ಅಮಾನತಿಗೆ ಮೇಲಧಿಕಾರಿಗಳಿಗೆ ಬರೆದುಕೊಳ್ಳಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಪ್ರತಿಭಟನಕಾರರಿಗೆ ತಿಳಿಸಿದರು.

ಜಿ.ಪಂ. ಸದಸ್ಯ ಶೇಖರ್‌ ಕುಕ್ಕೇಡಿ, ತಾ.ಪಂ. ಸದಸ್ಯ ವಿಜಯ ಗೌಡ, ಪ್ರವೀಣ್‌ ಗೌಡ, ಎಪಿಎಂಸಿ ಸದಸ್ಯ ಅಬ್ದುಲ್‌ ಗಫೂರ್‌, ಬಿಜೆಪಿ ಮುಖಂಡರಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ, ವಿಜಯ್‌ ಅತ್ತಾಜೆ, ಕಾಂಗ್ರೆಸ್‌ ಮುಖಂಡರಾದ ಅಭಿನಂದನ್‌ ಹರೀಶ್‌ ಕುಮಾರ್‌, ಪ್ರಭಾಕರ ಪೂಜಾರಿ ಧರ್ಮಸ್ಥಳ, ರಾಯ್‌ ಜೋಸೆಫ್‌, ಬಿ.ಕೆ. ವಸಂತ್‌, ವಸಂತ ಪುದುವೆಟ್ಟು, ಸಿಪಿಐಎಂ ಮುಖಂಡ ಶೇಖರ್‌ ಲಾೖಲ, ಮುಂಡಾಜೆ ಪಂಚಾಯತ್‌ ಸದಸ್ಯ ಅಬ್ದುಲ್‌ ಅಜೀಜ್‌, ದಲಿತ ಮುಖಂಡ ನಾಗರಾಜ್‌ ಲಾೖಲ ಮೊದಲಾದವರು  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next