Advertisement
ಅಪರಾಧಿ ಪ್ರಶಾಂತ್ ನಿಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಓದುತ್ತಿದ್ದ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ಅವರು ಭಾವುಕರಾದರು. ಬಳಿಕ ತಮ್ಮ ಕೈಯಲ್ಲಿದ್ದ ಪೆನ್ ಅನ್ನು ಎಸೆದಿದ್ದರು. ಖಂಡೇರಿ ಅವರು ಮುಂದಿನ ವರ್ಷ ನಿವೃತ್ತರಾಗುತ್ತಿದ್ದು, ತನ್ನ ಸೇವಾವಧಿಯ ಕೊನೆಯಲ್ಲಿ ಇಂತಹದ್ದೊಂದು ತೀರ್ಪು ನೀಡುವ ಪ್ರಸಂಗ ಒದಗಿ ಬಂದಿತ್ತಲ್ಲ ಎಂದು ಭಾವುಕರಾಗಿದ್ದರು.
Related Articles
Advertisement
ಏನಿದು ಘಟನೆ:
ಕೋಟೇಶ್ವರ ಸಮೀಪದ ಗೋಪಾಡಿ ಗ್ರಾಮದ ಪಡುಗೋಪಾಡಿ ಸಮುದ್ರ ಕಿನಾರೆ ಸಮೀಪದ ಲಿಂಗಜ್ಜಿ ಮನೆ ನಿವಾಸಿಯಾಗಿದ್ದ 7 ತಿಂಗಳ ಗರ್ಭಿಣಿ ಇಂದಿರಾ ಎಂಬವರನ್ನು 2015ರ ಏಪ್ರಿಲ್ 11ರಂದು ಅತ್ಯಾಚಾರ ಎಸಗಿ ಬರ್ಬರವಾಗಿ ಪ್ರಶಾಂತ್ ಕೊಲೆ ಮಾಡಿದ್ದ.
ಇಂದಿರಾ ಪುಟ್ಟ ಮಗುವಿನೊಂದಿಗೆ ಮನೆಯಲ್ಲಿದ್ದಾಗ ನೀರು ಕೇಳುವ ನೆಪದಲ್ಲಿ ಆರೋಪಿ ಪ್ರಶಾಂತ್ ಮನೆಯೊಳಗೆ ನುಗ್ಗಿದ್ದ. ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದು, ಆಕೆಯ ಮೈಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ.
ಪ್ರಕರಣವನ್ನು ದಾಖಲಿಸಿಕೊಂಡಿದ್ದ ಕುಂದಾಪುರ ಪೊಲೀಸರು ಪ್ರಶಾಂತ್ ಮೊಗವೀರನನ್ನು ಏ.12ರಂದು ವಶಕ್ಕೆ ತೆಗೆದುಕೊಂಡಿದ್ದರು. ಈ ಪ್ರಕರಣದ ಗಂಭೀರತೆಯ ಹಿನ್ನೆಲೆಯಲ್ಲಿ ಮೃತ ಮಹಿಳೆಯ ಕುಟುಂಬಸ್ಥರ ಕೋರಿಕೆ ಮೇರೆಗೆ ಕುಂದಾಪುರದ ಹಿರಿಯ ವಕೀಲ ರವಿಕಿರಣ್ ಮುರ್ಡೇಶ್ವರ ಅವರನ್ನು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ ನೇಮಿಸಲಾಗಿತ್ತು. ಪ್ರಕರಣದ ತೀರ್ಪು ಹೊರಬೀಳುತ್ತಿದ್ದಂತೆಯೇ ವಕೀಲ ರವಿಕಿರಣ್ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿತ್ತು.