Advertisement

ಬಳ್ಳಾರಿಯ ಯೋಧ ಹರಿದ್ವಾರದಲ್ಲಿ ಸಾವು

11:16 PM Jun 29, 2019 | Lakshmi GovindaRaj |

ಹರಪನಹಳ್ಳಿ: ಹರಿದ್ವಾರದಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕು ಹಲುವಾಗಲು ಗ್ರಾಮದ ಯೋಧನೋರ್ವ ಮೃತಪಟ್ಟಿದ್ದಾನೆ. ಕೇಂದ್ರೀಯ ಕೈಗಾರಿಕಾ ಭದ್ರತಾ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಿಪ್ಪನಹಳ್ಳಿ ಬಸವರಾಜ್‌ (29) ಗುರುವಾರ ಹರಿದ್ವಾರದಲ್ಲಿ ಮೃತಪಟ್ಟಿದ್ದು, ಭಾನುವಾರ ಸ್ವ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Advertisement

ಹಲುವಾಗಲು ಗ್ರಾಮದ ಬಸವರಾಜ್‌ ಸಿಎಸ್‌ಇಎಫ್‌ನಲ್ಲಿ ನೌಕರಿಗೆ ಸೇರಿ 6 ವರ್ಷವಾಗಿತ್ತು. ಗುರುವಾರ ತಡರಾತ್ರಿ 1 ಗಂಟೆ ಸುಮಾರಿಗೆ ಜೀಪ್‌ ಅಪಘಾತದಲ್ಲಿ ಬಸವರಾಜ್‌ ನಿಧನರಾದ ವಿಷಯ ಕುಟುಂಬದವರಿಗೆ ತಿಳಿದಿದೆ. ಮೃತ ಬಸವರಾಜ್‌ ಅವರಿಗೆ ತಂದೆ, ತಾಯಿ, ಇಬ್ಬರು ಸಹೋದರರು, ಓರ್ವ ಸಹೋದರಿ ಇದ್ದಾರೆ.

ಯೋಧನ ಅಂತ್ಯ ಸಂಸ್ಕಾರವನ್ನು ಅವರ ಜಮೀನಿನಲ್ಲಿ ನೆರವೇರಿಸಲು ಕುಟುಂಬದವರು ನಿರ್ಧರಿಸಿದ್ದಾರೆ. ಇದಕ್ಕೂ ಮೊದಲು ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಇಡಲಾಗುವುದು. ಭಾನುವಾರ ಮಧ್ಯಾಹ್ನ ಗ್ರಾಮಕ್ಕೆ ಮೃತ ದೇಹ ಬರುವ ನಿರೀಕ್ಷೆಯಿದೆ ಎಂದು ಡಿವೈಎಸ್ಪಿ ನಾಗೇಶ್‌ ಐತಾಳ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next