Advertisement

ಹೊಟ್ಟೆನೋವು, ಶ್ವಾಸಕೋಶ ಸಮಸ್ಯೆಯಿಂದ ಯುವಕ ಸಾವು

08:52 AM Apr 15, 2020 | mahesh |

ಸುರತ್ಕಲ್‌: ಸುರತ್ಕಲ್‌ ಸಮೀಪದ ಬಂಗ್ಲೆಗುಡ್ಡೆ ನಿವಾಸಿ ಯುವಕನೋರ್ವ ಉಸಿರಾಟ, ಹೊಟ್ಟೆನೋವಿನಿಂದ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.

Advertisement

ಉತ್ತರ ಭಾರತದ ಮೂಲದ 27 ವರ್ಷದ ಯುವಕ ಕೆಲವು ದಿನದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದ. ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಪಡೆದಿದ್ದ. ಆದರೆ ಹೊಟ್ಟೆನೋವು ತೀವ್ರಗೊಂಡಾಗ ಖಾಸಗೀ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಮಾಡಿಸಿದ್ದ ಎನ್ನಲಾಗಿದೆ. ಮಂಗಳವಾರ ಹೊಟ್ಟೆನೋವು ತೀವ್ರಗೊಂಡು ಮನೆಯಲ್ಲಿ ಕುಸಿದು ಬಿದ್ದಾಗ ಮನೆಮಂದಿ ತತ್‌ಕ್ಷಣ ಆತನನ್ನು ಆಸ್ಪತ್ರೆಗೆ ಸಾಗಿಸಲು ಮುಂದಾದರು. ಆದರೆ ದಾರಿ ಮದ್ಯೆ ಮೃತಪಟ್ಟಿದ್ದಾನೆ. ಈಗ ಎಲ್ಲೆಡೆ ಕೊರೊನಾ ವೈರಸ್‌ ಹಾವಳಿ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಗಂಟಲು ದ್ರವ ಪರೀಕ್ಷೆ ಮಾಡಲಿದ್ದೇವೆ. ಬುಧವಾರ ವರದಿ ಕೈಸೇರಲಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next