ಮೂಲ್ಕಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಅಡಿಭಾಗದಲ್ಲಿ ಭಾರೀ ಗಾತ್ರದ ಹೊಂಡವೊಂದು ಸೃಷ್ಟಿಯಾಗಿ ಅಪಾಯದ
ಪರಿಸ್ಥಿತಿ ನಿರ್ಮಾಣವಾಗಿದೆ.
ಬಸ್ ನಿಲ್ದಾಣದಿಂದ ಕೇವಲ ಹತ್ತು ಮೀಟರ್ ದೂರದಲ್ಲಿ ಉಡುಪಿ ಕಡೆಗೆ ಸಂಚರಿಸುವಾಗ ಈ ಹೊಂಡ ಸೃಷ್ಟಿಯಾಗಿದ್ದು, ಅದರ ಮೇಲೆ ವಾಹನ ಸಾಗಿದರೆ ಉರುಳಿ ಬೀಳುವ ಅಪಾಯ ಎದುರಾಗಿದೆ. ರಸ್ತೆಯಿಂದ ಸ್ವಲ್ಪ ಬದಿಗೆ ಸರಿದರೂ ದೊಡ್ಡ ಅಪಘಾತ ಸಂಭವಿಸಲಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ, ಅದೂ ಕೂಡ ನಗರ ಭಾಗದಲ್ಲೇ ಇಂಥ ಹೊಂಡ ಸೃಷ್ಟಿಯಾಗಿದ್ದರೂ ಇಲಾಖೆಯ ಅಧಿಕಾರಿಗಳು ಮೌನ ವಹಿಸುತ್ತಿರುವುದು ಆಶ್ಚರ್ಯ ಮೂಡಿಸುತ್ತಿದೆ.
ಈ ಬಗ್ಗೆ ಜನರು ಎಚ್ಚರಿಸಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಸರ್ವಿಸ್ ರಸ್ತೆ ಕಾಮಗಾರಿ ಸಂದರ್ಭ ಇದನ್ನೂ ಸರಿಪಡಿಸಲಾಗುವುದು ಎಂಬ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಈ ಹೊಂಡದಿಂದಾಗಿ ಸಂಭಾವ್ಯ ದುರಂತಕ್ಕೂ ಮೊದಲು ಅಧಿಕಾರಿಗಳು ಇದನ್ನು ದುರಸ್ತಿಪಡಿಸಬೇಕು ಎಂಬ ಆಗ್ರಹ
ಸಾರ್ವಜನಿಕರದ್ದು.