Advertisement

ಹೆರಿಗೆಗೆ ಬಂದಿದ್ದ ಮಹಿಳೆ ಸಾವು: ಪ್ರತಿಭಟನೆ

11:41 AM Sep 04, 2019 | Suhan S |

ಕೋಲಾರ: ಹೆರಿಗೆಗಾಗಿ ಬಂದ ಮಹಿಳೆ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮತ್ತು ವೈದ್ಯೆಯ ಬಂಧನಕ್ಕೆ ಆಗ್ರಹಿಸಿ ನಗರದ ಗಣೇಶ್‌ ಹೆಲ್ತ್ಕೇರ್‌ ಬಳಿ ತಾಲೂಕಿನ ಮುದುವತ್ತಿ ಗ್ರಾಮದ ಜನತೆ ಮೃತದೇಹದೊಂದಿಗೆ ಧರಣಿ ನಡೆಸಿದ ಘಟನೆ ನಡೆಯಿತು.

Advertisement

ತಾಲೂಕಿನ ಮುದುವತ್ತಿನ ಗ್ರಾಮದ ಗರ್ಭಿಣಿ ಸುಧಾ (22) ಮೃತರು. ಕುಟುಂಬ ದವರು ಗರ್ಭಿಣಿ ಸುಧಾ ಅವರನ್ನು ಸೋಮ ವಾರ ಗಣೇಶ್‌ ಹೆಲ್ತ್ ಕೇರ್‌ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು ಎನ್ನಲಾಗಿದೆ, ಮಂಗಳವಾರ ಬೆಳಗಿನ ಜಾವ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣಕ್ಕೆ ವೈದ್ಯೆ ಡಾ.ಲತಾ ಚುಚ್ಚುಮದ್ದು ಕೊಟ್ಟಿದ್ದರು. ನಂತರ ಸುಧಾ ಮೃತಪಟ್ಟಿದ್ದಾರೆ. ಅವರು ಆಸ್ಪತ್ರೆಗೆ ಬರುವು ದಕ್ಕೂ ಮುನ್ನವೇ ಮಗು ಹೊಟ್ಟೆಯಲ್ಲೇ ಸತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಕುಟುಂಬದವರ ಆರೋಪದಂತೆ ವೈದ್ಯೆ ಲತಾ ಅವರು ಅವಧಿ ಮೀರಿದ ಚುಚ್ಚುಮುದ್ದು ನೀಡಿದ ಕಾರಣದಿಂದ ಪತ್ನಿ ಮೃತಪಟ್ಟಿದ್ದಾರೆ. ಮಗು ಸಹ ಹೊಟ್ಟೆಯಲ್ಲೇ ಮೃತಪಟ್ಟಿದೆ. ಪತ್ನಿ ಹಾಗೂ ಮಗುವಿನ ಸಾವಿಗೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ಮೃತರ ಪತಿ ವೆಂಕಟರಾಮ್‌ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಶವ ಪಡೆಯಲು ಸಂಬಂಧಿಕರ ನಕಾರ: ಗರ್ಭಿಣಿ ಸಾವಿಗೆ ಕಾರಣರಾದ ಆರೋಪ ಹೊತ್ತ ವೈದ್ಯೆ ಲತಾ ಹಾಗೂ ಆಸ್ಪತ್ರೆ ಸಿಬ್ಬಂದಿ ಯನ್ನು ಬಂಸುವವರೆಗೂ ಶವ ತೆಗೆದು ಕೊಳ್ಳುವುದಿಲ್ಲ ಪಟ್ಟು ಹಿಡಿದ ಮೃತರ ಸಂಬಂಧಿಕರು, ಆಸ್ಪತ್ರೆ ಎದುರು ಧರಣಿ ನಡೆಸಿದರು.

ಬಳಿಕ ಪೊಲೀಸರು ಶಿಸ್ತುಕ್ರಮದ ಭರವಸೆ ನೀಡಿ ಧರಣಿನಿರತರ ಮನವೊಲಿಸಿದರು. ನಂತರ ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಮೃತದೇಹ ಹಸ್ತಾಂತರಿಸಲಾಯಿತು.

Advertisement

ಆಸ್ಪತ್ರೆಗೆ ಬೀಗಮುದ್ರೆ: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಯಡಿ ಗಣೇಶ್‌ ಹೆಲ್ತ್ ಕೇರ್‌ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಆಸ್ಪತ್ರೆಗೆ ಬೀಗಮುದ್ರೆ ಹಾಕಿದ್ದು, ಆಸ್ಪತ್ರೆಯಲ್ಲಿದ್ದ 15ಕ್ಕೂ ಹೆಚ್ಚು ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್‌ ಹೇಳಿದರು.

ಮೃತ ಸುಧಾ ಅವರ ರಕ್ತದೊತ್ತಡ ಪ್ರಮಾಣ ತುಂಬಾ ಕಡಿಮೆ ಇತ್ತು. ಮಗು ಹೊಟ್ಟೆಯಲ್ಲೇ ಮೃತಪಟ್ಟಿದ್ದರಿಂದ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯಲು ವೈದ್ಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲೇ ಸುಧಾ ಮೃತಪಟ್ಟರು. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಅವರ ಸಾವಿನ ಕಾರಣ ಗೊತ್ತಾಗಲಿದೆ ಎಂದು ಆಸ್ಪತ್ರೆ ಮಾಲಿಕ ಡಾ.ಗಣೇಶ್‌ ಸುದ್ದಿಗಾರರಿಗೆ ತಿಳಿಸಿದರು.

ಪ್ರಕರಣ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ಕುಮಾರ್‌, ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಆಸ್ಪತ್ರೆ ಹಾಗೂ ಆಸ್ಪತ್ರೆಯ ಔಷಧ ಮಾರಾಟ ಮಳಿಗೆಯಲ್ಲಿ ಪರಿಶೀಲನೆ ಮಾಡಿದಾಗ ಅವಧಿ ಮೀರಿದ ಔಷಧ, ಮಾತ್ರೆ ಮಾರುತ್ತಿರುವುದು ಪತ್ತೆಯಾಯಿತು. ಹೀಗಾಗಿ ಅಧಿಕಾರಿಗಳು ಆಸ್ಪತ್ರೆಗೆ ಬೀಗಮುದ್ರೆ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next